Home Uncategorized Avatar The Way of Water: ‘ಕೆಜಿಎಫ್​ 2’ ವರ್ಸಸ್​ ‘ಅವತಾರ್​ 2’: ಮೊದಲ ದಿನದ...

Avatar The Way of Water: ‘ಕೆಜಿಎಫ್​ 2’ ವರ್ಸಸ್​ ‘ಅವತಾರ್​ 2’: ಮೊದಲ ದಿನದ ಟಿಕೆಟ್​ ಬುಕಿಂಗ್​ನಲ್ಲಿ ಯಶ್​ ಚಿತ್ರದ್ದೇ ಮೇಲುಗೈ

11
0
Advertisement
bengaluru

ಜೇಮ್ಸ್​ ಕ್ಯಾಮೆರಾನ್​ ನಿರ್ದೇಶನದ ‘ಅವತಾರ್​: ದಿ ವೇ ಆಫ್​ ವಾಟರ್​’ (Avatar The Way of Water) ಸಿನಿಮಾ ವಿಶ್ವಾದ್ಯಂತ ಮೋಡಿ ಮಾಡುತ್ತಿದೆ. ಸಾವಿರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಕೆ ಆಗಿದೆ. 52 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಅವತಾರ್​ 2’ (Avatar 2) ಚಿತ್ರ ರಿಲೀಸ್​ ಆಗುತ್ತಿದೆ. 2ಡಿ, 3ಡಿ, ಐಮ್ಯಾಕ್ಸ್​ 3ಡಿ, 4ಡಿಎಕ್ಸ್​ ಮುಂತಾದ ವರ್ಷನ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲೂ ಈ ಚಿತ್ರದ ಮೊದಲ ದಿನದ ಟಿಕೆಟ್​ ಬುಕಿಂಗ್​ ಭರ್ಜರಿಯಾಗಿದೆ. ಆದರೆ, ಈ ವಿಚಾರದಲ್ಲಿ ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ದಾಖಲೆಯನ್ನು ಮುರಿಯಲು ಈ ಹಾಲಿವುಡ್​ ಚಿತ್ರಕ್ಕೆ ಸಾಧ್ಯವಾಗಿಲ್ಲ. ಭಾರತದಲ್ಲಿ ಮೊದಲ ದಿನ ಟಿಕೆಟ್​ ಬುಕಿಂಗ್​ ವಿಚಾರದಲ್ಲಿ ‘ಕೆಜಿಎಫ್​ 2’ (KGF 2) ಚಿತ್ರವೇ ಟಾಪ್​ ಸ್ಥಾನ ಉಳಿಸಿಕೊಂಡಿದೆ.

‘ಕೆಜಿಎಫ್​ 2’ ಸಿನಿಮಾ ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ತೆರೆಕಂಡಿತ್ತು. 2022ರ ಏಪ್ರಿಲ್​ 14ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಮೊದಲ ದಿನ ಬರೋಬ್ಬರಿ 80 ಕೋಟಿ ರೂಪಾಯಿ ಮೌಲ್ಯದ ಟಿಕೆಟ್​ ಬುಕಿಂಗ್​ ಆಗಿತ್ತು. ‘ಅವತಾರ್​ 2’ ಚಿತ್ರಕ್ಕೆ ಮೊದಲ ದಿನ ಬುಕಿಂಗ್ ಆಗಿರುವುದು 20 ಕೋಟಿ ರೂಪಾಯಿ ಮೌಲ್ಯದ ಟಿಕೆಟ್​ ಮಾತ್ರ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ‘ಅವತಾರ್​ 2’ ಸಿನಿಮಾ ಬೇರೆಲ್ಲ ಚಿತ್ರಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ.

ಇದನ್ನೂ ಓದಿ: KGF Chapter 2: ವಿಶ್ವದ ಟಾಪ್​ 10 ಚಿತ್ರಗಳ ಪಟ್ಟಿಯಲ್ಲಿ ‘ಕೆಜಿಎಫ್​ 2’; ಹಾಲಿವುಡ್​ ಹೀರೋಗಳಿಗೆ ಯಶ್​ ಪೈಪೋಟಿ

ಒಂದು ಅಂದಾಜಿನ ಪ್ರಕಾರ, ‘ಅವತಾರ್​: ದಿ ವೇ ಆಫ್​ ವಾಟರ್​’ ಸಿನಿಮಾ ಭಾರತದಲ್ಲಿ ಮೊದಲ ದಿನ 40ರಿಂದ 50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲಿದೆ. ನಂತರದ ದಿನಗಳಲ್ಲೂ ಭಾರಿ ಸಂಖ್ಯೆಯಲ್ಲಿ ಟಿಕೆಟ್​ ಬುಕಿಂಗ್​ ಆಗಿದ್ದು, ದಾಖಲೆ ಪ್ರಮಾಣದ ಕಲೆಕ್ಷನ್​ ಆಗುವ ಸುಳಿವು ಸಿಕ್ಕಿದೆ. ಕೆಲವು ಮಲ್ಟಿಪ್ಲೆಕ್ಸ್​ಗಳಲ್ಲಿ ಒಂದು ಟಿಕೆಟ್​ ಬೆಲೆ 2 ಸಾವಿರ ರೂಪಾಯಿ ದಾಟಿದ್ದರೂ ಕೂಡ ಸಿನಿಪ್ರಿಯರು ಬುಕ್​ ಮಾಡುವಲ್ಲಿ​ ಹಿಂದೇಟು ಹಾಕುತ್ತಿಲ್ಲ!

bengaluru bengaluru

ಇದನ್ನೂ ಓದಿ: Avatar 2: ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಅದ್ದೂರಿ ರಿಲೀಸ್​; ಆದರೆ ಮೊದಲ ದಿನವೇ ಪೈರಸಿ ಕಾಟ

ಕೆಲವು ಪೈರಸಿ ವೆಬ್​ಸೈಟ್​ಗಳಲ್ಲಿ ಈ ಚಿತ್ರದ ನಕಲಿ ಪ್ರತಿ ಲಭ್ಯವಾಗಿದೆ. ಇದರಿಂದ ಚಿತ್ರದ ಗಲ್ಲಾಪೆಟ್ಟಿಗೆಗೆ ಸಣ್ಣ ಹೊಡೆತ ಬೀಳಬಹುದು. ಆದರೆ ಇದು 3ಡಿ ಚಿತ್ರವಾದ್ದರಿಂದ ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಮಾತ್ರ ಅಸಲಿ ಮನರಂಜನೆ ಸಿಗಲಿದೆ ಎಂಬ ಕಾರಣಕ್ಕೆ ಪ್ರೇಕ್ಷಕರು ಪೈರಸಿ ಕಾಪಿ ಕಡೆಗೆ ಆಸಕ್ತಿ ತೋರಿಸುತ್ತಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.


bengaluru

LEAVE A REPLY

Please enter your comment!
Please enter your name here