Home ಬಾಗಲಕೋಟ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿರಲಿ : ಗೋವಿಂದ ಕಾರಜೋಳ

ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿರಲಿ : ಗೋವಿಂದ ಕಾರಜೋಳ

93
0

ಬಾಗಲಕೋಟೆ:

ಈ ನೆಲದ ಭಾಷೆ, ಸಂಸ್ಕøತಿ, ಕಲೆ ಸಾಹಿತ್ಯವನ್ನು ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಎಂದು ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ತಿಳಿಸಿದರು.

ತಾಲೂಕಿನ ಶಿರೂರ ಗ್ರಾಮದ ವೀರಶೈವ ಗ್ರಾಮೀಣ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಬಗ್ಗೆ ಕೆಲವು ಚಿಂತಕರು ಆತಂಕ ಮತ್ತು ನೋವುಗಳನ್ನು ವ್ಯಕ್ತಪಡಿಸುತ್ತಿರುವುದು ಅರ್ಥಹೀನವಾಗಿವೆ. ಕನ್ನಡ ಭಾಷೆ ಈ ನೆಲದ ಮಾತೃ ಭಾಷೆಯಾಗಿದ್ದು, ಇದಕ್ಕೆ ಎರಡೂವರೆ ಸಾವಿರ ವರ್ಷದ ಇತಿಹಾಸವಿದೆ. ಈ ಭಾಷೆ ನಶಿಸಿ ಹೋಗಲು ಸಾದ್ಯವೇ ಇಲ್ಲ ಎಂದು ತಿಳಿಸಿದರು.

ಸಾಹಿತಿಗಳು, ಸಮಾಜ ಚಿಂತಕರ ಲೇಖನಿ, ಭಾಷಣಗಳನ್ನು ಕೇಳಿದ್ದು, ಕನ್ನಡ ಭಾಷೆ ಈ ನೆಲದ ಮೇಲೆ ಉಳಿಯುವದಿಲ್ಲ ಎಂದು ಮಾತನಾಡುತ್ತಿದ್ದಾರೆ. ಇತಿಹಾಸ ನೋಡಿದಾಗ ಕನ್ನಡ ಭಾಷೆ ಮತ್ತು ಹಿಂದೂ ಧರ್ಮ ಯಾವತ್ತು ನಶಿಸಿ ಹೋಗಲು ಸಾಧ್ಯವಿಲ್ಲ. 6 ನೂರು ವರ್ಷಗಳ ಕಾಲ ನಮ್ಮ ದೇಶವನ್ನು ಪರಿಕೀಯರು ಆಳಿಹೋಗಿದ್ದಾರೆ. ಬೇರೆ ಭಾಷಿಕರು ನಮ್ಮನ್ನು ಆಳಿದ್ದಾರೆ. ಬ್ರೀಟೀಶರ ಆಳ್ವಿಕೆಯಲ್ಲಿಯೇ ನಮ್ಮ ಭಾಷೆ ನಶಿಸಿ ಹೋಗಿಲ್ಲ. ಬಾಲ್ಕಿಯ ಮಠದಲ್ಲಿ ನೆಲದ ಮಹಡಿಯಲ್ಲಿ ಕನ್ನಡ ಕಲಿಸಿರುವುದನ್ನು ಸ್ಮರಿಸಿದರು.

12ನೇ ಶತಮಾನದ ಶರಣರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸದವರು. ವಚನ ಸಾಹಿತ್ಯ ಓದಿದರೆ ಅರ್ಥವಾಗುತ್ತದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಸಾಹಿತ್ಯ ಓದುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳು ನಡೆಸಬೇಕು. ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿರುವ ಕನ್ನಡ ಪುಸ್ತಕಗಳನ್ನು ಶಾಲೆಗಳಿಗೆ ವಿತರಿಸುವ ಕೆಲಸ ಸಾಹಿತ್ಯ ಪರಿಷತ್ತಿನವರು ಮಾಡಬೇಕು. ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇನ್ನೊಮ್ಮೆ ಹಮ್ಮಿಕೊಳ್ಳುವ ಅಗತ್ಯವಿದ್ದು, ಇದಕ್ಕೆ ಸಾಹಿತ್ಯ ಪರಿಷತ್ತಿನವರು ಈ ಕಾರ್ಯಕ್ಕೆ ಕ್ರಮವಹಿಸಲು ತಿಳಿಸಿದರು.

ಸಾಹಿತಿ ಡಾ.ರಾಜಶೇಖರ ಮಠಮತಿ ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕೋಟೆಸಿರಿ ಸ್ಮರಣ ಸಂಚಿಕೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ‌‌‌ ಶ್ರೀ ನಾರಾಯಣಸಾ ಭಾಂಡಗೆ ಬಿಡುಗಡೆಗೊಳಿಸಿದರು. ವಿವಿಧ ಲೇಖಕರ ಕೃತಿಗಳನ್ನು ಸಹ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಶ್ರೀಮತಿ ಬಾಯಕ್ಕ ಮೇಟಿ, ಉಪಾದ್ಯಕ್ಷ ಮುತ್ತಪ್ಪ ಕೋಮಾರ, ಮಾಜಿ ಸಚಿವ ಎಸ್.ಜಿ.ನಂಜಯ್ಯನಮಠ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ ಸೇರಿದಂತೆ ರಾಜು ಚಿತ್ತವಾಡಗಿ, ವಿನೋದ ಯಡಹಳ್ಳಿ, ಆರ್.ಎಸ್.ತಳೇವಾಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here