ಬೆಂಗಳೂರು:
ಬಿಬಿಎಂಪಿ ವಾರ್ಡ್ಗಳು ೨೪೩ಕ್ಕೆ ಹೆಚ್ಚಳ,ಮೇಯರ್ ಮತ್ತು ಉಪ ಮೇಯರ್ ಅಧಿಕಾರವಾಧಿ೩೦ ತಿಂಗಳು, ವಲಯಗಳ ಸಂಖ್ಯೆ ಏರಿಕೆ, ಈಗಿರುವ ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಒಂದು ಕಿ.ಮೀ. ಸೇರ್ಪಡೆ ಸೇರಿದಂತೆ ಹತ್ತು ಹಲವು ಅಂಶಗಳ ನ್ನೊಳಗೊಂಡ ೨೦೨೦ನೇ ಸಾಲಿನ ಬಿಬಿಎಂಪಿ ವಿಧೇಯಕವನ್ನು ವಿಧಾನಸಭೆಯಲ್ಲಿಂದು ಅಂಗೀಕರಿಸಲಾಯಿತು.
ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ ವಿಧೇಯಕವು ವಿಧಾನಪರಿಷತ್‌ನಲ್ಲಿ ಅಂಗೀಕಾರವಾದರೆ ಬಿಬಿಎಂಪಿ ಇನ್ನು ಮುಂದೆ ಇನ್ನಷ್ಟು ವಿಸ್ತಾರವಾಗಲಿದೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ವಿಧಾನಸಭೆಯಲ್ಲಿಂದು ಕಾನೂನು ಮತ್ತು ಸಂಸದೀಯ ವ್ಯವ ಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯು ಶಿಫಾರಸ್ಸು ಮಾಡಿದ್ದ ೨೦೨೦ನೇ ಸಾಲಿನ ಬಿಬಿಎಂಪಿ ವಿಧೇಯಕವನ್ನು ಮಂಡಿಸಿದರು.
— Big breaking news coming in—
— Thebengalurulive/ಬೆಂಗಳೂರು ಲೈವ್ (@bengalurulive_) December 10, 2020
As expected without any hurdles, the BBMP act (bill) has been passed in the legislative Assembly
Officially: now BBMP has 243 wards
Keep reading https://t.co/FpjHhthnCH#Bangalore #Bengaluru #BBMP #Karnataka @mla_raghu @ArvindLBJP
ಹಾಲಿ ಇರುವ ೧೯೮ ವಾರ್ಡ್ಗಳು ಇನ್ನು ಮುದೆ ೨೪೩ ವಾರ್ಡ್ಗಳಿಗೆ ಏರಿಕೆಯಾಗಲಿದ್ದು,ಜನ ಸಂಖ್ಯೆ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರಕ್ಕನು ಗುಣವಾಗಿ ಹೆಚ್ಚಳ ಮಾಡಲಾಗಿದೆ.ಹಾಲಿ ಇರುವ ಬಿಬಿಎಂಪಿ ವ್ಯಾಪ್ತಿಗೆ ಒಂದು ಕಿ.ಮೀ.ಹೊಸದಾಗಿ ಸೇರ್ಪಡೆಯಾಗಲಿದ್ದು,ಗ್ರಾಮ ಪಂಚಾ ತಿ,ಪಟ್ಟಣ ಪಂಚಾಯ್ತಿ,ಪುರಸಭೆಗಳು ಸಹ ಈ ವ್ಯಾಪ್ತಿಗೆ ಸೇರಲಿದೆ.ಕ್ಷೇತ್ರಗಳ ಪುನರ್ ವಿಂಗಡಣೆಯನ್ನು ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಅಧಿಕಾರ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಬೆಂಗಳೂರು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಗಾತ್ರವೂ ಕೂಡ ವಿಸ್ತಾರವಾಗುತ್ತಿದೆ.ಹೀಗಾಗಿ ಜನರಿಗೆ ಉತ್ತಮ ಆಡಳಿತ ನೀಡುವ ಕಾರಣಕ್ಕಾಗಿ ವಾರ್ಡ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ.ಕೆಲವು ಶಾಸಕರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂದು ಕಿ.ಮೀ. ಆಚೆ ಗ್ರಾಮಗಳಿದ್ದು,ಅವುಗಳನ್ನೂ ಸಹ ಬಿಬಿಎಂಪಿಗೆ ಸೇರ್ಪಡೆ ಮಾಡಬೇಕೆಂಬ ಪ್ರಸ್ತಾವನೆಯನ್ನು ಇಟ್ಟಿದ್ದಾರೆ. ಇದನ್ನು ಕೂಡ ಸೇರ್ಪಡೆ ಮಾಡುವುದಾಗಿ ಹೇಳಿದರು.
ಇನ್ನು ಮುಂದೆ ರಾಜ್ಯಸಭೆ,ಲೋಕಸಭೆ,ವಿಧಾನಸಭೆ,ವಿಧಾನಪರಿಷತ್ ಹಾಗೂ ಪಾಲಿಕೆ ಸೇರಿದಂತೆ ಸದಸ್ಯರು ಇನ್ನು ಮುಂದೆ ಎರಡು ಸದನಗಳಿಗೆ ಸದ್ಯರಾಗುವಂತಿಲ್ಲ.ಆರು ತಿಂಗಳೊಳಗೆ ಯಾವುದಾದರೊಂದು ಸದನದ ಸದಸ್ಯರಾಗಬೇಕು.ಆರು ತಿಂಗಳೊಳಗೆ ತಮಗೆ ಬೇಕಾದ ಸದನವನ್ನು ಅವರೇ ಸೆಕ್ಷನ್ ೪೮ರ ಅಡಿ ಆಯ್ಕೆ ಮಾಡಿಕೊಳ್ಳಲು ಅವರಿಗೆ ನೀಡಲಾಗಿದೆ.
ಬಿಬಿಎಂಪಿಗೆ ಈವರೆಗೆ ೮ ವಲಯಗಳಿದ್ದವು.ಇದನ್ನು ಈಗ ೧೮ ವಲಯಗಳಿಗೆ ಹೆಚ್ಚಳ ಮಾಡಲಾಗಿದೆ.ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಶಾಸಕರೇ ಸಮಿತಿಯ ಅಧ್ಯಕ್ಷರಾಗುವ ಅವಕಾಶ ಕಲ್ಪಿಸಲಾಗಿದೆ.ವಲಯಗಳಿಗೆ ಆಯುಕ್ತರ ಜತೆ ಸರ್ಕಾರದ ಮಟ್ಟದಲ್ಲಿರುವ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮಾದರಿಯಲ್ಲಿ ಓರ್ವ ಅಧಿಕಾರಿಯನ್ನು ನೇಮಕ ಮಾಡಲಾಗುವುದು.ಆಯಾ ವಲಯಗಳಲ್ಲಿ ಸಮಸ್ಯೆಗಳನ್ನು ಚರ್ಚೆ ಮಾಡಿ ಪಾಲಿಕೆಗೆ ಕಳುಹಿಸಿಕೊಡಬೇಕು.ಜತೆಗೆ ಪ್ರತಿ ವಲಯಕ್ಕೂ ಒಂದೊಂದು ಕಾನೂನು ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದರು.
BBMP restructuring bill sails through legislature
— Thebengalurulive/ಬೆಂಗಳೂರು ಲೈವ್ (@bengalurulive_) December 10, 2020
Key administrative changes: Standing committees down from 12 to 8, zones up from 8 to 15https://t.co/Yl4VhNsND3#BENGALURU #Bangalore #Karnataka #BBMP #BBMPAct #BBMPAct2020 #Wardcommittees #Advt #entertainmenttax @mla_raghu
ಇನ್ನು ಮುಂದೆ ಪಾಲಿಕೆಯು ಸೆಕ್ಷನ್ ೧೫೭ರ ಅಡಿ ಜಾಹಿರಾತು ಮತ್ತು ಮನರಂಜನಾ ತೆರಿಗೆ ವಿಧಿಸಬಹುದಾಗಿದೆ.ಕೋವಿಡ್-೧೯ರಿಂದ ಪಾಲಿಕೆಗೆ ತೆರಿಗೆ ಬರುತ್ತಿರಲಿಲ್ಲ.ಹೀಗಾಗಿ ಪಾಲಿಕೆಯೇ ತೆರಿಗೆಯನ್ನು ವಿಧಿಸಬಹುದು.೬೦/೪೦ಮೇಲ್ಪಟ್ಟ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳುವ ವರು ಕಡ್ಡಾಯವಾಗಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಬೇಕು.ಅಲ್ಲದೆ, ಅಪಾಯಕಾರಿ ಗಣಿಯನ್ನು ಸಹ ಗುರುತಿಸಬೆಕು.ಆಯಾ ವಲಯ ಗಳಲ್ಲಿ ವಿಪತ್ತು ನಿರ್ವಹಣೆಯನ್ನು ಪಾಲಿಕೆಯವರೇ ಮಾಡಿಕೊಳ್ಳಬೇಕು.
ಈವರೆಗೆ ಮೇಯರ್ ಅಧಿಕಾರವಧಿ ೧೨ತಿಂಗಳು ಮಾತ್ರ ಇತ್ತು.ಇನ್ನು ಮುಂದೆ ಮೇಯರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾಗು ವವರು ೩೦ತಿಂಗಳು ಅಧಿಕಾರ ಚಲಾಯಿಸಬಹುದು.ಜಿಪಂ ಅಧ್ಯಕ್ಷರ ಮಾದರಿಯಲ್ಲೇ ೩೦ ತಿಂಗಳು ಅವರು ಅಧಿಕಾರಾವಧಿಯಲ್ಲಿ ಇರು ತ್ತಾರೆ.ಜನ ಸಂಖ್ಯೆ ಹಾಗೂ ಬೆಂಗಳೂರು ನಗರ ಬೆಳೆಯುತ್ತಿರುವ ವೇಗವನ್ನು ಗಮದಲ್ಲಿಟ್ಟುಕೊಂಡು ಈ ಕಾಯ್ದೆಯನ್ನು ರಚಿಸಲಾಗಿದೆ.ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡಲು ಅನುಕೂಲವಾಗುತ್ತದೆ ಎಂದು ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ವಿಧೇಯಕದ ಮೇಲೆ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ ಅವರು,ಕೆಲವು ಕಡೆ ನಾಮನಿರ್ದೇಶಿತ ಸದಸ್ಯರು ಎರಡೆರಡು ಕಡೆ ವಿಳಾಸ ಹೊಂದಿರುತ್ತಾರೆ.ಕಳೆದ ಬಾರಿ ನಮ್ಮ ಪಕ್ಷಕ್ಕೆ ಬಹುಮತ ಬಂದರೂ ಕೊನೆ ಕ್ಷಣದಲ್ಲಿ ಬೇರೆ ಬೇರೆಯವರು ಬೆಂಗಳೂರಿನ ವಿಳಾಸ ಕೊಟ್ಟು ಮತದಾನದ ಹಕ್ಕು ಪಡೆದು.ಇದರಿಂದಾಗಿ ನಾವು ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ.ಇನ್ನು ಮುಂದೆ ಒಬ್ಬ ಸದಸ್ಯ ಒಂದೇ ಸ್ಥಳದಲ್ಲಿ ವಿಳಾಸ ಹೊಂದುವಂತೆ ನಿಯಮ ರೂಪಿಸಬೇಕೆಂದು ಸಲಹೆ ಮಾಡಿದರು.ಜತೆಗೆ ಕೆಲವು ವಾರ್ಡ್ಗಳಲ್ಲಿ ಜನಸಂಖ್ಯೆ ವ್ಯತ್ಯಾಸವಾ ಗಿದ್ದು,ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.
ಶಾಸಕ ಮುನಿರತ್ನ ಮಾತನಾಡಿ,ಕೆಲವು ಕಡೆ ರಸ್ತೆಗಳು ಕಿರಿದಾಗಿವೆ.ನನ್ನ ಕ್ಷೇತ್ರವಾದ ಆರ್.ಆರ್.ನಗರ ೪೫ ಕಿ.ಮೀ. ಇದೆ.ಒಂದು ವಾರ್ಡ್ನಲ್ಲಿ ೨೦ಸಾವಿರ ಜನ ಸಂಖ್ಯೆ ಇದ್ದರೆ.ಮತ್ತೊಂದು ವಾರ್ಡ್ನಲ್ಲಿ ೭೦ಸಾವಿರ ಜನರಿದ್ದಾರೆ.ಕೆಲವು ಕಡೆ ರಸ್ತೆಗಳ ಅಗಲೀಕರಣದ ಅಗತ್ಯವಿದೆ.ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.
ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಜಡಿಎಸ್ ಸದಸ್ಯರ ಗೈರು ಹಾಜರಿಯಲ್ಲಿ ವಿಧಾನ ಸಭೆಯಲ್ಲಿ ಧ್ವನಿಮತದ ಮೂಲಕ ಬಿಬಿಎಂಪಿ ವಿಧೇಯಕ ಅಂಗೀಕಾರಗೊಂಡಿತು.