Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ; ಒಂದು ಲಕ್ಷ ಆಸ್ತಿದಾರರಿಗೆ ಭೂ ಗ್ಯಾರಂಟಿ: ಸಿಎಂ ಡಿ.ಕೆ. ಶಿವಕುಮಾರ್
  • ಕರ್ನಾಟಕ
  • ರಾಜಕೀಯ

ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ; ಒಂದು ಲಕ್ಷ ಆಸ್ತಿದಾರರಿಗೆ ಭೂ ಗ್ಯಾರಂಟಿ: ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 9, 2026 6:22 PM 1 minute read
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: “ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿ ದಿನಾಂಕ 10.7.2008 ರ ಪೂರ್ವದಲ್ಲಿ ನಿರ್ಮಿಸಲಾದ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಈ ಹಿಂದಿನ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಕುರಿತಂತೆ ಬಿಡಿಎ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.

“ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 50 ನೇ ವರ್ಷಾಚರಣೆ ಸಂದರ್ಭದಲ್ಲಿ ಆಸ್ತಿ ದಾಖಲೆಗಳಿಲ್ಲದ ಭೂ ಮಾಲಿಕರಿಗೆ ಭೂ ಗ್ಯಾರಂಟಿ ಸೇರಿದಂತೆ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಈ ಸೌಲಭ್ಯ ಕಲಂ 38(ಡಿ) ತಿದ್ದುಪಡಿ ಮೂಲಕ ಈಗಾಗಲೇ ಜಾರಿಗೆ ಬಂದಿದ್ದು, ಡಿಸೆಂಬರ್‌ 17 ರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಎರಡು ವರ್ಷಗಳ ಅವಧಿಯೊಳಗಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳದಿದ್ದರೆ, ಪ್ರಾಧಿಕಾರದ ಭೂಮಿಯಲ್ಲಿರುವ ಅಂತಹ ಕಟ್ಟಡಗಳನ್ನು ತೆರವುಗೊಳಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.

“2008 ಕ್ಕಿಂತ ಮುಂಚೆ ಮನೆ ಕಟ್ಟಿದವರಿಗೆ, ಸುಮಾರು 1 ಲಕ್ಷ ಮಾಲಿಕರಿಗೆ ಆಸ್ತಿ ದೊರಕಿಸಬೇಕು ಎಂಬ ಉದ್ದೇಶದಿಂದ ಹಿಂದಿನ ಸರ್ಕಾರ ಅವಕಾಶ ನೀಡಿತು. 2021ರಲ್ಲಿಯೇ ದರ ನಿಗದಿ ಮಾಡಿತ್ತು. ಆದರೆ ಶುಲ್ಕ ಹೆಚ್ಚಾಯಿತೆಂದು ಕೇವಲ 600 ಜನ ಮಾತ್ರ ಅರ್ಜಿ ಹಾಕಿದ್ದರು. ಆದರೆ ನಾವು ಶುಲ್ಕ ಕಡಿಮೆ ಮಾಡಿ ಇನ್ನೊಂದು ಅವಕಾಶ ನೀಡಿದ್ದೇವೆ. ಕ್ಲೀನ್ ಬಿಡಿಎ, ಪರಿಶುದ್ಧವಾದ ಆಡಳಿತವನ್ನು ಬೆಂಗಳೂರಿಗರಿಗೆ ನೀಡುವ ಉದ್ದೇಶದಿಂದ ಸರ್ಕಾರ ಈ ಸೌಲಭ್ಯವನ್ನು ಜಾರಿಗೊಳಿಸಿದೆ” ಎಂದು ಹೇಳಿದರು.

“ನಿಗದಿತ ಅವಧಿಯ ಒಳಗಾಗಿ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿ, ಈ ಸೌಲಭ್ಯವನ್ನು ಬಳಸಿಕೊಂಡು ಆಸ್ತಿಯ ಹಕ್ಕನ್ನು ಪಡೆದುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ” ಎಂದರು.

“ಮೂಲೆ ನಿವೇಶನ ಹೊರತುಪಡಿಸಿ ಕಟ್ಟಡದೊಂದಿಗಿನ ಭೂಮಿಯ ವ್ಯಾಪ್ತಿ 20×30 ರವರೆಗೆ ಪ್ರಸ್ತುತ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು, 20×30 ಕ್ಕಿಂತ ಹೆಚ್ಚು ಮತ್ತು 30×40 ರವರೆಗೆ ಶೇ.12.5% ರಷ್ಟು, 30×40 ಕ್ಕಿಂತ ಹೆಚ್ಚು ಮತ್ತು 40×60 ರವರೆಗೆ ಶೇ.20% ರಷ್ಟು ಮತ್ತು 40×60 ಕ್ಕಿಂತ ಹೆಚ್ಚು ಮತ್ತು 50×80 ರವರೆಗೆ ಶೇ.25% ರಷ್ಟು ದರವನ್ನು ನಿಗದಿಪಡಿಸಲಾಗಿದೆ. ಇದು ಈ ಹಿಂದಿನ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತ ಶೇ.50ರಷ್ಟು ಕಡಿಮೆಯಾಗಿದೆ” ಎಂದು ಹೇಳಿದರು.

ಪ್ರೋತ್ಸಾಹದಾಯಕ ನಿವೇಶನ ಸೌಲಭ್ಯ

“ಕೆಂಪೇಗೌಡ ಬಡಾವಣೆ ಸೇರಿದಂತೆ ಇತರೆಡೆಗಳಲ್ಲಿ ವ್ಯಾಜ್ಯವಿಲ್ಲದೆ ಸ್ವಇಚ್ಛೆಯಿಂದ ಆಸ್ತಿ ಬಿಟ್ಟು ಕೊಟ್ಟವರಿಗೆ ಒಂದು ಎಕರೆಗೆ 30×40 ನಿವೇಶನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ವಿಶೇಷ ಪ್ರೋತ್ಸಾಹಕವಾಗಿ ನಿವೇಶನ ನೀಡುವ ಕಾರ್ಯ 2014 ರಿಂದ ಬಾಕಿ ಇದ್ದು, 1989 ಕಾನೂನಿನ ಪ್ರಕಾರ ಇದಕ್ಕಾಗಿ ಸೂಕ್ತ ಅರ್ಜಿ ಹಾಕಬೇಕು. ಇದಕ್ಕೆ ಬೆಲೆ ನಿಗದಿ ಮಾಡಲಾಗುವುದು. ಜಮೀನು ನೀಡಿದ ರೈತರ ಉಪಕಾರ ಸ್ಮರಣೆಯಾಗಿ ಅಲ್ಲಿ ನಾವು ವಾಲ್ ಆಪ್ ಗ್ರಾಟಿಟ್ಯೂಡ್ ಹಾಕಿದ್ದೇವೆ. ಇದು ಇಡೀ ದೇಶದ ಇತಿಹಾಸದಲ್ಲಿಯೇ ಮೊದಲು” ಎಂದು ಹೇಳಿದರು.

“ಶಿವರಾಮ ಕಾರಂತ ಬಡಾವಣೆಯಲ್ಲಿ ಜಮೀನು ನೀಡಿದ ರೈತರಿಗೆ ಒಂದೇ ದಿನದಲ್ಲಿ ಸೈಟ್ ಮಂಜೂರಾತಿಯನ್ನು ಪಾರದರ್ಶಕವಾಗಿ ಮಾಡಿರುವುದು ಬಿಡಿಎ ಇತಿಹಾಸದಲ್ಲೇ ಮೊದಲು” ಎಂದರು.

ಅಂಚಿನ ಜಾಗ ಹಂಚಿಕೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಿರುವ ನಿವೇಶನಗಳ ಹಿಂಬದಿಯಲ್ಲಿ ಮತ್ತು ಅಕ್ಕ-ಪಕ್ಕದಲ್ಲಿ ಪ್ರಾಧಿಕಾರಕ್ಕೆ ಸೇರಿರುವ ಅಂಚಿನ ಜಾಗಗಳು (Marginal Land) ಲಭ್ಯವಿದ್ದಲ್ಲಿ, ಅಂಚಿನ ಜಾಗದ ಬಗ್ಗೆ ಹಂಚಿಕೆದಾರರಿಗೆ ಆಸಕ್ತಿಯಿದ್ದಲ್ಲಿ ದಿನಾಂಕ 17.12.2026ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. 600 ಚದರ ಅಡಿವರೆಗೂ ಈ ರೀತಿಯ ಸೈಟ್ ನೀಡಲು ಕಾಯ್ದೆಯಲ್ಲಿ ಅವಕಾಶವಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ” ತಿಳಿಸಿದರು.

ಶುದ್ಧ ಕ್ರಯಪತ್ರ ಮೇಳ

“ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಿ, ಗುತ್ತಿಗೆ ಅವಧಿಯು ಮುಕ್ತಾಯವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಶುದ್ಧ ಕ್ರಯಪತ್ರ ಮೇಳವನ್ನು ಆಯೋಜಿಸಲಾಗಿದೆ. ಸಾಮಾನ್ಯವಾಗಿ ಬಿಡಿಎ ಹಂಚಿಕೆ ಮಾಡುವ ನಿವೇಶನಗಳ ಹತ್ತು ವರ್ಷದ ಗುತ್ತಿಗೆ ಅವಧಿಯಿರುತ್ತದೆ. ಈ ಅವಧಿಯು ಪೂರ್ಣಗೊಂಡ ಬಳಿಕ ನಾಗರಿಕರು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ, ಸದರಿ ನಿವೇಶನಕ್ಕೆ ಶುದ್ಧ ಕ್ರಯಪತ್ರವನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ನಾನಾ ಕಾರಣಗಳಿಂದ ಸುಮಾರು 20 ಸಾವಿರ ಹಂಚಿಕೆದಾರರು ಗುತ್ತಿಗೆ ಅವಧಿ ಪೂರ್ಣಗೊಂಡರೂ ಶುದ್ಧ ಕ್ರಯಪತ್ರವನ್ನು ಮಾಡಿಸಿಕೊಂಡಿರುವುದಿಲ್ಲ. ಹಂಚಿಕೆದಾರರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರ ಮೇಳವನ್ನು ಆಯೋಜಿಸುತ್ತಿದ್ದು, ನಿವೇಶನದ ದಾಖಲಾತಿಗಳೊಂದಿಗೆ ದಿನಾಂಕ 17.12.2026ರೊಳಗೆ ಅರ್ಜಿಯನ್ನು ಸಲ್ಲಿಸಿದರೆ ಅರ್ಜಿಯನ್ನು ಸ್ವೀಕರಿಸಿದ 60 ದಿನಗಳೊಳಗೆ ನಿಯಮಾನುಸಾರ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಕ್ರಮವಹಿಸಲಾಗುವುದು” ಎಂದು ಹೇಳಿದರು.

ಸುಸಜ್ಜಿತ ಕಟ್ಟಡ

“ಬಿಡಿಎ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 1ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಬಹುಪಯೋಗಿ ಪ್ರಾಧಿಕಾರದ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ” ಎಂದು ಅವರು ಹೇಳಿದರು.

ಇನ್ನಷ್ಟು ಸಂಬಂಧಿತ ಸುದ್ದಿಗಳನ್ನು ಓದಿ:

  • ಪ್ರಸ್ತುತ ಎಲ್‌ಇಡಿ ಹಂತದಿಂದ ಕಸವನಹಳ್ಳಿ, ಹೊಸ ಬಿಡಿಎ ಬಡಾವಣೆಗಳು ಹೊರಗೆ; ಪ್ರತ್ಯೇಕ ಯೋಜನೆಗೆ ನಿರೀಕ್ಷೆ

About the Author

The Bengaluru Live

Administrator

Visit Website View All Posts

Post navigation

Previous: ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್

Related Stories

ಉರ್ದು ಅಕಾಡೆಮಿ ಸಮಾರಂಭದ ವೇದಿಕೆಯಲ್ಲಿ ಹಾರ ಧರಿಸಿದ ಸಿಎಂ ಡಿ.ಕೆ. ಶಿವಕುಮಾರ್ ಸ್ಮರಣಿಕೆ ಹಿಡಿದಿರುವ ದೃಶ್ಯ
  • ಕರ್ನಾಟಕ
  • ರಾಜಕೀಯ

ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 9, 2026 6:02 PM
ಸಮಿತಿ ಸಭೆಯ ಕೊಠಡಿಯಲ್ಲಿ ಉದ್ದನೆಯ ಮೇಜಿನ ಸುತ್ತ ಕುಳಿತು ಚರ್ಚಿಸುತ್ತಿರುವ ಅಧಿಕಾರಿಗಳು
  • ಕರ್ನಾಟಕ

ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ 147 ಯೋಜನೆಗಳಿಗೆ ಒಪ್ಪಿಗೆ; ₹6,825 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ.ಬಿ. ಪಾಟೀಲ

The Bengaluru Live November 9, 2026 6:00 PM
ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

E20 ಇಂಧನ ಪರೀಕ್ಷೆ: ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥನಾಲ್ ಇದೆ? ತೈಲ ಕಂಪನಿಗಳಿಗೆ ಕರ್ನಾಟಕ ಸರ್ಕಾರದ ಪ್ರಶ್ನೆ

The Bengaluru Live November 9, 2026 2:54 PM

Latest Post

ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ; ಒಂದು ಲಕ್ಷ ಆಸ್ತಿದಾರರಿಗೆ ಭೂ ಗ್ಯಾರಂಟಿ: ಸಿಎಂ ಡಿ.ಕೆ. ಶಿವಕುಮಾರ್
  • ಕರ್ನಾಟಕ
  • ರಾಜಕೀಯ

ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ; ಒಂದು ಲಕ್ಷ ಆಸ್ತಿದಾರರಿಗೆ ಭೂ ಗ್ಯಾರಂಟಿ: ಸಿಎಂ ಡಿ.ಕೆ. ಶಿವಕುಮಾರ್

November 9, 2026 6:22 PM
ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್ ಉರ್ದು ಅಕಾಡೆಮಿ ಸಮಾರಂಭದ ವೇದಿಕೆಯಲ್ಲಿ ಹಾರ ಧರಿಸಿದ ಸಿಎಂ ಡಿ.ಕೆ. ಶಿವಕುಮಾರ್ ಸ್ಮರಣಿಕೆ ಹಿಡಿದಿರುವ ದೃಶ್ಯ
  • ಕರ್ನಾಟಕ
  • ರಾಜಕೀಯ

ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್

November 9, 2026 6:02 PM
ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ 147 ಯೋಜನೆಗಳಿಗೆ ಒಪ್ಪಿಗೆ; ₹6,825 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ.ಬಿ. ಪಾಟೀಲ ಸಮಿತಿ ಸಭೆಯ ಕೊಠಡಿಯಲ್ಲಿ ಉದ್ದನೆಯ ಮೇಜಿನ ಸುತ್ತ ಕುಳಿತು ಚರ್ಚಿಸುತ್ತಿರುವ ಅಧಿಕಾರಿಗಳು
  • ಕರ್ನಾಟಕ

ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ 147 ಯೋಜನೆಗಳಿಗೆ ಒಪ್ಪಿಗೆ; ₹6,825 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ.ಬಿ. ಪಾಟೀಲ

November 9, 2026 6:00 PM
E20 ಇಂಧನ ಪರೀಕ್ಷೆ: ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥನಾಲ್ ಇದೆ? ತೈಲ ಕಂಪನಿಗಳಿಗೆ ಕರ್ನಾಟಕ ಸರ್ಕಾರದ ಪ್ರಶ್ನೆ ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

E20 ಇಂಧನ ಪರೀಕ್ಷೆ: ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥನಾಲ್ ಇದೆ? ತೈಲ ಕಂಪನಿಗಳಿಗೆ ಕರ್ನಾಟಕ ಸರ್ಕಾರದ ಪ್ರಶ್ನೆ

November 9, 2026 2:54 PM
ಗೌರಿ ಲಂಕೇಶ್, ಕಲಬುರ್ಗಿ, ದಾಭೋಲ್ಕರ್ ಹತ್ಯೆಗಳ ಹಿಂದೆ ಸಂಘದ ನಂಟಿರುವವರು: ಆರು ತಿಂಗಳಲ್ಲಿ ಜೈಲಿಗೆ ಕಳುಹಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿಕೆ ಕೊಚ್ಚಿಯ ಮುಸ್ಲಿಂ ಯೂತ್ ಲೀಗ್ ರ‍್ಯಾಲಿಯಲ್ಲಿ ವೇದಿಕೆಯಲ್ಲಿ ಸಂವಿಧಾನದ ಪ್ರತಿ ಹಿಡಿದು ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ರಾಜಕೀಯ

ಗೌರಿ ಲಂಕೇಶ್, ಕಲಬುರ್ಗಿ, ದಾಭೋಲ್ಕರ್ ಹತ್ಯೆಗಳ ಹಿಂದೆ ಸಂಘದ ನಂಟಿರುವವರು: ಆರು ತಿಂಗಳಲ್ಲಿ ಜೈಲಿಗೆ ಕಳುಹಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿಕೆ

November 9, 2026 12:13 PM
ದೇವನಹಳ್ಳಿ ಹಿಟ್ ಅಂಡ್ ರನ್: ಇಬ್ಬರು ಬೈಕ್ ಸವಾರರು ಸಾವು; ಅರ್ಧ ಗಂಟೆಗೂ ಹೆಚ್ಚು ಕಾಲ ಬೆನ್ನಟ್ಟಿ ಫಾರ್ಚುನರ್ ಚಾಲಕನನ್ನು ಹಿಡಿದ ಪೊಲೀಸರು ದೇವನಹಳ್ಳಿ ಹಿಟ್ ಅಂಡ್ ರನ್‌ನಲ್ಲಿ ಮೃತಪಟ್ಟ ಇಬ್ಬರು ಬೈಕ್ ಸವಾರರ ಅಕ್ಕಪಕ್ಕದ ಭಾವಚಿತ್ರಗಳು
  • ಬೆಂಗಳೂರು

ದೇವನಹಳ್ಳಿ ಹಿಟ್ ಅಂಡ್ ರನ್: ಇಬ್ಬರು ಬೈಕ್ ಸವಾರರು ಸಾವು; ಅರ್ಧ ಗಂಟೆಗೂ ಹೆಚ್ಚು ಕಾಲ ಬೆನ್ನಟ್ಟಿ ಫಾರ್ಚುನರ್ ಚಾಲಕನನ್ನು ಹಿಡಿದ ಪೊಲೀಸರು

November 9, 2026 11:43 AM

ನೀವು ತಪ್ಪಿಸಿಕೊಂಡಿರಬಹುದು

  • ಕರ್ನಾಟಕ
  • ರಾಜಕೀಯ

ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ; ಒಂದು ಲಕ್ಷ ಆಸ್ತಿದಾರರಿಗೆ ಭೂ ಗ್ಯಾರಂಟಿ: ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 9, 2026 6:22 PM
ಉರ್ದು ಅಕಾಡೆಮಿ ಸಮಾರಂಭದ ವೇದಿಕೆಯಲ್ಲಿ ಹಾರ ಧರಿಸಿದ ಸಿಎಂ ಡಿ.ಕೆ. ಶಿವಕುಮಾರ್ ಸ್ಮರಣಿಕೆ ಹಿಡಿದಿರುವ ದೃಶ್ಯ
  • ಕರ್ನಾಟಕ
  • ರಾಜಕೀಯ

ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 9, 2026 6:02 PM
ಸಮಿತಿ ಸಭೆಯ ಕೊಠಡಿಯಲ್ಲಿ ಉದ್ದನೆಯ ಮೇಜಿನ ಸುತ್ತ ಕುಳಿತು ಚರ್ಚಿಸುತ್ತಿರುವ ಅಧಿಕಾರಿಗಳು
  • ಕರ್ನಾಟಕ

ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ 147 ಯೋಜನೆಗಳಿಗೆ ಒಪ್ಪಿಗೆ; ₹6,825 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ.ಬಿ. ಪಾಟೀಲ

The Bengaluru Live November 9, 2026 6:00 PM
ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

E20 ಇಂಧನ ಪರೀಕ್ಷೆ: ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥನಾಲ್ ಇದೆ? ತೈಲ ಕಂಪನಿಗಳಿಗೆ ಕರ್ನಾಟಕ ಸರ್ಕಾರದ ಪ್ರಶ್ನೆ

The Bengaluru Live November 9, 2026 2:54 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ; ಒಂದು ಲಕ್ಷ ಆಸ್ತಿದಾರರಿಗೆ ಭೂ ಗ್ಯಾರಂಟಿ: ಸಿಎಂ ಡಿ.ಕೆ. ಶಿವಕುಮಾರ್
  • ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್
  • ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ 147 ಯೋಜನೆಗಳಿಗೆ ಒಪ್ಪಿಗೆ; ₹6,825 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ.ಬಿ. ಪಾಟೀಲ
  • E20 ಇಂಧನ ಪರೀಕ್ಷೆ: ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥನಾಲ್ ಇದೆ? ತೈಲ ಕಂಪನಿಗಳಿಗೆ ಕರ್ನಾಟಕ ಸರ್ಕಾರದ ಪ್ರಶ್ನೆ
©Copyright 2025 The Bengaluru Live All rights reserved. | MoreNews by AF themes.