Home ಬೆಂಗಳೂರು ನಗರ ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿ ಅತ್ಯಾಧುನಿಕ “ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್” ಅಗ್ನಿಶಾಮವನ್ನು ಪರಿಚಯಿಸಿದ ಬೆಂಗಳೂರು ವಿಮಾನ...

ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿ ಅತ್ಯಾಧುನಿಕ “ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್” ಅಗ್ನಿಶಾಮವನ್ನು ಪರಿಚಯಿಸಿದ ಬೆಂಗಳೂರು ವಿಮಾನ ನಿಲ್ದಾಣ

62
0
Bengaluru airport becomes 1st facility in South Asia to commission Rosenbauer firefighting equipment
Advertisement
bengaluru

ಬೆಂಗಳೂರು:

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸುವ ಅಗ್ನಿ ಅವಘಡವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಇದೇ ಮೊದಲ ಬಾರಿಗೆ “ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್” ಅನ್ನು ಪರಿಚಯಿಸಿದೆ. ಇದು ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಪರಿಚಯಿಸಿದ ಅತ್ಯಾಧುನಿಕ ಅಗ್ನಿಶಾಮಕ ತಂತ್ರಜ್ಞಾನವಾಗಿದೆ.

ಈ ಬಗ್ಗೆ ಮಾತನಾಡಿರುವ ಬಿಐಎಎಲ್ ಸಿಇಒ ಜಯರಾಜ್ ಷಣ್ಮುಗಂ, ಬೆಂಗಳೂರು ವಿಮಾನ ನಿಲ್ದಾಣದ ಸುರಕ್ಷತೆಯ ದೃಷ್ಟಿಯಿಂದ ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್‌ನನ್ನು ಪರಿಚಯಿಸಲಾಗುತ್ತಿದೆ. ಇದು ಯಾವುದೇ ರೀತಿಯ ಅಗ್ನಿ ಅವಘಡವಾದರೂ ಕೂಡಲೇ ಅದನ್ನು ಆರಿಸುವ ಕೆಲಸದಲ್ಲಿ ನಿಪುಣತೆ ಹೊಂದಿದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಅಗ್ನಿಶಾಮಕವನ್ನು ಭಾರತದ ಯಾವುದೇ ವಿಮಾನ ನಿಲ್ದಾಣದ ತಂಡ ಇಲ್ಲಿಗೆ ಆಗಮಿಸಿ ಇದರ ತರಬೇತಿ ಪಡೆಯಲು ಸಹ ಮುಕ್ತ ಅವಕಾಶವನ್ನು ಒದಗಿಸಿಕೊಡಲಾಗಿದೆ.

Bengaluru airport becomes 1st facility in South Asia to commission Rosenbauer firefighting equipment

ವಿಮಾನ ನಿಲ್ದಾಣ ಅಥವಾ ವಿಮಾನಗಳ ಅಪಘಾತದ ಸಂದರ್ಭದಲ್ಲಿ ಹೊತ್ತಿಕೊಳ್ಳುವ ಅಗ್ನಿ ಅವಘಡವನ್ನು ತುರ್ತಾಗಿ ಆರಿಸುವಲ್ಲಿ ಈ ಅತ್ಯಾಧುನಿಕ ಸಿಮ್ಯುಲೇಟರ್ ಕೆಲಸ ಮಾಡಲಿದೆ.

bengaluru bengaluru

ರೋಸನ್‌ಬೌರ್ ಸಿಮ್ಯುಲೇಟರ್‌ನ ಎರಡು ಫ್ಯಾಂಥರ್ ೬ ಟ್ರಕ್‌ಗಳು, ಹಾಗೂ ೮ ಟ್ರಕ್‌ಗಳನ್ನು ಇರಿಸಲಾಗಿದೆ. ಈ ಟ್ರಕ್‌ಗಳಲ್ಲಿ ಎರಡು ಹೈರೀಚ್ ಎಕ್ಸ್ಟೆಂಡೆಬಲ್ ಟರೆಟ್ಸ್ (ಎಚ್‌ಆರ್‌ಇಟಿ)ಯನ್ನು ಒಳಗೊಂಡಿದ್ದು, ಈ ಮಟ್ಟದ ಸುಸಜ್ಜಿತ ಟ್ರಕ್‌ಗಳನ್ನು ದಕ್ಷಿಣ ಏಷ್ಯಾದಲ್ಲಿಯೇ ಯಾವ ವಿಮಾನ ನಿಲ್ದಾಣಗಳು ಒಳಗೊಂಡಿಲ್ಲ ಎಂದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷತೆ ಕಾಯ್ದುಕೊಳ್ಳುವುದು ನಮ್ಮ ಮೊದಲ ಆದ್ಯತೆ. ರೋಸೆನ್‌ಬೌರ್ ಸಿಎಫ್‌ಟಿ ಮೂಲಕ ಕಠಿಣವಾದ ಅಗ್ನಿ ಅವಘಡದ ಸಂದರ್ಭದಲ್ಲಿ ಈ ಸಿಮ್ಯುಲೇಟರ್ ಚಾರ್ತುಯದಿಂದ ಅಗ್ನಿಯನ್ನು ಶಮನ ಮಾಡಲಿದೆ.

ವಿಮಾನ ನಿಲ್ದಾಣದಲ್ಲಿರುವ ಅಗ್ನಿಶಾಮಕ ದಳದವರಿಗೆ ಈ ಸಿಮ್ಯುಲೇಟರ್‌ನನ್ನು ಬಳಸುವ ವಿಧಾನವನ್ನು ತರಬೇತಿ ನೀಡಲಾಗಿದೆ. ಅದರಲ್ಲೂ ಕಮಾಂಡ್ ನಿಯಂತ್ರಕರು, ಮೂಲ ಚಾಲಕರು, ಪೋಸಿಶನಿಂಗ್ ಇನ್ಸಿಡೆಂಟ್ ಕಮಾಂಡರ್‌ಗಳು, ಕ್ಯೂ ಕಮಾಂಡರ್‌ಗಳು ಹಾಗೂ ಅಗ್ನಿಶಾಮಕ ಮುಂಚೂಣಿ ಸಿಬ್ಬಂದಿಗೆ ಈ ತರಬೇತಿಯನ್ನು ಕಡ್ಡಾಯವಾಗಿ ನೀಡಲಾಗುವುದು ಎಂದು ವಿವರಿಸಿದ್ದಾರೆ.

Also Read: Bengaluru airport becomes 1st facility in South Asia to commission Rosenbauer firefighting equipment


bengaluru

LEAVE A REPLY

Please enter your comment!
Please enter your name here