ಒಂಬತ್ತು ವರ್ಷದ ಪವಿತ್ರಳ ಪೋಷಕರ ಪತ್ತೆಗೆ ಬೆಂಗಳೂರು ಮಕ್ಕಳ ರಕ್ಷಣಾ ಘಟಕ ಮನವಿ
ಬೆಂಗಳೂರು: ತಾತ್ಕಾಲಿಕ ಪುನರ್ವಸತಿಗಾಗಿ ಆಕ್ಸಿಲಿಯಮ್ ನವಜೀವನ್, ಜಗಜೀವನ್ ಮಕ್ಕಳ ಪಾಲನಾ ಸಂಸ್ಥೆಗೆ ದಾಖಲಾಗಿರುವ ಒಂಬತ್ತು ವರ್ಷದ ಪವಿತ್ರಳ ಪೋಷಕರು ಅಥವಾ ಸಂಬಂಧಿಕರ ಪತ್ತೆಗೆ ಬೆಂಗಳೂರು ನಗರ ದಕ್ಷಿಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಾರ್ವಜನಿಕರ ನೆರವು ಕೋರಿದೆ.
ಇದುವರೆಗೆ ಬಾಲಕಿಯ ಪೋಷಕರು ಅಥವಾ ಸಂಬಂಧಿಕರು ಯಾರೂ ಭೇಟಿ ನೀಡಿಲ್ಲ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ದಾಖಲೆಗಳ ಪ್ರಕಾರ, ಬಾಲಕಿಯ ಜನ್ಮದಿನಾಂಕ ಜೂನ್ 6, 2017. ತಂದೆಯ ಹೆಸರು ರಾಜು ಮತ್ತು ತಾಯಿಯ ಹೆಸರು ನಾಗಮ್ಮ ಎಂದು ದಾಖಲಾಗಿದೆ. ತಮಿಳು ಮತ್ತು ಕನ್ನಡ ಮಾತನಾಡುವ ಬಾಲಕಿ ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆಕೆಯ ಎತ್ತರ 122 ಸೆಂ.ಮೀ. ಹಾಗೂ ತೂಕ 20 ಕೆ.ಜಿ. ಎಂದು ಪ್ರಕಟಣೆ ತಿಳಿಸಿದೆ.

ಪೋಷಕರ ಕುರಿತು ಮಾಹಿತಿ ದೊರೆತವರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ನಂ.27/17, ಎರಡನೇ ಮಹಡಿ, ಅಕ್ಯ ಸ್ಕೇರ್, 80 ಅಡಿ ವರ್ತುಲ ರಸ್ತೆ, ಪಾಪರೆಡ್ಡಿಪಾಳ್ಯ, ನಾಗರಬಾವಿ 2ನೇ ಹಂತ, ಬೆಂಗಳೂರು ನಗರ ದಕ್ಷಿಣ (ಕೆಂಗೇರಿ) ವಿಳಾಸದಲ್ಲಿ ಸಂಪರ್ಕಿಸಬಹುದು.
ಸಂಪರ್ಕ: 080-23442233 ಅಥವಾ southdcp@gmail.com.
