Home ಅಪರಾಧ ಒಂದು ಕೋಟಿ ಬೆಲೆಬಾಳುವ ಹೈಡ್ರೋ ಗಾಂಜಾ ವಶ; 4 ಜನ ಸೇರಿ ಎರಡು ಇರಾಣಿ ಪ್ರಜೆ...

ಒಂದು ಕೋಟಿ ಬೆಲೆಬಾಳುವ ಹೈಡ್ರೋ ಗಾಂಜಾ ವಶ; 4 ಜನ ಸೇರಿ ಎರಡು ಇರಾಣಿ ಪ್ರಜೆ ಬಂಧನ

79
0
Bengaluru cops arrests 4 including 2 Iranian National; seizes Rs 1 crore worth Marijuana

ಬೆಂಗಳೂರು:

ಬೆಂಗಳೂರಿನಲ್ಲಿ ಸಿಸಿಬಿ ಅಧಿಕಾರಿಗಳು ಬಿಡದಿ ಸಮೀಪದ ಖಾಸಗಿ ವಿಲ್ಲ ಒಂದರಲ್ಲಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸುಮಾರು ಒಂದು ಕೋಟಿ ಬೆಲೆಬಾಳುವ ಹೈಡ್ರೋ ಗಾಂಜಾ, 130 ಹೈಡೋ ಗಾಂಜಾ ಗಿಡಗಳು ಹಾಗೂ 4 ಜನರನ್ನ ಬಂಧನ ಮಾಡಲಾಗಿದೆ.

ಈ ಇರಾನಿ ಪ್ರಜೆಗಳು ವೀಸಾ ಅವಧಿ ಮುಗಿದಿದ್ದರೂ ಸಹ ಭಾರತದಲ್ಲಿ ಅನಧಿಕೃತವಾಗಿ ನೆಲೆಸಿದ್ದು, ಇವರುಗಳು ಡಾರ್ಕ್‌ವೆಬ್‌ನಲ್ಲಿ ಹೈಡೋ ಗಾಂಜಾ ಬೀಜಗಳನ್ನು ತರಿಸಿಕೊಂಡು ಬೆಂಗಳೂರಿನ ಬಿಡದಿಯ ಹತ್ತಿರದ ವಿಲ್ಲಾ ಒಂದನ್ನು ಬಾಡಿಗೆ ಪಡೆದು ಅಲ್ಲಿಯೇ ವೈಜ್ಞಾನಿಕವಾಗಿ ಹೈಡೋ ಗಾಂಜಾ ಬೆಳೆದು ಒಣಗಿಸಿ ಬೆಂಗಳೂರು ನಗರದಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಐಟಿ-ಬಿಟಿ ಉದ್ಯೋಗಿಗಳಿಗೆ ಮತ್ತು ನಗರದ ಪ್ರತಿಟಿತ ಉದ್ಯಮಿಗಳಿಗೆ ಮಾರಾಟ ಮಾಡಿಕೊಂಡಿದ್ದರೆಂದು ಪೊಲೀಸ್ ಅಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Bengaluru cops arrests 4 including 2 Iranian National; seizes Rs 1 crore worth Marijuana

ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ನಂತರ ವಿಲ್ಲಾಗೆ ತೆರಳಿ ತಪಾಸಣೆ ಮಾಡಲಾಗಿ, ಈ ಆರೋಪಿಗಳು ವೈಜ್ಞಾನಿಕವಾಗಿ ಹೈಡೋ ಗಾಂಜಾ ಬೆಳೆಸಲು ವ್ಯವಸ್ಥಿತವಾಗಿ ಸಜ್ಜುಗೊಳಿಸಿದ್ದು, ವಿಲ್ಲಾದಲ್ಲಿ ಗಾಂಜಾ ಬೆಳೆಯಲು ಉಪಯೋಗಿಸುತ್ತಿದ್ದ UV Lights, LED Lamps, Vaccum packing containers, Electrical weighing machine, 130 ಹೈಡೋ ಗಾಂಜಾ ಗಿಡಗಳು ಹಾಗೂ ಮಾರಾಟಕ್ಕೆ ಸಿದ್ಧಪಡಿಸಿದ್ದ 1 ಕೋಟಿ ಬೆಲೆಯ 12 ಕೆ.ಜಿ 850 ಗ್ರಾಂ ತೂಕದ ಹೈಡೋ ಗಾಂಜಾ, ಎಲ್‌ಎಸ್‌ಡಿ ಸ್ಟಿಲ್ಸ್‌ಗಳು, ಗಾಂಜಾ ಮತ್ತು ಒಂದು ಸ್ಕೋಡಾ ಕಾರ್, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

Read here: Bengaluru cops arrest 4, including 2 Iranians, and seize marijuana worth Rs 1 crore

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಿನಾಂಕ 26 ರಂದು ಮದ್ಯಾಹ್ನ 01-30 ಗಂಟೆ ಸಮಯದಲ್ಲಿ ಬೆಂಗಳೂರು ನಗರದ ದೇವರ ಜೀವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಕಾವೇರಿ ನಗರದ ಎ ಬ್ಲಾಕ್‌ನ 2ನೇ ಕ್ರಾಸ್ ರಸ್ತೆಯಲ್ಲಿ ನಾಲ್ಕು ವ್ಯಕ್ತಿಗಳು ಬಿಳಿ ಬಣ್ಣದ ಸ್ಕೋಡಾ ಕಾರ್‌ನಲ್ಲಿ ಬಂದು ಮಾದಕ ವಸ್ತುವಾದ ಎಲ್‌ಎಸ್‌ಡಿ ಪೇಪರ್ ಮತ್ತು ಹೈಡೋ ಗಾಂಜಾ ಹಾಗೂ ಗಾಂಜಾವನ್ನು ಇಟ್ಟುಕೊಂಡು ಪರಿಚಿತ ಗಿರಾಕಿಗಳಿಗೆ, ಸ್ನೇಹಿತರಿಗೆ ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತು ಐಟಿ/ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಾ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂಬುದಾಗಿ ಖಚಿತ ಮೂಲದ ಮಾಹಿತಿ ಬಂದ ಮೇರೆಗೆ ಪೊಲೀಸರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮಾದಕ ವಸ್ತುಗಳಾದ ಹೈಡೋ ಗಾಂಜಾ, ಎಲ್‌ಎಸ್‌ಡಿ ಪೇಪರ್ & ಗಾಂಜಾ ಅನ್ನು ಇಟ್ಟುಕೊಂಡಿದ್ದ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಡಿ ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

Bengaluru cops arrests 4 including 2 Iranian National; seizes Rs 1 crore worth Marijuana

ದಸ್ತಗಿರಿಯಾಗಿರುವ ಇರಾನ್ ಪ್ರಜೆಯು ವಿರುದ್ಧ ಈ ಹಿಂದೆ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಹಾಗೂ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣ ಒಟ್ಟು ಮೂರು ಪ್ರಕರಣ ದಾಖಲಾಗಿರುವುದು ವಿಚಾರಣೆಯ ವೇಳೆ ತಿಳಿದು ಬಂದಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಸುಮಾರು 1 ಕೋಟಿ ಮೌಲ್ಯದ ವೈಜ್ಞಾನಿಕವಾಗಿ ಮನೆಯಲ್ಲಿಯೇ ಬೆಳಸಿದ 130 ಹೈಡೋ ಗಾಂಜಾ ಗಿಡಗಳೂ ಸೇರಿದಂತೆ 12. ಕೆ.ಜಿ 850 ಗ್ರಾಂ ತೂಕದ ಹೈಡೋ ಗಾಂಜಾ ಎಲ್‌ಎಸ್‌ಡಿ ಸ್ಟಿಲ್ಸ್‌ಗಳು, ಗಾಂಜಾ ಮತ್ತು ಒಂದು ಸ್ಕೋಡಾ ಕಾರ್, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತರು, ಅಪರಾಧ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತರು (ಅಪರಾಧ-2) ರವರಾದ ಬಿ.ಎಸ್ ಅಂಗಡಿ ಮಾರ್ಗದರ್ಶನದಲ್ಲಿ ಸಿಸಿಬಿ ಯ ಎಸಿಪಿ ಬಿ ಜಗನ್ನಾಥ್ ರೈ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ದೀಪಕ್ ಆರ್. , ಬಿ ಎಸ್ ಆಶೋಕ್ ಮತ್ತು ಸಿಬ್ಬಂದಿ ತಂಡ ನಡೆಸಿರುತ್ತಾರೆ.

LEAVE A REPLY

Please enter your comment!
Please enter your name here