ಬೆಂಗಳೂರು: ದೀಪಾವಳಿಗೆ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಶುಕ್ರವಾರ ತಿಳಿಸಿದೆ. ಮಾನ್ಯ ಪರವಾನಗಿ ಹೊಂದಿರುವ ಅಂಗಡಿಗಳಿಂದ ಮಾತ್ರ ಹಸಿರು ಪಟಾಕಿ ಖರೀದಿಸುವಂತೆ ಸೂಚಿಸಿದೆ.
ಆಸ್ಪತ್ರೆ, ಪೆಟ್ರೋಲ್ ಬಂಕ್ ಮತ್ತು ಇತರ ಗುರುತಿಸಲಾದ ಸೂಕ್ಷ್ಮ ಪ್ರದೇಶಗಳ ಬಳಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಬಿಎ ತಿಳಿಸಿದೆ. ಮಕ್ಕಳ ಸುರಕ್ಷತೆ, ಅಗ್ನಿ ಅವಘಡಗಳ ತಡೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತೆ ಪ್ರಾಧಿಕಾರ ಕೋರಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ದೀಪಾವಳಿ ಮಾರ್ಗಸೂಚಿ
ತುರ್ತು ಸಂಪರ್ಕ ಸಂಖ್ಯೆಗಳು
ತುರ್ತು ಪರಿಸ್ಥಿತಿಯಲ್ಲಿ 112 ಅಥವಾ 108ಕ್ಕೆ ಕರೆ ಮಾಡುವಂತೆ ಜಿಬಿಎ ತಿಳಿಸಿದೆ. ಪ್ರಕಟಣೆಯ ಜತೆಗೆ ನೀಡಿದ ಎರಡೂ ಸೂಚನಾ ಚಿತ್ರಗಳಲ್ಲಿ ಜಿಬಿಎ ಸಹಾಯವಾಣಿ ಸಂಖ್ಯೆ 1533 ನಮೂದಿಸಲಾಗಿದೆ.
