ಬೆಂಗಳೂರು: ನವೆಂಬರ್ 5ರ ಗುರುವಾರ ಬೆಂಗಳೂರು ವಿಭಾಗದಲ್ಲಿ ನಡೆಸಿದ ವಿಶೇಷ ಟಿಕೆಟ್ ತಪಾಸಣಾ ಅಭಿಯಾನದಲ್ಲಿ ಟಿಕೆಟ್ ರಹಿತ ಅಥವಾ ನಿಯಮಬಾಹಿರ ಪ್ರಯಾಣದ 1,302 ಪ್ರಕರಣಗಳನ್ನು ಪತ್ತೆಹಚ್ಚಿ ₹16.71 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆ ತಿಳಿಸಿದೆ.
ವಿಭಾಗದ ವಾಣಿಜ್ಯ ಶಾಖೆಯ 59 ಟಿಕೆಟ್ ತಪಾಸಣಾ ಸಿಬ್ಬಂದಿ ವಿವಿಧ ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ತಪಾಸಣೆ ನಡೆಸಿದರು. ಸಹಾಯಕ ವಾಣಿಜ್ಯ ವ್ಯವಸ್ಥಾಪಕರಾದ ಧನಂಜಯ ಮತ್ತು ಉಮೇಶ್ ನಾಯಕ್ ಅಭಿಯಾನದ ಮೇಲ್ವಿಚಾರಣೆ ವಹಿಸಿದ್ದರು.

ಟಿಕೆಟ್ ರಹಿತ ಮತ್ತು ನಿಯಮಬಾಹಿರ ಪ್ರಯಾಣಕ್ಕೆ ಕಡಿವಾಣ
ಪ್ರಯಾಣ ನಿಯಮಗಳನ್ನು ಜಾರಿಗೊಳಿಸುವುದು ಮತ್ತು ಮಾನ್ಯ ಟಿಕೆಟ್ ಹೊಂದಿರುವ ಪ್ರಯಾಣಿಕರ ಹಿತ ಕಾಪಾಡುವುದು ತಪಾಸಣೆಯ ಉದ್ದೇಶವಾಗಿತ್ತು ಎಂದು ರೈಲ್ವೆ ತಿಳಿಸಿದೆ.
