Home ಆರೋಗ್ಯ ಬೆಂಗಳೂರಿಗೆ ಕೊರೋನಾಘಾತ: ನಗರದಲ್ಲಿ 2,004 ಪ್ರಕರಣ ಪತ್ತೆ

ಬೆಂಗಳೂರಿಗೆ ಕೊರೋನಾಘಾತ: ನಗರದಲ್ಲಿ 2,004 ಪ್ರಕರಣ ಪತ್ತೆ

82
0

ಬೆಂಗಳೂರು:

ರಾಜ್ಯದಲ್ಲಿ ಕೊರೋನಾ 2ನೇ ಅಲೆ ಶುರುವಾಗಿದ್ದು ಬೆಂಗಳೂರಿನಲ್ಲಿ ಇಂದು 2,004 ಮಂದಿಗೆ ಸೋಂಕು ದೃಢಪಟ್ಟಿದ್ದು. ನಗರದಲ್ಲಿ ಸೋಂಕಿಗೆ ಏಳು ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 12 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,504ಕ್ಕೆ ಏರಿಕೆಯಾಗಿದೆ. ಇಂದು 3,082 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,87,012ಕ್ಕೆ ಏರಿಕೆಯಾಗಿದೆ, ಎಂದು ಆರೋಗ್ಯ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here