Home ಬೆಂಗಳೂರು ನಗರ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ನಗರ ಕಾಂಗ್ರೆಸ್ ಯಿಂದ ಪ್ರತಿಭಟನೆ

ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ನಗರ ಕಾಂಗ್ರೆಸ್ ಯಿಂದ ಪ್ರತಿಭಟನೆ

39
0

ಬೆಂಗಳೂರು:

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಅನ್ವಯ ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ನಗರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಈವರೆಗೂ ಅವರನ್ನು ಪೊಲೀಸರು ಬಂಧಿಸುವ ಪ್ರಯತ್ನವನ್ನು ನಡೆಸಿಲ್ಲ ಹಾಗೂ ವಿಚಾರಣೆಗೂ ಒಳಪಡಿಸಿಲ್ಲ ಆದ್ದರಿಂದ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಇರುವುದರಿಂದ ಮಹಿಳೆಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ.

City Congress protests demanding arrest of Ramesh Jarkiholi1

ಮಾಧ್ಯಮಗಳ ಮುಂದೆ ವೀರಾವೇಶವಾಗಿ ಮಾತನಾಡಿರುವ ರಮೇಶ್ ಜಾರಕಿಹೊಳಿ ನಕಲಿ ಸೀಡಿ ಎಂದ ಮೇಲೆ ಯುವತಿಯನ್ನ ಹೆಸರನ್ನು ಪ್ರಸ್ತಾಪಿಸುವ ಅವಶ್ಯಕತೆ ಏಕೆ ಬಂತು. ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಹಾಗೂ ಬಿಜೆಪಿ ಪಕ್ಷದ ನಾಯಕರು ರಾಜಕೀಯಗೊಳಿಸಲು ಯತ್ನಿಸಿದೆ.

ರಮೇಶ್ ಜಾರಕಿಹೊಳಿಯ ಲೈಂಗಿಕ ಕಿರುಕುಳದ ಪ್ರಕರಣವನ್ನು ನಿಧಾನಗತಿಯಲ್ಲಿ ತನಿಖೆಗೆ ಎಸ್ ಐಟಿ ಒಳಪಡಿಸಿದೆ. ಪೊಲೀಸ್ ಇಲಾಖೆ ಕೂಡಲೇ ಈ ಪ್ರಕರಣದಲ್ಲಿ ನ್ಯಾಯ ಒದಗಿಸಲು ಮಹಿಳೆಗೆ ರಕ್ಷಣೆ ಒದಗಿಸಬೇಕು. ಜಾರಕಿ ಹೋಳಿಯನ್ನು ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಎಸ್. ಮನೋಹರ್, ಜಿ. ಜನಾರ್ದನ್ ಪ್ರಕಾಶ, ಆದಿತ್ಯ , ಉಮೇಶ್, ಚಂದ್ರಶೇಖರ್, ಪುಟ್ಟರಾಜು, ಶಶಿಭೂಷಣ್ ಹಾಗೂ ಮಹಿಳೆಯರು ಯುವಕರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.,

ಇದನ್ನೂ ಓದಿ: ಡಿಕೆಶಿ ಬಗ್ಗೆ ಅವಾಚ್ಯ ಪದ ಬಳಕೆ: ಕಾಂಗ್ರೆಸ್ ಕಾರ್ಯಕರ್ತರಿಂದ ಜಾರಕಿಹೊಳಿ ನಿವಾಸಕ್ಕೆ ಮುತ್ತಿಗೆ ಯತ್ನ https://kannada.thebengalurulive.com/congress-workers-attempts-to-siege-ramesh-jarkiholis-residence-arrested/

ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಗಂಡಸಲ್ಲ. ನಾನು ಗಂಡಸು: ಮಹಾನ್ ನಾಯಕನ ವಿರುದ್ಧ ಹೋರಾಟ – ರಮೇಶ್ ಜಾರಕಿಹೊಳಿ https://kannada.thebengalurulive.com/dk-shivakumar-is-not-a-man-ramesh-jarkiholi/

ಇದನ್ನೂ ಓದಿ: ಯುವತಿ ನನ್ನ ಭೇಟಿಗೆ ಯತ್ನಿಸಿರಬಹುದು, ಆದರೆ ನಾವು ಭೇಟಿ ಮಾಡಿಲ್ಲ: ಡಿ.ಕೆ. ಶಿವಕುಮಾರ್ https://kannada.thebengalurulive.com/woman-in-cd-tried-to-meet-me-but-i-have-not-met-dk-shivakumar/

LEAVE A REPLY

Please enter your comment!
Please enter your name here