ವಾರ್ಡ್ ನಡಿಗೆಯಲ್ಲಿ ಎಸ್.ಸುರೇಶ್ ಕುಮಾರ್.
ಬೆಂಗಳೂರು: ಮಾಜಿ ಸಚಿವ ಹಾಗೂ ರಾಜಾಜಿನಗರ ಶಾಸಕ ಎಸ್.ಸುರೇಶ್ ಕುಮಾರ್ ಅವರು ತಮ್ಮ “ದಿನಕ್ಕೊಂದು ವಾರ್ಡ್ ನಡಿಗೆ” ಕಾರ್ಯಕ್ರಮದ 150ನೇ ದಿನವನ್ನು ಭಾನುವಾರ ದಯಾನಂದನಗರ ವಾರ್ಡ್‌ನಲ್ಲಿ ಸಂಭ್ರಮಾಚರಣೆಯೊಂದಿಗೆ ಆಚರಿಸಿದರು.
ಸುರೇಶ್ ಕುಮಾರ್ ಅವರು ಶ್ರೀ ರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಡಿಗೆಗೆ ಚಾಲನೆ ನೀಡಿದರು. ಮಾಜಿ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ಶ್ರೀಮತಿ ಶಕೀಲ ಮುನಿರಾಜು ಹಾಗೂ ಮಂಡಲ ಕಾರ್ಯದರ್ಶಿ ಎಂ.ಎಸ್.ಸಂಜಯ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್, 76ನೇ ವಾರಕ್ಕೆ ಕಾಲಿಟ್ಟಿರುವ ಈ ಅಭಿಯಾನ ನಾಗರಿಕರ ಸಮಸ್ಯೆಗಳಿಗೆ ತತಕ್ಷಣ ಪರಿಹಾರ ಒದಗಿಸುವ ಉದ್ದೇಶ ಹೊಂದಿದೆ ಎಂದರು. ಎರಡು ಕಾರ್ಯಕ್ರಮಗಳಿಂದ ಸುಮಾರು 20 ಸಾವಿರ ನಾಗರಿಕರನ್ನು ಭೇಟಿಯಾಗಿ, 5 ಸಾವಿರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದು ಅವರು ತಿಳಿಸಿದರು. ಭಾನುವಾರದ ನಡಿಗೆ ದಯಾನಂದನಗರ, ಪ್ರಕಾಶನಗರ, ಶ್ರೀರಾಮಮಂದಿರ, ರಾಜಾಜಿನಗರ, ಶಿವನಗರ, ಬಸವೇಶ್ವರನಗರ ಮತ್ತು ಕಾಮಾಕ್ಷಿಪಾಳ್ಯ ಸೇರಿ ಏಳು ವಾರ್ಡ್‌ಗಳ ಸುಮಾರು 11 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯಿತು.
ಮಂಡಲ ಅಧ್ಯಕ್ಷ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಮಾಜಿ ಉಪಮಹಾಪೌರ ರಂಗಣ್ಣ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
