ಬೆಂಗಳೂರು ದಕ್ಷಿಣದ ಬಿಳೇಕಹಳ್ಳಿಯಲ್ಲಿ ವಾರ್ಡ್ ಒನ್ ಅಭಿಯಾನದ ನಾಗರಿಕ ಕಾಮಗಾರಿಯ ಹೋಲಿಕೆ ಚಿತ್ರ. ಚಿತ್ರ: ಒದಗಿಸಲಾಗಿದೆ
ಬೆಂಗಳೂರು: ವಾರ್ಡ್ ಒನ್ ಅಭಿಯಾನದ ಅಂಗವಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಮತ್ತು ಬೀದಿ ದೀಪ ಅಳವಡಿಕೆ ಕಾರ್ಯ ನಡೆದಿದ್ದು, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಕೆಲವು ಭಾಗಗಳಲ್ಲಿ ಹಾಳಾಗಿದ್ದ ಪಾದಚಾರಿ ಮಾರ್ಗಗಳನ್ನು ದುರಸ್ತಿ ಮಾಡಲಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದ ಮೇರೆಗೆ ಈ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಬೆಂಗಳೂರು ದಕ್ಷಿಣ: ಒತ್ತುವರಿ ತೆರವು, ಬೀದಿ ದೀಪ, ಚರಂಡಿ ಸ್ಲ್ಯಾಬ್
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು, ಬೀದಿ ದೀಪ ಅಳವಡಿಕೆ, ರಸ್ತೆ ಬದಿಯ ಹೂಳು ತೆರವು ಹಾಗೂ ಚರಂಡಿ ಸ್ಲ್ಯಾಬ್ ಅಳವಡಿಕೆ ಸೇರಿದಂತೆ ಇತರ ಕಾರ್ಯಗಳನ್ನು ನಡೆಸಲಾಯಿತು.
ಬೆಂಗಳೂರು ಪಶ್ಚಿಮ: ಮಲ್ಲೇಶ್ವರಂ, ಗೋವಿಂದರಾಜನಗರದಲ್ಲಿ ಪಾದಚಾರಿ ಮಾರ್ಗ ದುರಸ್ತಿ
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಮಲ್ಲೇಶ್ವರಂ ವಿಭಾಗದ ಸದಾಶಿವನಗರ ವಾರ್ಡ್ನಲ್ಲಿ ಹಾಳಾಗಿದ್ದ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಜತೆಗೆ ಸ್ವಚ್ಛತಾ ಕಾರ್ಯವನ್ನೂ ನಡೆಸಲಾಯಿತು.
ಪಾಲಿಕೆಯ ಗೋವಿಂದರಾಜನಗರ ವಿಭಾಗದಲ್ಲಿಯೂ ಹಾಳಾಗಿದ್ದ ಪಾದಚಾರಿ ಮಾರ್ಗವನ್ನು ದುರಸ್ತಿ ಮಾಡಲಾಗಿದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.
ವಾರ್ಡ್ ಒನ್ ಅಭಿಯಾನದ ಉದ್ದೇಶ
ನವೆಂಬರ್ 1ರಿಂದ ಆರಂಭವಾದ ಒಂದು ತಿಂಗಳ ವಾರ್ಡ್ ಒನ್ ಅಭಿಯಾನದಡಿ ನಗರದ ಐದು ನಗರ ಪಾಲಿಕೆಗಳ ಆಯ್ದ ವಾರ್ಡ್ಗಳಲ್ಲಿ ದುರಸ್ತಿ ಮತ್ತು ಸ್ವಚ್ಛತಾ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ.
