Home Uncategorized BESCOM: ಗ್ರಾಹಕರಿಗೆ ದಿನದ 24 ಗಂಟೆಗಳ ಸೇವೆ ನೀಡಲಿರುವ ವೆಬ್ ಪೋರ್ಟಲ್

BESCOM: ಗ್ರಾಹಕರಿಗೆ ದಿನದ 24 ಗಂಟೆಗಳ ಸೇವೆ ನೀಡಲಿರುವ ವೆಬ್ ಪೋರ್ಟಲ್

2
0
bengaluru

ಬೆಂಗಳೂರು: ಆರ್-ಎಪಿಡಿಆರ್‌ಪಿ (R-APDRP) ತಂತ್ರಾಂಶದಲ್ಲಿ ಕಂಡುಬಂದ ದೋಷದಿಂದಾಗಿ ಬೆಸ್ಕಾಂ (BESCOM) ಗ್ರಾಹಕರು ಸೇವೆಗಳನ್ನು ಪಡೆಯಲು ಪರದಾಡುವಂತಾಗಿತ್ತು. ಆದರೆ ಇನ್ನು ಮುಂದೆ ದಿನದ 24 ಗಂಟೆಗಳ ಕಾಲ ವೆಬ್​ ಪೋರ್ಟಲ್ (BESCOM Web Portal) ಗ್ರಾಹಕರಿಗೆ ಲಭ್ಯವಾಗಲಿದೆ. ಜನಸ್ನೇಹಿ ವಿದ್ಯುತ್‌ ಸೇವೆಗಳು, ಹೊಸ ವಿದ್ಯುತ್‌ ಸಂಪರ್ಕ ನೋಂದಣಿ ಸೇರಿದಂತೆ ವಿವಿಧ ವಿದ್ಯುತ್‌ ಸೇವೆಗಳಿಗಾಗಿ ರೂಪಿಸಿದ ಆರ್-ಎಪಿಡಿಆರ್‌ಪಿ ತಂತ್ರಾಂಶದ ದೋಷಗಳನ್ನು ಸರಿಪಡಿಸಲಾಗಿದೆ. ಆ ಮೂಲಕ ಎಲ್ಲಾ 5 ಎಸ್ಕಾಂಗಳ ಗ್ರಾಹಕರಿಗೆ ದಿನದ 24 ಗಂಟೆಗಳ ಸೇವೆಯನ್ನು ಒದಗಿಸಲಿದೆ. ಈ ಹಿಂದೆ ವೆಬ್ ಪೋರ್ಟಲ್​ನಲ್ಲಿ ಗ್ರಾಹಕರಿಗೆ ಲಾಗ್​ ಇನ್ ಆಗಲು ಬೆಸ್ಕಾಂ ವ್ಯಾಪ್ತಿಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರ ವರೆಗೆ ಸಮಯ ನಿಗದಿ ಮಾಡಲಾಗಿತ್ತು. ಉಳಿದ ನಾಲ್ಕು ಎಸ್ಕಾಂಗಳಿಗೆ ಮಧ್ಯಾಹ್ನ 1.30ರಿಂದ ಸಂಜೆ 7ರ ವರೆಗೆ ಸಮಯ ನಗದಿ ಮಾಡಲಾಗಿತ್ತು.

ಇದನ್ನೂ ಓದಿ: ಶಿವಮೊಗ್ಗ, ಬಳ್ಳಾರಿಯಲ್ಲಿ ಬೀದಿನಾಯಿ ದಾಳಿಗೆ ಒಟ್ಟು ಮೂವರು ಮಕ್ಕಳ ಸಾವು: ಮತ್ತೆ ಗರಿಗೆದರಿದ ನಾಯಿ ನಿರ್ವಹಣೆ ಚರ್ಚೆ

ತಂತ್ರಾಂಶವು ಹಳೆಯದಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಒಮ್ಮೆಲೇ ಲಾಗ್​ಇನ್ ಆದಾಗ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. 2022ರ ಜುಲೈನಲ್ಲಿ ಆರಂಭವಾದ ಈ ಸಮಸ್ಯೆ ನಂತರ ಸಾಫ್ಟ್​ವೇರ್ ನಿರ್ವಹಣೆಗೆ ಅಡಚಣೆ ಉಂಟಾಗಿತ್ತು. ಈ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದ ಇನ್ಫೋಸಿಸ್ ನಿರ್ವಹಣೆ ಜವಾಬ್ದಾರಿಯಿಂದ ಹಿಂದೆಸರಿದಿದ್ದರಿಂದ ಇನ್‌ಫೈನೈಟ್‌ ಕಂಪ್ಯೂಟರ್‌ ಸಲ್ಯೂಷನ್ಸ್‌ ಕಂಪನಿಯು ಟೆಂಡರ್​ನಲ್ಲಿ ಆಯ್ಕೆಯಾಯಿತು. ಅದರಂತೆ ತಂತ್ರಾಂಶದ ನಿರ್ವಹಣೆಯ ಕಾರ್ಯಾದೇಶವನ್ನು ಇನ್​ಫೈನೈಟ್​ಗೆ ನೀಡಲಾಗಿದೆ. ಸದ್ಯ ತಂತ್ರಾಂಶದ ಲೋಪದೋಷಗಳನ್ನು ಶಾಶ್ವತವಾಗಿ ಬಗೆಹರಿಸಲು ಹೊಸ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದ್ದು, ಇನ್ನು 4-5 ತಿಂಗಳಲ್ಲಿ ಹೊಸ ತಂತ್ರಾಂಶ ಕಾರ್ಯಾರಂಭ ಮಾಡಲಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹೇಳಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

bengaluru
bengaluru

LEAVE A REPLY

Please enter your comment!
Please enter your name here