Home ಅಪರಾಧ ಲಂಚ ಪಡೆಯುತ್ತಿದ್ದ ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್‌ ಬಂಧನ

ಲಂಚ ಪಡೆಯುತ್ತಿದ್ದ ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್‌ ಬಂಧನ

60
0
BESCOM
Advertisement
bengaluru

ಬೆಂಗಳೂರು:

ಹೆಚ್ಚುವರಿ ವಿದ್ಯುತ್‌ ಮೀಟರ್‌ ಮತ್ತು ಎಲ್‌.ಟಿ. ವಿದ್ಯುತ್‌ ಪೂರೈಕೆ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯಿಂದ ₹ 10,000 ಲಂಚ ಪಡೆಯುತ್ತಿದ್ದ ಬೆಸ್ಕಾಂನ ಬೆಂಗಳೂರು ಉತ್ತರ ವೃತ್ತದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಲ್‌.ಎಸ್‌. ಲಕ್ಷ್ಮೀಶ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೋಮವಾರ ಬಂಧಿಸಿದೆ.

Bescom's executive engineer arrested for accepting bribe

ಬಸವೇಶ್ವರ ನಗರದ ನಿವಾಸಿಯೊಬ್ಬರು ತಮ್ಮ ಕಟ್ಟಡದಲ್ಲಿರುವ 18 ಮನೆಗಳ ಪೈಕಿ ಒಂದಕ್ಕೆ ಹೆಚ್ಚುವರಿ ವಿದ್ಯುತ್‌ ಮೀಟರ್‌ ಹಾಗೂ ಎಲ್‌.ಟಿ. ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದರು. ಮಂಜೂರಾತಿ ನೀಡಲು ₹ 10,000 ಲಂಚ ನೀಡುವಂತೆ ಕಾರ್ಯನಿರ್ವಾಹಕ ಎಂಜಿನಿಯರ್‌ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.

ಶಿವಾನಂದ ವೃತ್ತದಲ್ಲಿರುವ ಬೆಸ್ಕಾಂ ಬೆಂಗಳೂರು ಉತ್ತರ ವೃತ್ತದ ಕಚೇರಿಯಲ್ಲಿ ಸೋಮವಾರ ಸಂಜೆ ಲಂಚ ಪಡೆಯುತ್ತಿದ್ದಾಗ ದಾಳಿಮಾಡಿದ ಎಸಿಬಿ ಅಧಿಕಾರಿಗಳು, ಲಕ್ಷ್ಮೀಶ್‌ ಅವರನ್ನು ಬಂಧಿಸಿದರು. 2007ರಲ್ಲಿ ಲಕ್ಷ್ಮೀಶ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆಗಿ ಬೆಸ್ಕಾಂ ಅಲ್ಲಿ ಸೇರಿದ್ದರು

bengaluru bengaluru

bengaluru

LEAVE A REPLY

Please enter your comment!
Please enter your name here