Home ರಾಜಕೀಯ ಏ.1ರಂದು ತುಮಕೂರಿಗೆ ಅಮಿತ್ ಶಾ ಭೇಟಿ- ಸಚಿವ ಮಾಧುಸ್ವಾಮಿ

ಏ.1ರಂದು ತುಮಕೂರಿಗೆ ಅಮಿತ್ ಶಾ ಭೇಟಿ- ಸಚಿವ ಮಾಧುಸ್ವಾಮಿ

10
0
Amit Shah
bengaluru

ಬೆಂಗಳೂರು:

ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನವು ಏಪ್ರಿಲ್ 1ರಂದು ನಡೆಯಲಿದೆ. ಆ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ತುಮಕೂರಿಗೆ ಬರಲಿದ್ದಾರೆ ಎಂದು ರಾಜ್ಯದ sಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಚೆನ್ನಾಗಿ ಮಾಡಬೇಕು. ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸಲು ಅಮಿತ್ ಶಾ ಅವರು ಬರಲಿದ್ದು, ಅವರ ಜೊತೆ ಕಾರ್ಯಕರ್ತರು ಸೇರಲು ನಿರ್ಧರಿಸಲಾಗಿದೆ ಎಂದರು.

ಈ ಕುರಿತ ಕಾರ್ಯಕ್ರಮದ ರೂಪುರೇಷೆಗೆ ಸಂಬಂಧಿಸಿ ಇಂದು ಸಭೆ ನಡೆಸಲಾಗಿದೆ. ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ರೂಪಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಕ್ಷೀರ ಬ್ಯಾಂಕ್ ಕಾರ್ಯಕ್ರಮದಲ್ಲೂ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ ಎಂದರು.

bengaluru
bengaluru

LEAVE A REPLY

Please enter your comment!
Please enter your name here