Home ಬೆಂಗಳೂರು ನಗರ ನಗರದ ವಿವಿಧ ಪ್ರದೇಶಗಳಲ್ಲಿ ಇಂದು, ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ನಗರದ ವಿವಿಧ ಪ್ರದೇಶಗಳಲ್ಲಿ ಇಂದು, ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

107
0
BWSSB Tap

ಬೆಂಗಳೂರು:

ಗರದ ಪಿಳ್ಳಪ್ಪನ ಕಟ್ಟೆ ರಾಜಕಾಲುವೆ ಬಳಿ 900 ಮಿ.ಮೀ ವ್ಯಾಸದ ನೀರು ಸರಬರಾಜು ಮಾರ್ಗದಲ್ಲಿ ಸೋರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ದಿನಾಂಕ:23-06-2021 ಹಾಗೂ 24-06-2021 ರಂದು ಸದರಿ ಮಾರ್ಗದಲ್ಲಿನ ನೀರು ಸೋರುವಿಕೆಯನ್ನು ತಡೆಗಟ್ಟುವ ಕಾಮಗಾರಿಯನ್ನು ಕೈಗೊಳ್ಳುವುದರಿಂದ ನಗರದ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ವಿವಿಧ ಪ್ರದೇಶಗಳಲ್ಲಿ ಇಂದು ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ನಾಗಪುರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿಪುರಂ, ಮಂಜುನಾಥನಗರ, ಶಿವನಗರ, ಮಹಾಗಣಪತಿ ನಗರ, ತಿಮ್ಮಯ್ಯರಸ್ತೆ, ಬಸವೇಶ್ವರ ನಗರ, ಎಚ್‍ಬಿಸಿಎಸ್, ಶಕ್ತಿಗಣಪತಿ ನಗರ, ಶಂಕರಮಠ, ಕಮಲಾನಗರ, ಕಾಮಾಕ್ಷಿಪಾಳ್ಯ, ಶಾರದಾ ಕಾಲೋನಿ, ಬಿಇಎಂಎಲ್ ಬಡಾವಣೆ, ವೃಷಭಾವತಿ ನಗರ, ಸಣ್ಣಕ್ಕಿ ಬಯಲು, ವೈಯಾಲಿಕಾವಲ್, ಕರ್ನಾಟಕ ಲೇಔಟ್, ಕಿರ್ಲೋಸ್ಕರ್ ಕಾಲೋನಿ, ಮೀನಾಕ್ಷಿ ನಗರ, ಸರ್‍ಎಂವಿ 1 ರಿಂದ 9ನೇ ಬ್ಲಾಕ್, ಬಿಇಎಲ್ 1ನೇ ಮತ್ತು 2ನೇ ಹಂತ, ಬಾಲಾಜಿ ಲೇಔಟ್, ಮಲ್ಲತ್ತಹಳ್ಳಿ, ರೈಲ್ವೆ ಲೇಔಟ್ 2ನೇ ಹಂತ, ಬಿಟಿಎಸ್ ಲೇಔಟ್, ಅಂಜನಾ ನಗರ, ಕೆಇಬಿ ರಸ್ತೆ, ಬ್ಯಾಡರಹಳ್ಳಿ, ರಾಜೀವ್‍ಗಾಂಧಿ ನಗರ, ಅಗ್ರಹಾರ ದಾಸರಹಳ್ಳಿ, ಕೆಎಚ್‍ಬಿ 2ನೇ ಹಂತ, ಪಾಪಯ್ಯ ಗಾರ್ಡನ್, ಮಹಾಲಕ್ಷ್ಮಿ ಲೇಔಟ್, ಸರಸ್ವತಿಪುರ, ಜೆಸಿನಗರ, ಗೆಳೆಯರ ಬಳಗ, ಕುರುಬರಹಳ್ಳಿ, ಸುಬ್ರಮಣ್ಯನಗರ ಎ, ಇ, ಡಿ ಬ್ಲಾಕ್, ಪ್ರಕಾಶ್ ನಗರ, ರಾಜಾಜಿನಗರ 1ನೇ, 2ನೇ, 3ನೇ, 4ನೇ 5ನೇ ಮತ್ತು 6ನೇ ಬ್ಲಾಕ್ ಹಾಗೂ 1ನೇ ‘ಎನ್’ ಬ್ಲಾಕ್, ಜೈ ಮಾರುತಿ ನಗರ, ಕಂಠೀರವನಗರ, ನಂದಿನಿ ಲೇಔಟ್, ನಂಜುಂಡೇಶ್ವರ ನಗರ, ಶ್ರೀಕಂಠೇಶ್ವರ ನಗರ, ಶಂಕರನಗರ, ಕೃಷ್ಣಾನಂದ ನಗರ, ಕೆ.ಹೆಚ್.ಬಿ.ಕಾಲೋನಿ, ಮಲ್ಲಿಗೆ ತೋಟ, ವಿದ್ಯಾರಣ್ಯನಗರ, ಎನ್.ಆರ್.ಗಾರ್ಡನ್, ಚೆಲುವಪ್ಪ ಗಾರ್ಡನ್, ಗಂಗಪ್ಪ ಗಾರ್ಡನ್, ಶಂಕರಪ್ಪ ಗಾರ್ಡನ್, ಮಾಗಡಿ ರಸ್ತೆ ಬಲಭಾಗ, ಭುವನೇಶ್ವರಿ ನಗರ, ಗೊರಗುಂಟೆ ಪಾಳ್ಯ, ಪರಿಮಳನಗರ, ಚೋಳೂರಪಾಳ್ಯ, ಗೋಪಾಲಪುರ, ಕೆ.ಪಿ.ಅಗ್ರಹಾರ, ರಜನಿ ನಗರ 6ನೇ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಕೋರಿದೆ.

LEAVE A REPLY

Please enter your comment!
Please enter your name here