ಬೆಂಗಳೂರು: ಟಿ.ಕೆ. ಹಳ್ಳಿಯಲ್ಲಿರುವ ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ 1ನೇ ಘಟ್ಟದ 400 ಎಂ.ಎಲ್.ಡಿ. ಜಲಶುದ್ಧೀಕರಣ ಘಟಕದ 5 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ₹33.58 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಗುರುವಾರ (ನವೆಂಬರ್ 5) ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಂಪುಟ ನಿರ್ಣಯಗಳ ಟಿಪ್ಪಣಿ ತಿಳಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಈ ಕಾಮಗಾರಿಯನ್ನು ಕೆಟಿಪಿಪಿ ಕಾಯ್ದೆಯನ್ವಯ ಕೈಗೊಳ್ಳಲಾಗುವುದು ಎಂದು ಟಿಪ್ಪಣಿ ತಿಳಿಸಿದೆ.
