ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯು ವಾರ್ಡ್ ಒನ್ ಅಭಿಯಾನದಡಿ 24 ರಸ್ತೆಗಳಲ್ಲಿ ಸ್ವಚ್ಛತೆ ಕೈಗೊಂಡು 49 ಬ್ಲ್ಯಾಕ್ ಸ್ಪಾಟ್ (ತ್ಯಾಜ್ಯ ತಾಣ)ಗಳನ್ನು ತೆರವುಗೊಳಿಸಿದೆ. ಆಯುಕ್ತ ಜಗದೀಶ್ ಜಿ ಅವರು ನಿರಂತರ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ನವೆಂಬರ್ 5ರ ಪಾಲಿಕೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ಸೂಚನೆಯಂತೆ ಅಭಿಯಾನದಡಿ ಪಾಲಿಕೆಯ ಆರು ವಿಭಾಗಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಸ್ವಚ್ಛತೆ, ಪಾದಚಾರಿ ಮಾರ್ಗಗಳ ದುರಸ್ತಿ, ಪಾದಚಾರಿ ಸ್ನೇಹಿ ಮತ್ತು ಒತ್ತುವರಿಮುಕ್ತ ಪಾದಚಾರಿ ಮಾರ್ಗ, ಗುಂಡಿ ಮುಚ್ಚುವುದು ಹಾಗೂ ಮೂಲಸೌಕರ್ಯ ಸುಧಾರಣೆ ಇದರ ಉದ್ದೇಶ.
