Home Uncategorized Capital Riot Case: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ...

Capital Riot Case: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಶಿಫಾರಸು

16
0

ಕಳೆದ ವರ್ಷ ಯುಎಸ್ ಕ್ಯಾಪಿಟಲ್ ಮೇಲಿನ ದಾಳಿಯ ತನಿಖೆ ನಡೆಸಿದ ಕಾಂಗ್ರೆಸ್ ಸಮಿತಿಯು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವಂತೆ ಶಿಫಾರಸು ಮಾಡಿದೆ.ಇದರಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2024ರ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಜನೆಗೆ ಹಿನ್ನಡೆಯಾಗಬಹುದು. ಕಳೆದ ವರ್ಷ ಯುಎಸ್ ಕ್ಯಾಪಿಟಲ್ ಮೇಲಿನ ದಾಳಿಯ ತನಿಖೆ ನಡೆಸಿದ ಕಾಂಗ್ರೆಸ್ ಸಮಿತಿಯು ತನ್ನ ವರದಿಯನ್ನು ನೀಡಿದೆ.

ಈ ವರದಿಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಮಿತಿ ಶಿಫಾರಸು ಮಾಡಿದೆ.ದಂಗೆಯನ್ನು ಪ್ರಚೋದಿಸುವ, ಅಧಿಕೃತ ಪ್ರಕ್ರಿಯೆಗೆ ಅಡ್ಡಿಪಡಿಸುವ, ಯುಎಸ್ ಸರ್ಕಾರವನ್ನು ವಂಚಿಸುವ ಪಿತೂರಿ ಮತ್ತು ಸುಳ್ಳು ಹೇಳಿಕೆಗಳನ್ನು ನೀಡುವುದಕ್ಕಾಗಿ ಟ್ರಂಪ್ ವಿರುದ್ಧ ಇಂತಹ ಕ್ರಮವನ್ನು ತೆಗೆದುಕೊಳ್ಳುವಂತೆ ಹೌಸ್ ಪ್ಯಾನೆಲ್ ಸರ್ವಾನುಮತದಿಂದ ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿತು.

ಉದ್ದೇಶಪೂರ್ವಕವಾಗಿ ಆ ಘಟನೆ ನಡೆಸಲಾಗಿದೆ
ತನಿಖೆಯ ಸಂದರ್ಭದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮ್ಮ ಸಂವಿಧಾನದ ಅಡಿಯಲ್ಲಿ ಶಾಂತಿಯುತ ಅಧಿಕಾರದ ಪರಿವರ್ತನೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಈ ಘಟನೆಯನ್ನು ಆಯೋಜಿಸಿದ್ದಾರೆ ಎಂಬುದಕ್ಕೆ ಸಮಿತಿಯು ಮಹತ್ವದ ಪುರಾವೆಗಳನ್ನು ಕಂಡುಕೊಂಡಿದೆ ಎಂದು ಜೆಮೀ ರಾಸ್ಕಿನ್ ಹೇಳಿದರು.

ಮತ್ತಷ್ಟು ಓದಿ: Donald Trump: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಾನು ರೆಡಿ; ಡೊನಾಲ್ಡ್​ ಟ್ರಂಪ್ ಘೋಷಣೆ

6 ಜನವರಿ 2021 ರಂದು ಕ್ಯಾಪಿಟಲ್ ಹಿಲ್‌ನಲ್ಲಿ ಹಿಂಸಾಚಾರ ನಡೆದಿತ್ತು

ಜನವರಿ 6, 2021 ರಂದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಚುನಾವಣೆಯಲ್ಲಿ ಸೋಲಿನ ನಂತರ ಯುಎಸ್ ಸಂಸತ್ತಿನ ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆಸಿದ್ದರು.

ನವೆಂಬರ್​ನಲ್ಲಿ ನಡೆದ ಮತದಾನದಲ್ಲಿ ಬೈಡನ್ ಅವರ ವಿಜಯವನ್ನು ಕಾಂಗ್ರೆಸ್ ಪ್ರಾಮಾಣಿಕರಿಸುತ್ತಿದ್ದಂತೆ ಚುನಾವಣಾ ಫಲಿತಾಂಶಗಳ ವಿರುದ್ಧ ಹೋರಾಡಲು ಟ್ರಂಪ್ ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿದ್ದರು. ಈ ಕಾರಣಕ್ಕಾಗಿ ಕ್ಯಾಪಿಟಲ್​ನಲ್ಲಿ ಹಿಂದೆಂದೂ ಆಗದ ಘಟನೆಗಳು ಜರುಗಿದ್ದವು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

LEAVE A REPLY

Please enter your comment!
Please enter your name here