CCB Raid on Prohibited Hookah Centres: Hookah Flavor worth 12.5 Lakh seized | ನಿಷೇಧಿತ ಹುಕ್ಕಾ ಕೇಂದ್ರಗಳ ಮೇಲೆ ಸಿಸಿಬಿ ದಾಳಿ: 12.5 ಲಕ್ಷ ಮೌಲ್ಯದ ಹುಕ್ಕಾ ಫ್ಲೇವರ್ ವಶಕ್ಕೆ
ಬೆಂಗಳೂರು: ನಿಷೇಧಿತ ಹುಕ್ಕಾ ಕೇಂದ್ರಗಳ ಮೇಲೆ ಸಿಸಿಬಿ ದಾಳಿ ನಡೆಸಿದ್ದು ಮಹಾಲಕ್ಷ್ಮೀ ಲೇ ಔಟ್, ಹೆಚ್ ಎ ಎಲ್ ಹಾಗೂ ಕೆ.ಆರ್ ಪುರಂ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ 12.5 ಲಕ್ಷ ಮೌಲ್ಯದ ಹುಕ್ಕಾ ಫ್ಲೇವರ್ ಹಾಗೂ ಇತರೇ ವಸ್ತುಗಳು ಸೀಜ್ ಮಾಡಲಾಗಿದೆ.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಹುಕ್ಕಾ ಬಾರ್ ಗಳನ್ನು ನಿಷೇಧ ಮಾಡಲಾಗಿತ್ತು ಆದ್ರೂ ಅನಧಿಕೃತವಾಗಿ ಹುಕ್ಕಾ ಬಾರ್ ಗಳನ್ನು ನಡೆಸ್ತಾ ಇದ್ದರು ಸೂಕ್ತ ಮಾಹಿತಿ ಆಧರಿಸಿ ದಾಳಿ ಮಾಡಿರೋ ನಗರ ಸಿಸಿಬಿ ಪೊಲೀಸರು ಕಾರ್ಯಾಚರಣೆಯಲ್ಲಿ ಏಳು ಜನರನ್ನು ಬಂಧನ ಮಾಡಲಾಗಿದೆ
12.5 ಲಕ್ಷ ಮೌಲ್ಯದ ಹುಕ್ಕಾ ಫ್ಲೇವರ್ ಹಾಗೂ ಇತರೇ ವಸ್ತುಗಳು ಸೀಜ್ ಮಾಡಲಾಗಿದ್ದು ನಿಷೇಧ ಆದಾಗಿನಿಂದಲೂ ಸುಮಾರು 20 ಹುಕ್ಕಾ ಬಾರ್ ಗಳು ಅನಧಿಕೃತವಾಗಿ ನಡೀತಾ ಇತ್ತು ಎಲ್ಲೆಲ್ಲಿ ಅನಧಿಕೃತವಾಗಿ ನಡೆಸ್ತಾ ಇದ್ದಾರೆ ಅಂತ ಹುಕ್ಕಾಕೇಂದ್ರಗಳನ್ನು ಪತ್ತೆ ಮಾಡಿ ಕ್ಲೋಸ್ ಮಾಡಲಾಗ್ತಿದೆ 710 ಹುಕ್ಕಾ ಫ್ಲೇವರ್, 36 ಹುಕ್ಕಾ ಪ್ಯಾಕೇಟ್, 28 ಬಾಕ್ಸ್ ಫಾಯಿಲ್ ಪೇಪರ್ 19 ಪಿಲ್ಟರ್ ಗಳು ಜೊತೆಗೆ 25 ಹುಕ್ಕಾ ಪೈಪ್ ಗಳನ್ನು ಸೀಜ್ ಮಾಡಿರೋ ಸಿಸಿಬಿ ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿಕೆ
