Home ಬೆಂಗಳೂರು ನಗರ ಅನ್ನ ಭಾಗ್ಯ ಯೋಜನೆಗೆ ಜುಲೈ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಅನ್ನ ಭಾಗ್ಯ ಯೋಜನೆಗೆ ಜುಲೈ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

18
0
Chief Minister Siddaramaiah to launch Anna Bhagya Yojana on July 10
Chief Minister Siddaramaiah to launch Anna Bhagya Yojana on July 10
Advertisement
bengaluru

ಬೆಂಗಳೂರು:

ಅನ್ನ ಭಾಗ್ಯ ಯೋಜನೆಗೆ ಇದೇ ಜುಲೈ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಜುಲೈ 10ರಂದು ವಿಧಾನ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅನ್ನ ಭಾಗ್ಯ ಯೋಜನೆಗೆ ಚಾಲನೆ ನೀಡಿದ ನಂತರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನ್ನ ಭಾಗ್ಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಕೇಂದ್ರ ಸರ್ಕಾರದಿಂದ ಅಕ್ಕಿ ದೊರೆಯದ ಕಾರಣ ಈಗಾಗಲೇ ವಿತರಿಸುತ್ತಿರುವ 5 ಕೆಜಿ ಜೊತೆಗೆ ತಾತ್ಕಾಲಿಕವಾಗಿ ಕೆಜಿಗೆ 34 ರೂಪಾಯಿಗಳಂತೆ 5ಕೆಜಿಗೆ 170 ರೂಗಳಂತೆ ಪ್ರತಿ ವ್ಯಕ್ತಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ವರ್ಗಾಯಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಜುಲೈ 10ರಂದು ಅಕ್ಕಿ ಪೂರೈಕೆ ಜೊತೆಗೆ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುವ ಪ್ರಕ್ರಿಯೆ ಸರ್ಕಾರದಿಂದ ಆರಂಭವಾಗಲಿದೆ.

bengaluru bengaluru


bengaluru

LEAVE A REPLY

Please enter your comment!
Please enter your name here