Home Uncategorized CIBIL Score: ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕೇ? ಹಾಗಿದ್ದರೆ ಈ ತಪ್ಪುಗಳನ್ನು ಮಾಡಬೇಡಿ

CIBIL Score: ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕೇ? ಹಾಗಿದ್ದರೆ ಈ ತಪ್ಪುಗಳನ್ನು ಮಾಡಬೇಡಿ

22
0
Advertisement
bengaluru

ಕೋವಿಡ್ ಸಾಂಕ್ರಾಮಿಕ ಸಂದರ್ಭದ ಅನಿಶ್ಚಿತತೆ ಈಗ ದೂರವಾಗಿದ್ದು, ಹೊಸ ಉದ್ಯಮ ಸ್ಥಾಪನೆ (Business) ಅಥವಾ ವ್ಯವಹಾರ ಆರಂಭಿಸಲು ಜನರು ಮುಂದಾಗುತ್ತಿದ್ದಾರೆ. ಪರಿಣಾಮವಾಗಿ ಬ್ಯಾಂಕ್​​ಗಳಲ್ಲಿ ಸಾಲದ ಬೇಡಿಕೆಯೂ (Loan Demand) ಹೆಚ್ಚಾಗುತ್ತಿದೆ. ಸಾಲದ ಅರ್ಜಿಗೆ ಬ್ಯಾಂಕ್​ಗಳಲ್ಲಿ ಅನುಮೋದನೆ ಸಿಗಬೇಕಾದರೆ ಸಿಬಿಲ್ ಸ್ಕೋರ್ (CIBIL score) ಉತ್ತಮವಾಗಿರಬೇಕಾಗುತ್ತದೆ. ಸಿಬಿಲ್ ಅಂದರೆ, ನಮ್ಮ ಸಾಲದ ವ್ಯವಹಾರವನ್ನು ಟ್ರ್ಯಾಕ್ ಮಾಡುವ ಮತ್ತು ವರದಿ ಮಾಡಿ ಅದಕ್ಕನುಗುಣವಾಗಿ ಅಂಕಗಳನ್ನು ನೀಡುವ ಸಂಸ್ಥೆಯಾಗಿದೆ. ಸರಳವಾಗಿ ಹೇಳುವುದಾದರೆ, ಸಿಬಿಲ್ ಸ್ಕೋರ್ ಎಂದರೆ ನಮ್ಮ ಕ್ರೆಡಿಟ್ ಸ್ಕೋರ್ (Credit Score) ಎನ್ನಬಹುದು. ವ್ಯಕ್ತಿಯ ಸಾಲದ ಇತಿಹಾಸ ಚೆನ್ನಾಗಿದ್ದರೆ ಸಿಬಿಲ್ ಸ್ಕೋರ್ ಕೂಡ ಉತ್ತಮವಾಗಿರುತ್ತದೆ. ಸಿಬಿಲ್ ಸ್ಕೋರ್ ಸಾಮಾನ್ಯವಾಗಿ 300 ರಿಂದ 900 ರವರೆಗೆ ಇರುತ್ತದೆ. 750 ಮತ್ತು ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. 550 ರಿಂದ 750 ಅನ್ನು ಡಿಸೆಂಟ್ ಕ್ರೆಡಿಟ್ ಸ್ಕೋರ್ ಎಂದು ಕರೆಯಬಹುದು. 550ಕ್ಕಿಂತ ಕಡಿಮೆ ಇದ್ದರೆ ಕಳಪೆ ಸ್ಕೋರ್ ಎಂದು ಬ್ಯಾಂಕ್​ಗಳು ಪರಿಗಣಿಸುತ್ತವೆ.

ಸಿಬಿಲ್ ಸ್ಕೋರ್ ಎಂಬುದು ಕೇವಲ ಒಂದು ದಿನದಲ್ಲಿ ನಿರ್ಧಾರವಾಗುವ ಸಂಖ್ಯೆಯಲ್ಲ. ಬ್ಯಾಂಕ್ ಗ್ರಾಹಕನ ಸುದೀರ್ಘ ಹಣಕಾಸು ಚಟುವಟಿಕೆಗಳ, ಮುಖ್ಯವಾಗಿ ಸಾಲ ಹಾಗೂ ಮರುಪಾವತಿಯ ಮೇಲೆ ಸಿಬಿಲ್ ಸ್ಕೋರ್ ನಿರ್ಧಾರವಾಗುತ್ತದೆ. ಉತ್ತಮ ಸಿಬಿಲ್ ಸ್ಕೋರ್ ನಮ್ಮದಾಗಲು ಸುಮಾರು 18ರಿಂದ 36 ತಿಂಗಳುಗಳು ತೆಗೆದುಕೊಳ್ಳಬಹುದು. ವ್ಯವಹಾರದ ವೇಳೆ ನಾವು ಮಾಡುವ ಅನೇಕ ತಪ್ಪುಗಳು ಸಿಬಿಲ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಿದ್ದರೆ, ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕಿದ್ದರೆ ನಾವು ಯಾವ ತಪ್ಪುಗಳನ್ನು ಮಾಡಬಾರದು? ಇಲ್ಲಿದೆ ಮಾಹಿತಿ.

ಅತಿಯಾದ ಸಾಲದ ಬಗ್ಗೆ ಇರಲಿ ಎಚ್ಚರ

ಖರ್ಚು ಮಾಡುವ ಪ್ರಮಾಣದ ಬಗ್ಗೆ ಸದಾ ಎಚ್ಚರ ವಹಿಸಬೇಕು. ಹೆಚ್ಚೆಚ್ಚು ಖರ್ಚು ಮಾಡುವುದು ಸಾಲದ ಅಗತ್ಯವನ್ನು ಹೆಚ್ಚಿಸುತ್ತದೆ. ಅತಿಯಾದ ಖರ್ಚು ಮಾಡಿ ಅದಕ್ಕಾಗಿ ದೊಡ್ಡ ಮೊತ್ತದ ಸಾಲ ಮಾಡಿದರೆ ಅದು ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು.

bengaluru bengaluru

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದೇ ಇರಬೇಡಿ

ಕ್ರೆಡಿಟ್ ಕಾರ್ಡ್ ಬಿಲ್​ ಅನ್ನು ಪಾವತಿಸದೇ ಇರುವುದು, ತಡವಾಗಿ ಪಾವತಿಸುವುದು ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಕ್ರೆಡಿಟ್ ಕಾರ್ಡ್ ಪಾವತಿಯನ್ನು ಸಮಯಕ್ಕೆ ಸರಿಯಾಗಿ ಮಾಡುವ ಮೂಲಕ ಸಿಬಿಲ್ ಸ್ಕೋರ್ ಉತ್ತಮವಾಗಿರುವಂತೆ ನೋಡಿಕೊಳ್ಳಬಹುದು. ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಇಎಂಐ ಪಾವತಿಸದೇ ಇರುವುದು ಕಳಪೆ ಹಣಕಾಸು ಯೋಜನೆಯನ್ನು ಬಿಂಬಿಸುತ್ತದೆ. ಇದರಿಂದಾಗಿ ಸಿಬಿಲ್ ಸ್ಕೋರ್ ಕಡಿಮೆಯಾಗಬಹುದು.

ಇದನ್ನೂ ಓದಿ: Home Loan: ಒಂದಕ್ಕಿಂತ ಹೆಚ್ಚಿನ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ ಇದೆಯೇ? ಗೃಹ ಸಾಲದ ಪ್ರಯೋಜನಗಳೇನು? ಇಲ್ಲಿದೆ ವಿವರ

ಅಸುರಕ್ಷಿತ ಸಾಲ, ಹೆಚ್ಚಿನ ಸಾಲ ಪಡೆಯಬೇಡಿ

ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್​ ಸಾಲಗಳಂಥ ಅಸುರಕ್ಷಿತ ಸಾಲಗಳನ್ನು ಪಡೆಯಬೇಡಿ. ಇವುಗಳು ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ. ಗೃಹ ಸಾಲ, ಶಿಕ್ಷಣ ಸಾಲ, ವಾಹನ ಸಾಲದಂಥ ಸುರಕ್ಷಿತ ಸಾಲಗಳನ್ನಷ್ಟೇ ಪಡೆಯಿರಿ. ಒಂದೇ ಬಾರಿಗೆ ಹಲವು ಸಾಲಗಳಿಗೆ ಅರ್ಜಿ ಸಲ್ಲಿಸುವುದೂ ಸಿಬಿಲ್ ಸ್ಕೋರ್​​ ಕುಸಿಯಲು ಕಾರಣವಾಗಬಹುದು.

ಸಾಲಗಳ ಇಎಂಐ ನಿಗದಿತ ದಿನದೊಳಗೆ ಪಾವತಿಸಿ

ಕ್ರೆಡಿಟ್ ಕಾರ್ಡ್ ಬಿಲ್, ಅಸ್ತಿತ್ವದಲ್ಲಿರುವ ಸಾಲಗಳ ಇಎಂಐಯನ್ನು ನಿಗದಿತ ದಿನದೊಳಗೆ ಪಾವತಿಸಿ. ವಿಳಂಬ ಪಾವತಿಯು ಸಿಬಿಲ್ ಸ್ಕೋರ್ ಕಡಿಮೆಯಾಗಲು ಕಾರಣವಾಗುತ್ತದೆ.

ಸಿಬಿಲ್ ಸ್ಕೋರ್ ಪರಿಶೀಲಿಸುತ್ತಿರಿ

ಸದ್ಯ ನಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬುದು ತಿಳಿಯದಿದ್ದರೆ ಅದನ್ನು ಉತ್ತಮಗೊಳಿಸಲು ಯೋಜನೆ ರೂಪಿಸುವುದು ಕಷ್ಟವಾಗಬಹುದು. ಅದಕ್ಕಾಗಿ ನಿರ್ದಿಷ್ಟ ಸಮಯಕ್ಕೊಮ್ಮೆ ಸಿಬಿಲ್ ಸ್ಕೋರ್ ಪರಿಶೀಲಿಸುತ್ತಿರಿ. ನಿಯಮಿತವಾಗಿ ಸಿಬಿಲ್ ಸ್ಕೋರ್ ಪರಿಶೀಲಿಸುತ್ತಿದ್ದರೆ, ಒಂದು ವೇಳೆ ತಾಂತ್ರಿಕ ದೋಷಗಳು ಮತ್ತು ಲೋಪಗಳಿಂದ ಸಿಬಿಲ್ ಸ್ಕೋರ್ ಕಡಿಮೆ ಇದ್ದಲ್ಲಿ ಸರಿಪಡಿಸಿಕೊಳ್ಳಲು ಅನುಕೂಲವಾಗಲಿದೆ. www.cibil.com ತಾಣಕ್ಕೆ ಭೇಟಿ ನೀಡುವ ಮೂಲಕ ಸಿಬಿಲ್ ಸ್ಕೋರ್ ಪರಿಶೀಲಿಸಬಹುದು.

ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಪರ್ಸನಲ್ ಲೋನ್ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಜಂಟಿ ಸಾಲದ ಖಾತೆಗಳ ಬಗ್ಗೆ ಎಚ್ಚರವಿರಿ

ಜಂಟಿ ಸಾಲದ ಖಾತೆಗಳನ್ನು ಹೊಂದುವುದನ್ನು ಆದಷ್ಟು ತಪ್ಪಿಸಿದರೆ ಒಳ್ಳೆಯದು. ಇಂಥ ಸಾಲದ ಮರುಪಾವತಿ ವಿಳಂದ ಅಥವಾ ಇತರ ಸಮಸ್ಯೆಗಳೂ ಸಹ ನೇರವಾಗಿ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ ಅನಿವಾರ್ಯವಾದಲ್ಲಿ ನೀವು ಅತ್ಯಂತ ನಂಬಿಕೆ ಇಟ್ಟಿರುವ ವ್ಯಕ್ತಿ ಜತೆ ಮಾತ್ರವೇ ಜಂಟಿಯಾಗಿ ಸಾಲ ಪಡೆಯಿರಿ.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here