ಜಪಾನ್‌ನಲ್ಲಿ ಪ್ಯಾನಾಸೋನಿಕ್ ಆಟೋಮೋಟಿವ್ ನಾಯಕತ್ವದೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಎಂ.ಬಿ. ಪಾಟೀಲ್. ಚಿತ್ರ: ಸಿಎಂಒ ಕರ್ನಾಟಕ
ಟೋಕಿಯೊ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಬುಧವಾರ ಜಪಾನ್‌ನಲ್ಲಿ ಪ್ಯಾನಾಸೋನಿಕ್ ಆಟೋಮೋಟಿವ್ ನಾಯಕತ್ವ ತಂಡವನ್ನು ಭೇಟಿ ಮಾಡಿದರು. ತಂಡದ ನೇತೃತ್ವವನ್ನು ಅಧ್ಯಕ್ಷ ಹಾಗೂ ಸಿಇಒ ಮೈಕ್ ನಾಗಯಸು ವಹಿಸಿದ್ದರು.
ಸುಧಾರಿತ ಉತ್ಪಾದನೆ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (ಜಿಸಿಸಿ) ಕರ್ನಾಟಕವಿರುವ ಬಲವನ್ನು ಪ್ರಸ್ತುತಪಡಿಸುವುದು ಮತ್ತು ರಾಜ್ಯದಲ್ಲಿ ಪ್ಯಾನಾಸೋನಿಕ್ ಆಟೋಮೋಟಿವ್ ತನ್ನ ಇರುವಿಕೆ ಮತ್ತು ಕಾರ್ಯಾಚರಣೆ ವಿಸ್ತರಿಸುವ ಅವಕಾಶಗಳನ್ನು ಅನ್ವೇಷಿಸುವುದರ ಮೇಲೆ ಚರ್ಚೆ ಕೇಂದ್ರೀಕೃತವಾಗಿತ್ತು.
ಹೂಡಿಕೆಗಳು ಮತ್ತು ಭವಿಷ್ಯದ ಸಹಯೋಗಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕರ್ನಾಟಕ ನಿಯೋಗವು ಕಂಪನಿಗೆ ಭರವಸೆ ನೀಡಿತು.
ಜಾಗತಿಕ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ 2027ರಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಮತ್ತು ಕೈಗಾರಿಕಾ ಸಚಿವರು ಪ್ಯಾನಾಸೋನಿಕ್ ಆಟೋಮೋಟಿವ್‌ಗೆ ಆಹ್ವಾನ ನೀಡಿದರು. ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಮತ್ತು ಕರ್ನಾಟಕ ಹಾಗೂ ಜಪಾನ್ ನಡುವಿನ ಕೈಗಾರಿಕಾ ಸಹಯೋಗ ಬಲಪಡಿಸಲು ಮಾತುಕತೆ ಮುಂದುವರಿಸುವ ಆಸಕ್ತಿಯನ್ನೂ ವ್ಯಕ್ತಪಡಿಸಿದರು.
ಇದನ್ನೂ ಓದಿ:
