ಟೋಕಿಯೊದಲ್ಲಿ ಜಪಾನ್ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಚಿತ್ರ: ಒದಗಿಸಿದ್ದು
ಟೋಕಿಯೊ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟೋಕಿಯೊದಲ್ಲಿ ಜಪಾನ್ನ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರನ್ನು ಭೇಟಿಯಾಗಿ, ಜಪಾನ್ ಮತ್ತು ಕರ್ನಾಟಕ ನಡುವಿನ ಆರ್ಥಿಕ ಸಹಕಾರ ಹಾಗೂ ದ್ವಿಪಕ್ಷೀಯ ಸಹಯೋಗವನ್ನು ಬಲಪಡಿಸುವ ಮಹತ್ವವನ್ನು ಒತ್ತಿ ಹೇಳಿದರು.
ಕರ್ನಾಟಕದಲ್ಲಿ ಜಪಾನ್ನಿಂದ ಹೆಚ್ಚಿನ ಹೂಡಿಕೆಗೆ ಪ್ರೋತ್ಸಾಹ ನೀಡಿದ ಶಿವಕುಮಾರ್, ಕರ್ನಾಟಕದ 2027ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಜಪಾನ್ ಸರ್ಕಾರದ ಉನ್ನತ ಮಟ್ಟದ ನಿಯೋಗವನ್ನು ಆಹ್ವಾನಿಸಿದರು; ಸಮಾವೇಶದಲ್ಲಿ ಜಪಾನ್ಗಾಗಿ ಪ್ರತ್ಯೇಕ ಕಂಟ್ರಿ ಪೆವಿಲಿಯನ್ ಇರಲಿದೆ.
ಬೆಂಗಳೂರು ಮೆಟ್ರೋ ಮತ್ತು ಬೆಂಗಳೂರು ಜಲಮಂಡಳಿ ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಜಪಾನ್ ನೀಡುತ್ತಿರುವ ನಿರಂತರ ಬೆಂಬಲಕ್ಕೆ ಅವರು ಕೃತಜ್ಞತೆ ಸಲ್ಲಿಸಿ, ಕರ್ನಾಟಕದ ಅಭಿವೃದ್ಧಿ ಆದ್ಯತೆಗಳಲ್ಲಿ ಇನ್ನಷ್ಟು ಸಹಯೋಗ ಕೋರಿದರು.
ಮುಖ್ಯಮಂತ್ರಿ ನೇತೃತ್ವದ ನಿಯೋಗವನ್ನು ನಕಾಸೋನೆ ಆತ್ಮೀಯವಾಗಿ ಸ್ವಾಗತಿಸಿ, ಭಾರತ–ಜಪಾನ್ ನಡುವಿನ ಬಲಿಷ್ಠ ಹಾಗೂ ದೀರ್ಘಕಾಲಿಕ ಸಂಬಂಧವನ್ನು ಶ್ಲಾಘಿಸಿದರು. ಜಪಾನ್ ಹೂಡಿಕೆಗೆ ಕರ್ನಾಟಕ ಪ್ರಮುಖ ತಾಣ ಎಂದು ಒತ್ತಿ ಹೇಳಿದ ಅವರು, ಜಪಾನ್ ಮತ್ತು ಕರ್ನಾಟಕ ನಡುವಿನ ಮುಂದುವರಿದ ಸಂಪರ್ಕವನ್ನು ಸ್ವಾಗತಿಸಿದರು.
ಇದನ್ನೂ ಓದಿ:
