Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ
  • ಕರ್ನಾಟಕ

ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ

The Bengaluru Live November 26, 2026 2:03 PM 1 minute read
ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಸಭೆಯಲ್ಲಿ ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ

ನವೆಂಬರ್ 26ರಂದು ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ.

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಜನವರಿಯೊಳಗೆ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾರ್ಚ್–ಏಪ್ರಿಲ್ ತಿಂಗಳೊಳಗೆ ನೇಮಕಾತಿ ಆದೇಶಗಳನ್ನು ನೀಡಬೇಕು. ಜೂನ್‌ನಲ್ಲಿ ಶಾಲೆಗಳು ಆರಂಭವಾಗುವ ವೇಳೆಗೆ ಹೊಸ ಶಿಕ್ಷಕರು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವಂತಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ನವೆಂಬರ್ 26ರಂದು ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಶಾಲಾ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಷ್ಮಿ ಮಹೇಶ್ ಅವರಿಗೆ ನೇಮಕಾತಿ ಪ್ರಕ್ರಿಯೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಶಿಕ್ಷಕರು ಮತ್ತು ಸಿಬ್ಬಂದಿ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. 01-04-2006ಕ್ಕೂ ಮೊದಲು ಅಧಿಸೂಚನೆಗೊಂಡು ನಂತರ ನೇಮಕಾತಿ ಆದೇಶ ಪಡೆದ ಅನುದಾನಿತ ನೌಕರರನ್ನು ಸರ್ಕಾರಿ ನೌಕರರ ಮಾದರಿಯಲ್ಲಿ ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸುವುದು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಸಂಬಂಧಿಸಿದಂತೆ ಕಾಲ್ಪನಿಕ ವೇತನ ಕುರಿತು ಹೈಕೋರ್ಟ್ ನೀಡಿರುವ ಆದೇಶ ಅನುಷ್ಠಾನಗೊಳಿಸುವುದು ಹಾಗೂ ಅನುದಾನಿತ ಶಾಲಾ-ಕಾಲೇಜುಗಳಲ್ಲಿ 2015ರ ನಂತರ ತೆರವಾಗಿರುವ ಹುದ್ದೆಗಳನ್ನು ವಿಳಂಬವಿಲ್ಲದೆ ಭರ್ತಿ ಮಾಡುವ ಕುರಿತು ಚರ್ಚಿಸಲಾಯಿತು. ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 1998ರಿಂದ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವುದು, ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಸರಳೀಕರಿಸಲು ನೇಮಕಗೊಂಡ ಸದನದ ಸಮಿತಿಯ ವರದಿ ಜಾರಿಗೊಳಿಸುವುದು ಹಾಗೂ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಪದೋನ್ನತಿ ಹೊಂದಿದ ಶಿಕ್ಷಕರು ಮತ್ತು ಉಪನ್ಯಾಸಕರಿಗೆ 15, 20 ಹಾಗೂ 25 ವರ್ಷಗಳ ಕಾಲಮಿತಿ ಬಡ್ತಿ ನೀಡುವಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಬಗ್ಗೆಯೂ ಚರ್ಚೆ ನಡೆಯಿತು.

ಸರ್ಕಾರಿ ನೌಕರರಿಗೆ ಇರುವ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುದಾನಿತ ನೌಕರರಿಗೂ ವಿಸ್ತರಿಸುವುದು, ಸರ್ಕಾರಿ ಮಹಿಳಾ ನೌಕರರಿಗೆ ನೀಡಲಾಗುತ್ತಿರುವ ಋತುಚಕ್ರ ರಜೆಯನ್ನು ಅನುದಾನಿತ ಮಹಿಳಾ ಸಿಬ್ಬಂದಿಗೂ ಕಲ್ಪಿಸುವುದು ಹಾಗೂ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ದಾಖಲೆ ನಿರ್ವಹಣೆ ಮತ್ತು ಆನ್‌ಲೈನ್ ದಾಖಲೆಗಳ ಅಪ್‌ಲೋಡ್‌ನಿಂದ ಉಂಟಾಗುತ್ತಿರುವ ಹೆಚ್ಚುವರಿ ಹೊರೆ ಕಡಿಮೆ ಮಾಡುವ ಬಗ್ಗೆಯೂ ಸದಸ್ಯರು ಪ್ರಸ್ತಾಪಿಸಿದರು. ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿ ಮಾಡುವುದು, 1995ರ ನಂತರ ಸ್ಥಾಪನೆಯಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಒದಗಿಸುವುದು, ಅನುದಾನಿತ ಶಾಲೆಗಳಿಗೂ ದ್ವಿಭಾಷಾ ನೀತಿ ವಿಸ್ತರಿಸುವುದು ಹಾಗೂ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಪ್ರವೇಶಕ್ಕೆ ವಿಧಿಸಲಾಗುವ ದಂಡವನ್ನು ರದ್ದುಗೊಳಿಸುವಂತೆಯೂ ಸದಸ್ಯರು ಮನವಿ ಮಾಡಿದರು.

ಸಭೆಯಲ್ಲಿ ಪ್ರಸ್ತಾಪವಾದ ಎಲ್ಲ ವಿಷಯಗಳಿಗೂ ಸಚಿವ ಮಧು ಬಂಗಾರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅನುದಾನರಹಿತ ಶಾಲಾ-ಕಾಲೇಜುಗಳ ಶಿಕ್ಷಕರಿಗೂ ಸರ್ಕಾರದಿಂದ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎ.ಪಿ. ರಂಗನಾಥ್ ಅವರು ಮನವಿ ಮಾಡಿದರು. ಲಿಖಿತ ಮನವಿ ಸಲ್ಲಿಸುವಂತೆ ತಿಳಿಸಿದ ಸಚಿವರು, ಆರೋಗ್ಯ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, “ಎಸ್. ಬಂಗಾರಪ್ಪ ಅವರ ಪುತ್ರರಾಗಿರುವುದು ಸಾರ್ಥಕವಾಗಿದೆ. ಶಿಕ್ಷಣ ಸಚಿವರಾಗಿ ನನಗಿಂತಲೂ ಉತ್ತಮ ಕೆಲಸಗಳನ್ನು ಮಾಡುತ್ತಿದ್ದೀರಿ. ಇಷ್ಟು ತ್ವರಿತವಾಗಿ ಸಭೆ ಕರೆದು ನಮ್ಮ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿರುವುದು ಅಭಿನಂದನೀಯ” ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು, ಇಂದಿನ ಸಭೆ ಅರ್ಥಪೂರ್ಣವಾಗಿದೆ ಮತ್ತು ಕೆಲವು ವಿಚಾರಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಎಸ್.ಎಲ್. ಭೋಜೇಗೌಡ, ಶಶೀಲ್ ಜಿ. ನಮೋಶಿ, ಎ.ಪಿ. ರಂಗನಾಥ್, ಡಾ. ಧನಂಜಯ ಸರ್ಜಿ, ಹನಮಂತ ನಿರಾಣಿ, ಕೆ. ವಿವೇಕಾನಂದ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ

Related Stories

ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಪಡಿತರ ವಿತರಣೆಯ ಪ್ರಾತಿನಿಧಿಕ ಎಐ ಚಿತ್ರ
  • ಕರ್ನಾಟಕ

ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ

The Bengaluru Live November 26, 2026 1:05 PM
ಮೈಸೂರಿನಲ್ಲಿ ಸಂವಿಧಾನ ರಕ್ಷಣಾ ಮಾರ್ಚ್ ಬ್ಯಾನರ್ ಹಿಡಿದು ಸಾಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಕಾಂಗ್ರೆಸ್ ನಾಯಕರು
  • ಕರ್ನಾಟಕ

ಸಂವಿಧಾನ ದಿನ: ಮೈಸೂರಿನಲ್ಲಿ ‘ಸಂವಿಧಾನ ರಕ್ಷಣಾ ಮಾರ್ಚ್’ಗೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

The Bengaluru Live November 26, 2026 11:55 AM
ಮಂಗಳೂರಿನಲ್ಲಿ ಡೆಲಾಯ್ಟ್ ಕಚೇರಿ ಉದ್ಘಾಟನೆಯಲ್ಲಿ ಮಾತನಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ

ರಾಜ್ಯ ಜಿಡಿಪಿಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ: ಪ್ರಿಯಾಂಕ್ ಖರ್ಗೆ

The Bengaluru Live November 25, 2026 9:46 PM

Latest Post

ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಸಭೆಯಲ್ಲಿ ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ಕರ್ನಾಟಕ

ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ

November 26, 2026 2:03 PM
ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಪಡಿತರ ವಿತರಣೆಯ ಪ್ರಾತಿನಿಧಿಕ ಎಐ ಚಿತ್ರ
  • ಕರ್ನಾಟಕ

ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ

November 26, 2026 1:05 PM
ಸಂವಿಧಾನ ದಿನ: ಮೈಸೂರಿನಲ್ಲಿ ‘ಸಂವಿಧಾನ ರಕ್ಷಣಾ ಮಾರ್ಚ್’ಗೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮೈಸೂರಿನಲ್ಲಿ ಸಂವಿಧಾನ ರಕ್ಷಣಾ ಮಾರ್ಚ್ ಬ್ಯಾನರ್ ಹಿಡಿದು ಸಾಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಕಾಂಗ್ರೆಸ್ ನಾಯಕರು
  • ಕರ್ನಾಟಕ

ಸಂವಿಧಾನ ದಿನ: ಮೈಸೂರಿನಲ್ಲಿ ‘ಸಂವಿಧಾನ ರಕ್ಷಣಾ ಮಾರ್ಚ್’ಗೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

November 26, 2026 11:55 AM
ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ ಸಂವಿಧಾನ ದಿನದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ನೆರೆದ ಜಿಬಿಎ ಅಧಿಕಾರಿಗಳು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ

November 26, 2026 11:33 AM
ಸಂವಿಧಾನ ದಿನ: ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಪರಮೇಶ್ವರ ಪುಷ್ಪನಮನ ವಿಧಾನಸೌಧದ ಮುಂಭಾಗದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಸಂವಿಧಾನ ದಿನ: ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಪರಮೇಶ್ವರ ಪುಷ್ಪನಮನ

November 26, 2026 10:43 AM
ಏರೋ ಇಂಡಿಯಾ 2027: ಪ್ರದರ್ಶಕರ ದಾಖಲೆಯ ಬೇಡಿಕೆ; ಎರಡು ಹೊಸ ಹ್ಯಾಂಗರ್, ಮೊದಲ ಬಾರಿಗೆ ಮೆಜ್ಜನೈನ್ ಮಹಡಿಗೆ ಅನುಮತಿ ಏರೋ ಇಂಡಿಯಾ ಪ್ರದರ್ಶನ ಸ್ಥಳದಲ್ಲಿ ಏರೋ ಇಂಡಿಯಾ ಲಾಂಛನದ ಚೀಲಗಳು ಮತ್ತು ರಾಷ್ಟ್ರಧ್ವಜಗಳು
  • ಬೆಂಗಳೂರು ನಗರ

ಏರೋ ಇಂಡಿಯಾ 2027: ಪ್ರದರ್ಶಕರ ದಾಖಲೆಯ ಬೇಡಿಕೆ; ಎರಡು ಹೊಸ ಹ್ಯಾಂಗರ್, ಮೊದಲ ಬಾರಿಗೆ ಮೆಜ್ಜನೈನ್ ಮಹಡಿಗೆ ಅನುಮತಿ

November 25, 2026 10:03 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಸಭೆಯಲ್ಲಿ ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ಕರ್ನಾಟಕ

ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ

The Bengaluru Live November 26, 2026 2:03 PM
ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಪಡಿತರ ವಿತರಣೆಯ ಪ್ರಾತಿನಿಧಿಕ ಎಐ ಚಿತ್ರ
  • ಕರ್ನಾಟಕ

ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ

The Bengaluru Live November 26, 2026 1:05 PM
ಮೈಸೂರಿನಲ್ಲಿ ಸಂವಿಧಾನ ರಕ್ಷಣಾ ಮಾರ್ಚ್ ಬ್ಯಾನರ್ ಹಿಡಿದು ಸಾಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಕಾಂಗ್ರೆಸ್ ನಾಯಕರು
  • ಕರ್ನಾಟಕ

ಸಂವಿಧಾನ ದಿನ: ಮೈಸೂರಿನಲ್ಲಿ ‘ಸಂವಿಧಾನ ರಕ್ಷಣಾ ಮಾರ್ಚ್’ಗೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

The Bengaluru Live November 26, 2026 11:55 AM
ಸಂವಿಧಾನ ದಿನದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ನೆರೆದ ಜಿಬಿಎ ಅಧಿಕಾರಿಗಳು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ

The Bengaluru Live November 26, 2026 11:33 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಶಿಕ್ಷಕರ ನೇಮಕಾತಿ ಪರೀಕ್ಷೆ ಜನವರಿಯೊಳಗೆ, ನೇಮಕಾತಿ ಆದೇಶ ಮಾರ್ಚ್–ಏಪ್ರಿಲ್‌ನಲ್ಲಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ
  • ಅಹಾರ ತಂತ್ರಾಂಶ, ಸರ್ವರ್ ಹಾಗೂ ಬಯೋಮೆಟ್ರಿಕ್ ತೊಂದರೆ: ನ.24-25ರಂದು ಪಡಿತರ ವಿತರಣೆಗೆ ಅಡ್ಡಿ; ವಿತರಣೆ ಸಮಯ ರಾತ್ರಿ 11.59ರವರೆಗೆ ವಿಸ್ತರಣೆ
  • ಸಂವಿಧಾನ ದಿನ: ಮೈಸೂರಿನಲ್ಲಿ ‘ಸಂವಿಧಾನ ರಕ್ಷಣಾ ಮಾರ್ಚ್’ಗೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
  • ಜಿಬಿಎ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಸಂವಿಧಾನ ದಿನಾಚರಣೆ; ಅಧಿಕಾರಿಗಳಿಂದ ಸಂವಿಧಾನದ ಪ್ರಸ್ತಾವನೆ ವಾಚನ
©Copyright 2025 The Bengaluru Live All rights reserved. | MoreNews by AF themes.