Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಆರೋಗ್ಯ
  • ರಾಜ್ಯಕ್ಕೆ 3 ಕೋಟಿ ಡೋಸ್‌ ಪೂರೈಕೆಯಾದರೆ ಅದನ್ನು ವಿತರಿಸಲು 4 ತಿಂಗಳು ಬೇಕಾಗಬಹುದು: ಮುಖ್ಯ ಕಾರ್ಯದರ್ಶಿ
  • ಆರೋಗ್ಯ
  • ಬೆಂಗಳೂರು ನಗರ

ರಾಜ್ಯಕ್ಕೆ 3 ಕೋಟಿ ಡೋಸ್‌ ಪೂರೈಕೆಯಾದರೆ ಅದನ್ನು ವಿತರಿಸಲು 4 ತಿಂಗಳು ಬೇಕಾಗಬಹುದು: ಮುಖ್ಯ ಕಾರ್ಯದರ್ಶಿ

The Bengaluru Live May 12, 2021 2:00 PM
ರಾಜ್ಯಕ್ಕೆ 3 ಕೋಟಿ ಡೋಸ್‌ ಪೂರೈಕೆಯಾದರೆ ಅದನ್ನು ವಿತರಿಸಲು 4 ತಿಂಗಳು ಬೇಕಾಗಬಹುದು: ಮುಖ್ಯ ಕಾರ್ಯದರ್ಶಿ

ರಾಜ್ಯಕ್ಕೆ 3 ಕೋಟಿ ಡೋಸ್‌ ಪೂರೈಕೆಯಾದರೆ ಅದನ್ನು ವಿತರಿಸಲು 4 ತಿಂಗಳು ಬೇಕಾಗಬಹುದು: ಮುಖ್ಯ ಕಾರ್ಯದರ್ಶಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

18ರಿಂದ 45 ವಯೋಮಾನದವರಿಗೆ 6 ಕೋಟಿ ಡೋಸ್‌ ಬೇಕಾಗಿದೆ

ಬೆಂಗಳೂರು:

ಕರ್ನಾಟಕಕ್ಕೆ 3 ಕೋಟಿ ಡೋಸ್‌ ಪೂರೈಕೆಯಾದರೆ ಅದನ್ನು ವಿತರಿಸಲು 4 ತಿಂಗಳು ಬೇಕಾಗಬಹುದು. ಅದೇ ರೀತಿ 18ರಿಂದ 45 ವಯೋಮಾನದವರಿಗೆ ರಾಜ್ಯವೇ ಲಸಿಕೆ ಖರೀದಿಸಿ ನೀಡುತ್ತಿದೆ. ಈ ವಯೋಮಾನದವರಿಗೆ ಕೊಡಲು ನಮಗೆ 6 ಕೋಟಿ ಡೋಸ್‌ ಬೇಕಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ತಿಳಿಸಿದ್ದಾರೆ.

ಸ್ಥಳೀಯ ಕನ್ನಡ ಚಾನೆಲ್‌ಗಳೊಂದಿಗೆ ಮಾತನಾಡಿದ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ 18ರಿಂದ 45 ವಯೋಮಾನದವರಿಗೆ ರಾಜ್ಯವೇ ಲಸಿಕೆ ಖರೀದಿಸಿ ನೀಡುತ್ತಿದೆ. ಅದಕ್ಕಾಗಿ 3 ಕೋಟಿ ಡೋಸ್‌ಗೆ ಬೇಡಿಕೆ ಸಲ್ಲಿಸಿದ್ದೇವೆ. ಅದರಲ್ಲಿ ಮಂಗಳವಾರದ ವರೆಗೆ 7 ಲಕ್ಷ ಕೋವಿಶೀಲ್ಡ್‌ ಬಂದಿದೆ. ಅದನ್ನು 200 ಕಡೆ ಇಟ್ಟಿದ್ದೇವೆ. ಈ ವಯೋಮಾನದವರಿಗೆ ಕೊಡಲು ನಮಗೆ 6 ಕೋಟಿ ಡೋಸ್‌ ಬೇಕಾಗಿದೆ. ಒಂದೇ ಬಾರಿ ಲಸಿಕೆಯನ್ನು ತಂದು ಇಟ್ಟುಕೊಳ್ಳಲು ಆಗುವುದಿಲ್ಲ. ನಾವು 3 ಕೋಟಿ ಡೋಸ್‌ ಪೂರೈಕೆಯಾದರೆ ಅದನ್ನು ವಿತರಿಸಲು 4 ತಿಂಗಳು ಬೇಕಾಗಬಹುದು ಎಂದೂ ವಿವರಿಸಿದ್ದಾರೆ.

45 ವರ್ಷ ದಾಟಿದವರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಪ್ರತಿ 15 ದಿನಕ್ಕೆ 15 ಲಕ್ಷ ಡೋಸ್‌ ಲಸಿಕೆ ಕೊಡಬೇಕಿತ್ತು. ಆದರೆ, ರಾಜ್ಯಕ್ಕೆ 12 ದಿನಗಳಲ್ಲಿ 8 ಲಕ್ಷ ಮಾತ್ರ ಬಂದಿದೆ’ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ತಿಳಿಸಿದ್ದಾರೆ.

ಮೊದಲ ಡೋಸ್‌ ಪಡೆದವರಿಗೆ ಎರಡನೇ ಡೋಸ್‌ ಕೊಡುತ್ತೇವೆ. 45 ವರ್ಷ ದಾಟಿದವರಿಗೆ ಕೊಡಲು 15 ದಿನಗಳಲ್ಲಿ 80 ಸಾವಿರ ಡೋಸ್‌ ಮಾತ್ರ ಕೋವ್ಯಾಕ್ಸಿನ್‌ ಲಸಿಕೆ ಬಂದಿದೆ. ಮುಂದಿನ ಮೂರು ದಿನಗಳಲ್ಲಿ 7 ಲಕ್ಷ ಡೋಸ್‌ 3 ದಿನಗಳಲ್ಲಿ ಬರಬಹುದು ಎಂದೂ ಅವರು ಹೇಳಿದ್ದಾರೆ.

ಲಸಿಕೆ ಪೂರೈಕೆ ನಮ್ಮ ಕೈಯಲ್ಲಿಯೂ ಇಲ್ಲ. ಎರಡು ಲಸಿಕೆ ಉತ್ಪಾದಕ ಕಂಪನಿಗಳು (ಸೀರಂ ಮತ್ತು ಭಾರತ್‌ ಬಯೋಟೆಕ್‌) ಉತ್ಪಾದಿಸುವ ಲಸಿಕೆಯಲ್ಲಿ ಶೇ. 50 ಸರ್ಕಾರಕ್ಕೆ ಉಳಿದ ಶೇ. 50ರಷ್ಟು ಮಾರಾಟ ಮಾಡಲು ಅವಕಾಶ ಕೊಡಲಾಗಿದೆ. ಜುಲೈ ತಿಂಗಳಿನಿಂದ ಲಸಿಕೆ ಪೂರೈಕೆ ಪ್ರಮಾಣವನ್ನು ಜಾಸ್ತಿ ಮಾಡುವುದಾಗಿ ಈ ಕಂಪನಿಗಳು ಹೇಳಿವೆ. ಕರ್ನಾಟಕ ಒಂದೇ ಅಲ್ಲ, ಇಡೀ ದೇಶದಲ್ಲಿ ಲಸಿಕೆ ಕೊರತೆ ಇದೆ. ಕೇಂದ್ರ ಸರ್ಕಾರ ಸರಾಸರಿ ಆಧಾರದಲ್ಲಿ ಎಲ್ಲ ರಾಜ್ಯಗಳಿಗೂ ಲಸಿಕೆಯನ್ನು ಹಂಚುತ್ತಿದೆ ಎಂದಿದ್ದಾರೆ.

About the Author

The Bengaluru Live

Administrator

Visit Website View All Posts

Post navigation

Previous: ಓಲಾ ಕ್ಯಾಬ್‌ ಮೂಲಕ ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕ
Next: ಕರ್ನಾಟಕದಲ್ಲಿ ಸೆಕೆಂಡ್‌ ಡೋಸ್‌ನವರಿಗೆ ಸಮಸ್ಯೆ ಇಲ್ಲ: ಅಶ್ವತ್ಥನಾರಾಯಣ

Related Stories

ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM
ಡಾ. ಸಮೀಕ್ಷಾ ರೆಡ್ಡಿ ಅವರ ಭಾವಚಿತ್ರ ಮತ್ತು ಬನ್ನೇರುಘಟ್ಟದಲ್ಲಿ ನೀರಾನೆ ಮರಿಯ ಸಮೀಕ್ಷಾ ನಾಮಫಲಕದ ಬಳಿಯ ಸಂದರ್ಶಕರು
  • ಕರ್ನಾಟಕ
  • ಬೆಂಗಳೂರು ನಗರ

ಡಾ. ಸಮೀಕ್ಷಾ ರೆಡ್ಡಿ ಯಾರು? ಬನ್ನೇರುಘಟ್ಟದಲ್ಲಿ ಅವರ ಸ್ಮರಣೆಗೆ ರಾಮಲಿಂಗಾ ರೆಡ್ಡಿ ಶಿಫಾರಸು

The Bengaluru Live November 10, 2026 10:14 PM
ಸಿಂಗಸಂದ್ರದಲ್ಲಿ ಕಟ್ಟಡದ ಮುಂದೆ ವ್ಯಕ್ತಿಯೊಬ್ಬರಿಗೆ ದಂಡದ ರಸೀದಿ ನೀಡುತ್ತಿರುವ ಸಮವಸ್ತ್ರಧಾರಿ ಬಿಎಸ್‌ಡಬ್ಲ್ಯುಎಂಎಲ್ ಮಾರ್ಷಲ್
  • ಬೆಂಗಳೂರು ನಗರ
  • ಬೆಂಗಳೂರು

ಬೆಂಗಳೂರಿನಲ್ಲಿ ಕಸ ಎಸೆಯುವವರ ವಿರುದ್ಧ ಕಾರ್ಯಾಚರಣೆ: ಬಿಎಸ್‌ಡಬ್ಲ್ಯುಎಂಎಲ್ ಮಾರ್ಷಲ್‌ಗಳಿಂದ 68 ಪ್ರಕರಣ, ₹76,500 ದಂಡ ವಸೂಲಿ

The Bengaluru Live November 9, 2026 11:35 AM

Latest Post

ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ ಕೊಚ್ಚಿಯ ಮುಸ್ಲಿಂ ಯೂತ್ ಲೀಗ್ ರ‍್ಯಾಲಿಯಲ್ಲಿ ವೇದಿಕೆಯಲ್ಲಿ ಸಂವಿಧಾನದ ಪ್ರತಿ ಹಿಡಿದು ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ
  • ರಾಜಕೀಯ

ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ

November 11, 2026 1:14 AM
ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್ ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

November 11, 2026 12:25 AM
ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ ವಿಧಾನಸೌಧದಲ್ಲಿ ಮಧ್ಯಂತರ ಬರ ಪರಿಹಾರ ಪಾವತಿಗೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ

November 10, 2026 11:27 PM
ಡಾ. ಸಮೀಕ್ಷಾ ರೆಡ್ಡಿ ಯಾರು? ಬನ್ನೇರುಘಟ್ಟದಲ್ಲಿ ಅವರ ಸ್ಮರಣೆಗೆ ರಾಮಲಿಂಗಾ ರೆಡ್ಡಿ ಶಿಫಾರಸು ಡಾ. ಸಮೀಕ್ಷಾ ರೆಡ್ಡಿ ಅವರ ಭಾವಚಿತ್ರ ಮತ್ತು ಬನ್ನೇರುಘಟ್ಟದಲ್ಲಿ ನೀರಾನೆ ಮರಿಯ ಸಮೀಕ್ಷಾ ನಾಮಫಲಕದ ಬಳಿಯ ಸಂದರ್ಶಕರು
  • ಕರ್ನಾಟಕ
  • ಬೆಂಗಳೂರು ನಗರ

ಡಾ. ಸಮೀಕ್ಷಾ ರೆಡ್ಡಿ ಯಾರು? ಬನ್ನೇರುಘಟ್ಟದಲ್ಲಿ ಅವರ ಸ್ಮರಣೆಗೆ ರಾಮಲಿಂಗಾ ರೆಡ್ಡಿ ಶಿಫಾರಸು

November 10, 2026 10:14 PM
ನ.13ರಂದು ಬೆಂಗಳೂರಿನಲ್ಲಿ ₹160 ಕೋಟಿ ವೆಚ್ಚದ ಸಂಕುಚಿತ ಜೈವಿಕ ಅನಿಲ ಘಟಕಕ್ಕೆ ಪ್ರಧಾನಿ ಮೋದಿ ವರ್ಚುವಲ್ ಶಿಲಾನ್ಯಾಸ ಪರಿಶೀಲನೆಯ ವೇಳೆ ಜೈವಿಕ ಅನಿಲ ಘಟಕದಲ್ಲಿ ಹಸಿರು ಚೌಕಟ್ಟಿನ ಗ್ಯಾಸ್ ಸಿಲಿಂಡರ್‌ಗಳ ಸುತ್ತ ನಿಂತಿರುವ ಪುರುಷರು
  • ಬೆಂಗಳೂರು

ನ.13ರಂದು ಬೆಂಗಳೂರಿನಲ್ಲಿ ₹160 ಕೋಟಿ ವೆಚ್ಚದ ಸಂಕುಚಿತ ಜೈವಿಕ ಅನಿಲ ಘಟಕಕ್ಕೆ ಪ್ರಧಾನಿ ಮೋದಿ ವರ್ಚುವಲ್ ಶಿಲಾನ್ಯಾಸ

November 10, 2026 5:55 PM
ನ.17-18ರಂದು ಬೆಂಗಳೂರಿನಲ್ಲಿ ದೇಶದ ಮೊದಲ ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಸಮ್ಮೇಳನ; ಓಂ ಬಿರ್ಲಾ, ಡಿ.ಕೆ. ಶಿವಕುಮಾರ್ ಉದ್ಘಾಟನೆ ಸಿಡಬ್ಲ್ಯುಪಿ ಬ್ಯಾನರ್ ಮತ್ತು ಕರ್ನಾಟಕ ಲಾಂಛನದ ಮುಂದೆ ಮೈಕ್ರೋಫೋನ್‌ಗಳಿರುವ ಮೇಜಿನ ಹಿಂದೆ ನಿಂತಿರುವ ಎಂಟು ಮಂದಿ, ಅವರಲ್ಲಿ ಇಬ್ಬರು ಕಾಗದ ಹಿಡಿದಿದ್ದಾರೆ
  • ಕರ್ನಾಟಕ
  • ರಾಜಕೀಯ

ನ.17-18ರಂದು ಬೆಂಗಳೂರಿನಲ್ಲಿ ದೇಶದ ಮೊದಲ ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಸಮ್ಮೇಳನ; ಓಂ ಬಿರ್ಲಾ, ಡಿ.ಕೆ. ಶಿವಕುಮಾರ್ ಉದ್ಘಾಟನೆ

November 10, 2026 5:03 PM

ನೀವು ತಪ್ಪಿಸಿಕೊಂಡಿರಬಹುದು

ಕೊಚ್ಚಿಯ ಮುಸ್ಲಿಂ ಯೂತ್ ಲೀಗ್ ರ‍್ಯಾಲಿಯಲ್ಲಿ ವೇದಿಕೆಯಲ್ಲಿ ಸಂವಿಧಾನದ ಪ್ರತಿ ಹಿಡಿದು ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ
  • ರಾಜಕೀಯ

ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ

The Bengaluru Live November 11, 2026 1:14 AM
ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM
ವಿಧಾನಸೌಧದಲ್ಲಿ ಮಧ್ಯಂತರ ಬರ ಪರಿಹಾರ ಪಾವತಿಗೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ

The Bengaluru Live November 10, 2026 11:27 PM
ಡಾ. ಸಮೀಕ್ಷಾ ರೆಡ್ಡಿ ಅವರ ಭಾವಚಿತ್ರ ಮತ್ತು ಬನ್ನೇರುಘಟ್ಟದಲ್ಲಿ ನೀರಾನೆ ಮರಿಯ ಸಮೀಕ್ಷಾ ನಾಮಫಲಕದ ಬಳಿಯ ಸಂದರ್ಶಕರು
  • ಕರ್ನಾಟಕ
  • ಬೆಂಗಳೂರು ನಗರ

ಡಾ. ಸಮೀಕ್ಷಾ ರೆಡ್ಡಿ ಯಾರು? ಬನ್ನೇರುಘಟ್ಟದಲ್ಲಿ ಅವರ ಸ್ಮರಣೆಗೆ ರಾಮಲಿಂಗಾ ರೆಡ್ಡಿ ಶಿಫಾರಸು

The Bengaluru Live November 10, 2026 10:14 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ
  • ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್
  • ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ
  • ಡಾ. ಸಮೀಕ್ಷಾ ರೆಡ್ಡಿ ಯಾರು? ಬನ್ನೇರುಘಟ್ಟದಲ್ಲಿ ಅವರ ಸ್ಮರಣೆಗೆ ರಾಮಲಿಂಗಾ ರೆಡ್ಡಿ ಶಿಫಾರಸು
©Copyright 2025 The Bengaluru Live All rights reserved. | MoreNews by AF themes.