ಬೆಂಗಳೂರು:
ಸಚಿವ ಮುನಿರತ್ನಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದು ಪೂರ್ವಜನ್ಮದ ಪುಣ್ಯವಂತೆ.ಹೀಗೆಂದು ಖುದ್ದು ಮುನಿರತ್ನ ಹೇಳಿ ಬಿಜೆಪಿ ಪಕ್ಷದ ಹಿಂದುಳಿದ ವರ್ಗಗಳ ಸಭೆಯನ್ನು ಹಾಡಿಹೊಗಳಿದ್ದಾರೆ.
ನಗರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿದ ಮುನಿರತ್ನ, ಕಾಂಗ್ರೆಸ್‌ನಿಂದ ಬಂದ ತಾವು
ಅಲ್ಲಿ ಇದ್ದಾಗ ಈ ರೀತಿ ಹಿಂದುಳಿದ ವರ್ಗಗಳ ಕಾರ್ಯಕ್ರಮ ನೋಡಿರಲಿಲ್ಲ.ಬೇರೆ ವರ್ಗಗಳ ಕಾರ್ಯಕ್ರಮದ ತರಹವೇ ಹಿಂದುಳಿದ ವರ್ಗಗಳ ಕಾರ್ಯಕ್ರಮ ನಡೆಯುತ್ತಿತ್ತು.
ಕಾರ್ಯಕ್ರಮದಲ್ಲಿ ನಮಗೂ ಒಂದು ಖುರ್ಚಿ ಹಾಕುತ್ತಿದ್ದರು.ಅದರಲ್ಲಿ ಕೂತು ಎದ್ದು ಬರುತ್ತಿದ್ದೇವಷ್ಟೆ.ಬೇರೆ ಪಕ್ಷಗಳಲ್ಲಿ ಈ ರೀತಿ ಕಾರ್ಯಕ್ರಮಗಳು ನಶಿಸಿ ಹೋಗುತ್ತಿದೆ.ಹೀಗೆ ಪರಿಣಾಮಕಾರಿಯಾಗಿ ಹಿಂದುಳಿದ ವರ್ಗಗಳ ಕಾರ್ಯಕ್ರಮ ಕಾಣಬರುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ.ತಾವು ಬಿಜೆಪಿಗೆ ಬಂದಿರುದಕ್ಕೆ ಖುಷಿ ಇದೆ.ದೊಡ್ಡ ಕುಟುಂಬದ ಬಿಜೆಪಿ ಸೇರಿ ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ.ನನ್ನನ್ನು ಶಾಸಕನಾಗಿ ಮಾಡಿ ತಡವಾಗಿಯಾದರೂ ಸಚಿವನನ್ನಾಗಿ ಮಾಡಿದೆ ಈ ರೀತಿ ವಾತಾವರಣ ಬಿಜೆಪಿಯಲ್ಲಿ ಮಾತ್ರ ಸಾಧ್ಯ.ಬಿಜೆಪಿ ಒಂದು ಜಾತಿಯಿಂದ ಕಟ್ಟಿದ ಪಕ್ಷ ಅಲ್ಲ .ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಕಟ್ಟಿದ ಪಕ್ಷ .ಇಂತಹ ಬಿಜೆಪಿ ಸೇರಿದ್ದು ಪೂರ್ವಜನ್ಮದ ಪುಣ್ಯ ಎಂದು ಮುನಿರತ್ನ ಹೇಳಿದರು.