ಚಿಕ್ಕಮಗಳೂರು:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ವರ್ಷದ ದತ್ತ ಜಯಂತಿ ಉತ್ಸವಕ್ಕೆ ಇಂದು ಚಾಲನೆ ನೀಡಲಾಯಿತು.
ನಗರದ ಕಾಮದೇನು ಗಣಪತಿ ದೇವಾಲಯದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ಸೇರಿ ನೂರಾರು ಭಜರಂಗದಳ, ಆರ್.ಎಸ್.ಎಸ್ ಸಂಘ ಪರಿವಾರದ ಕಾರ್ಯಕರ್ತರು ದತ್ತಮಾಲೆ ಧರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಕೊರೊನಾ ಹಿನ್ನಲೆಯಲ್ಲಿ ಕೆಲವು ಮಾರ್ಗ ಸೂಚಿಗಳನ್ನು ಈ ಬಾರಿ ಅನುಸರಿಸಲಾಗುವುದು ಎಂದರು. UNI
ಅತ್ರಿ ಮಹರ್ಷಿ ಮತ್ತು ಸತಿ ಅನುಸೂಯ ದೇವಿಯವರಿಗೆ ಜನಿಸಿದ ಬ್ರಹ್ಮ, ವಿಷ್ಣು, ಮಹೇಶ್ವರರ ಏಕೀಭಾವದ ಅವತಾರ ಶ್ರೀ ಗುರು ದತ್ತಾತ್ರೇಯ. ಗುರು ದತ್ತಾತ್ರೇಯರ ಪಾವನ ಪುಣ್ಯ ಭೂಮಿ ದತ್ತಪೀಠದಲ್ಲಿ ನಡೆಯುವ ದತ್ತಜಯಂತಿಯ ಪ್ರಯುಕ್ತ ದತ್ತಮಾಲಾ ಅಭಿಯಾನದ ಭಾಗವಾಗಿ ದತ್ತಮಾಲೆ ಧಾರಣೆ ಮಾಡಿ ಸಂಕಲ್ಪ ಮಾಡಲಾಯಿತು. #ದತ್ತಪೀಠ#SriDattaGuru pic.twitter.com/TQGnRt4y0P
— C T Ravi 🇮🇳 ಸಿ ಟಿ ರವಿ (@CTRavi_BJP) December 19, 2020