Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಉನ್ನತ ಶಿಕ್ಷಣಕ್ಕೆ ಉತ್ತೇಜನ, ಸಂಶೋಧನೆ ಅಗ್ರಮಾನ್ಯತೆ; ರಾಷ್ಟ್ರ ನಿರ್ಮಾಣಕ್ಕೆ ಪೂರಕ ಬಜೆಟ್‌ ಎಂದ ಡಿಸಿಎಂ
  • ರಾಜಕೀಯ
  • ಬೆಂಗಳೂರು ನಗರ

ಉನ್ನತ ಶಿಕ್ಷಣಕ್ಕೆ ಉತ್ತೇಜನ, ಸಂಶೋಧನೆ ಅಗ್ರಮಾನ್ಯತೆ; ರಾಷ್ಟ್ರ ನಿರ್ಮಾಣಕ್ಕೆ ಪೂರಕ ಬಜೆಟ್‌ ಎಂದ ಡಿಸಿಎಂ

The Bengaluru Live February 1, 2021 4:30 PM 1 minute read
ಉನ್ನತ ಶಿಕ್ಷಣಕ್ಕೆ ಉತ್ತೇಜನ, ಸಂಶೋಧನೆ ಅಗ್ರಮಾನ್ಯತೆ; ರಾಷ್ಟ್ರ ನಿರ್ಮಾಣಕ್ಕೆ ಪೂರಕ ಬಜೆಟ್‌ ಎಂದ ಡಿಸಿಎಂ

ಉನ್ನತ ಶಿಕ್ಷಣಕ್ಕೆ ಉತ್ತೇಜನ, ಸಂಶೋಧನೆ ಅಗ್ರಮಾನ್ಯತೆ; ರಾಷ್ಟ್ರ ನಿರ್ಮಾಣಕ್ಕೆ ಪೂರಕ ಬಜೆಟ್‌ ಎಂದ ಡಿಸಿಎಂ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ಅತ್ಯುತ್ತಮವಾದದ್ದು, ಕೋವಿಡ್‌ ನಂತರ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಮರ್ಥವಾಗಿ ಮುನ್ನಡೆಸುವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಶ್ಲಾಘಿಸಿದ್ದಾರೆ.

ಮುಖ್ಯವಾಗಿ ಸಂಶೋಧನೆಗೆ ಹೆಚ್ಚು ಒತ್ತು ನೀಡಿರುವ ಅವರು ಮುಂದಿನ ಐದು ವರ್ಷಗಳಲ್ಲಿ 50,000 ಕೋಟಿ ರೂ.ಗಳನ್ನು ವೆಚ್ಚ ಮಾಡುವುದಾಗಿ ಘೋಷಿಸಿದ್ದಾರೆ. ಜತೆಗೆ, ರಾಷ್ಟ್ರೀಯ  ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಈ ಹೊತ್ತಿನಲ್ಲಿ ಗುಣಮಟ್ಟದ ಶಿಕ್ಷಣ ಉದ್ದೇಶ ಸಾಕಾರಕ್ಕಾಗಿ ಈ ಉಪಕ್ರಮ ದೊಡ್ಡ ಹೆಜ್ಜೆಯಾಗಿದೆ.

ಆವಿಷ್ಕಾರ ಕ್ಷೇತ್ರಕ್ಕಾಗಿ ಪ್ರೋತ್ಸಾಹ!

ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಸ್ಥಾಪನೆಗಾಗಿ 50000 ಕೋಟಿ ರೂ. ಇದು ದೇಶದ ಸಂಶೋಧನಾ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.#Budget2021

2/2

— Dr. Ashwathnarayan C. N. (@drashwathcn) February 1, 2021

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಈ ಸಂದರ್ಭದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ. ಕಳೆದ ಬಜೆಟ್‌ನಲ್ಲಿಯೇ ಭಾರತೀಯ ಉನ್ನತ ಶಿಕ್ಷಣ ಆಯೋಗ ಸ್ಥಾಪನೆ ಬಗ್ಗೆ ಪ್ರಸ್ತಾಪ ಮಾಡಲಾಗತ್ತು. ಈ ಆಯೋಗ ರಚನೆಗೆ ಈ ವರ್ಷ ಕಾಯ್ದೆ ಜಾರಿಗೊಳಿಸುವುದಾಗಿ ವಿತ್ತ ಸಚಿವರು ಪ್ರಕಟಿಸಿದ್ದಾರೆ. ಇದರಲ್ಲಿ ಒಂದೇ ವೇದಿಕೆಯಡಿಯಲ್ಲಿ ಗುಣಮಟ್ಟ ನಿಗದಿ ಮಾಡುವುದು, ಮಾನ್ಯತೆ, ನಿಯಂತ್ರಣ ಹಾಗೂ ಹಣಕಾಸು ನೆರವಿನ ನಾಲ್ಕು ಪ್ರತ್ಯೇಕ ವಿಭಾಗಗಳಿರುತ್ತವೆ. ರಾಷ್ಟ್ರೀಯ ಉನ್ನತ ಶಿಕ್ಷಣ ಆಯೋಗ ರಚನೆಯಾದರೆ ಉನ್ನತ ಶಿಕ್ಷಣಕ್ಕೆ ಆನೆ ಬಲ ಬರಲಿದೆ.

ಲೇಹ್‌ನಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು ಅತ್ಯಂತ ಮಹತ್ವದ ಘೋಷಣೆ

ಇನ್ನು; ಪ್ರಾಥಮಿಕ ಅಂದರೆ. ಶಾಲಾ ಶಿಕ್ಷಣದಲ್ಲಿ 15,000ಕ್ಕೂ ಹೆಚ್ಚು ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸಲಾಗುತ್ತದೆ ಎಂಬುದು ಕೂಡ ಪ್ರಮುಖ ಘೋಷಣೆ. ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಇವಿಷ್ಟೂ ಶಾಲೆಗಳನ್ನು ಉನ್ನತ ಮಟ್ಟಕ್ಕೇರಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂಬ ಸಚಿವರ ಹೇಳಿಕೆ ಸ್ವಾಗತಾರ್ಹ.

*️⃣ ನವೋದ್ಯಮಗಳಿಗೆ ತೆರಿಗೆ ರಜೆಯನ್ನು ಮಾರ್ಚ್ 31 2022ರವರೆಗೆ ವಿಸ್ತರಣೆ

*️⃣ ನವೋದ್ಯಮಗಳಿಗೆ ಹೂಡಿಕೆಯಲ್ಲಿ ಮಾರ್ಚ್ 31 2022ರವರೆಗೆ ಬಂಡವಾಳ ಲಾಭದಿಂದ ವಿನಾಯಿತಿ.#AatmanirbharBharatKaBudget

2/2

— Dr. Ashwathnarayan C. N. (@drashwathcn) February 1, 2021
  • ರೈತರಿಗೆ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆ ನಿಲ್ಲಿಸುವುದಿಲ್ಲ ಎಂದು ವಿತ್ತ ಸಚಿವರು ಘೋಷಿಸಿದ್ದಾರೆ. ಇದು ರೈತರ ಬಗ್ಗೆ ಕೇಂದ್ರ ಸರಕಾರಕ್ಕಿರುವ ಬದ್ಧತೆ. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಅನಗತ್ಯವಾಗಿ ಉಯಿಲೆಬ್ಬಿಸುವವರಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ.
  • ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿರುವುದರಿಂದ 1.54 ಕೋಟಿ ರೈತರಿಗೆ ಪ್ರಯೋಜನವಾಗಲಿದೆ. ಇದು ಸಾಮಾನ್ಯ ಸಂಗತಿಯಲ್ಲ ಎಂದಿರುವ ಡಿಸಿಎಂ, ಕೋವಿಡ್ ಹಿನ್ನೆಲೆಯಲ್ಲಿ 27.1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿರುವುದು, ಆರೋಗ್ಯ ಕ್ಷೇತ್ರಕ್ಕೆ ಅಗ್ರಮಾನ್ಯತೆ ನೀಡಿರುವುದು ಕ್ರಾಂತಿಕಾರಕ ಅಂಶ.
  • ಬೆಂಗಳೂರು ನಗರದ ʼನಮ್ಮ ಮೆಟ್ರೋʼಗೆ 14,788 ಕೋಟಿ ರೂ. ಅನುದಾನವನ್ನು ಕೇಂದ್ರ ವಿತ್ತ ಸಚಿವರು ಘೋಷಿಸಿದ್ದಾರೆ. ಇದು ಬೆಂಗಳೂರು ಜನರಿಗೆ ಸಿಕ್ಕಿರುವ ದೊಡ್ಡ ಗಿಫ್ಟ್‌. ರೈಲ್ವೇ ಮಿಷನ್ 2030 ಯೋಜನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಮೆಟ್ರೋಗೆ ಹೆಚ್ಚಿನ ಅನುದಾನ ಘೋಷಣೆ ಮಾಡಿದ್ದಾರೆ. ಇದು ಸಂತಸದ ಸಂಗತಿ.
  • ನಿರ್ಮಲಾ ಸೀತಾರಾಮನ್‌ ಅವರು ದೇಶವನ್ನು ಎಲ್ಲ ಆಯಾಮಗಳ ಒಳಗೊಂಡಂತೆ ಪ್ರಗತಿಯತ್ತ ಮುನ್ನಡೆಸಲು ಬೇಕಾದ ಸಮರ್ಥ ಕಾರ್ಯಸೂಚಿಯನ್ನು ಅನಾವರಣ ಮಾಡಿದ್ದಾರೆ. ಜತೆಗೆ; ತುರ್ತು ಆದ್ಯತೆಗಳ ಬಗ್ಗೆ ಗಮನ ಹರಿಸಿದ್ದಾರೆ.

About the Author

The Bengaluru Live

Administrator

Visit Website View All Posts

Post navigation

Previous: ಮಾಜಿ ಕಾರ್ಪೊರೇಟರ್-ಮುಖ್ಯ ಎಂಜಿನಿಯರ್ ಟಿಫ್ ಈಗ ಹೈಕೋರ್ಟ್‌ ಮೆಟ್ಟಿಲೇರಿದೆ
Next: ದೇಶದ ಅಭಿವೃದ್ಧಿಗೆ ಪೂರಕ ಬಜೆಟ್- ನಳಿನ್‍ಕುಮಾರ್ ಕಟೀಲ್

Related Stories

ಬೆಂಚುಗಳಲ್ಲಿ ಕುಳಿತಿರುವ ಶಿಕ್ಷಕರಿಂದ ತುಂಬಿದ ಸಭಾಂಗಣದಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವ ಮಧು ಬಂಗಾರಪ್ಪ
  • ಕರ್ನಾಟಕ
  • ಬೆಂಗಳೂರು ನಗರ

ಮಿಷನ್ 60+: ಬೆಂಗಳೂರು ಸಮೀಪದ ಮೂರು ಜಿಲ್ಲೆಗಳು 70+ ಗುರಿ ತಲುಪಬೇಕು ಎಂದ ಮಧು ಬಂಗಾರಪ್ಪ; ಕೆಪಿಎಸ್ ಸ್ಥಾಪನೆ ‘ಬಂಗಾರದ ಕೆಲಸ’

The Bengaluru Live November 28, 2026 3:00 PM
ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿಯ ಪ್ರವೇಶದ್ವಾರ ಮತ್ತು ನಾಮಫಲಕ
  • ಬೆಂಗಳೂರು ನಗರ

ಓಝೋನ್ ಮನೆ ಖರೀದಿದಾರರ ಪ್ರಕರಣ: 8 ಆರೋಪಿಗಳ ವಿರುದ್ಧ ಪಿಎಂಎಲ್‌ಎ ಕೋರ್ಟ್‌ಗೆ ಇ.ಡಿ. ದೂರು; ₹1,305 ಕೋಟಿ ವಂಚನೆ ಆರೋಪ

The Bengaluru Live November 28, 2026 11:52 AM
ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ಭಾನುವಾರ ನ.29: ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ವಿದ್ಯುತ್ ಇರುವುದಿಲ್ಲ

The Bengaluru Live November 27, 2026 8:11 PM

Latest Post

ಮಿಷನ್ 60+: ಬೆಂಗಳೂರು ಸಮೀಪದ ಮೂರು ಜಿಲ್ಲೆಗಳು 70+ ಗುರಿ ತಲುಪಬೇಕು ಎಂದ ಮಧು ಬಂಗಾರಪ್ಪ; ಕೆಪಿಎಸ್ ಸ್ಥಾಪನೆ ‘ಬಂಗಾರದ ಕೆಲಸ’ ಬೆಂಚುಗಳಲ್ಲಿ ಕುಳಿತಿರುವ ಶಿಕ್ಷಕರಿಂದ ತುಂಬಿದ ಸಭಾಂಗಣದಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವ ಮಧು ಬಂಗಾರಪ್ಪ
  • ಕರ್ನಾಟಕ
  • ಬೆಂಗಳೂರು ನಗರ

ಮಿಷನ್ 60+: ಬೆಂಗಳೂರು ಸಮೀಪದ ಮೂರು ಜಿಲ್ಲೆಗಳು 70+ ಗುರಿ ತಲುಪಬೇಕು ಎಂದ ಮಧು ಬಂಗಾರಪ್ಪ; ಕೆಪಿಎಸ್ ಸ್ಥಾಪನೆ ‘ಬಂಗಾರದ ಕೆಲಸ’

November 28, 2026 3:00 PM
ಜಪಾನ್ ಪ್ರವಾಸದ ಫಲಶ್ರುತಿ: ಕವಾಸಕಿಯಿಂದ ₹800 ಕೋಟಿ ಹೂಡಿಕೆ, ಕೈಗಾರಿಕಾ ಪಾರ್ಕ್ ಚರ್ಚೆ; ‘ಇನ್ವೆಸ್ಟ್ ಕರ್ನಾಟಕ 2027’ಕ್ಕೆ ಆಹ್ವಾನ ಎಂದ ಸಿಎಂ ಶಿವಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಜಪಾನ್ ಪ್ರವಾಸದ ಫಲಶ್ರುತಿ: ಕವಾಸಕಿಯಿಂದ ₹800 ಕೋಟಿ ಹೂಡಿಕೆ, ಕೈಗಾರಿಕಾ ಪಾರ್ಕ್ ಚರ್ಚೆ; ‘ಇನ್ವೆಸ್ಟ್ ಕರ್ನಾಟಕ 2027’ಕ್ಕೆ ಆಹ್ವಾನ ಎಂದ ಸಿಎಂ ಶಿವಕುಮಾರ್

November 28, 2026 12:09 PM
ಓಝೋನ್ ಮನೆ ಖರೀದಿದಾರರ ಪ್ರಕರಣ: 8 ಆರೋಪಿಗಳ ವಿರುದ್ಧ ಪಿಎಂಎಲ್‌ಎ ಕೋರ್ಟ್‌ಗೆ ಇ.ಡಿ. ದೂರು; ₹1,305 ಕೋಟಿ ವಂಚನೆ ಆರೋಪ ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿಯ ಪ್ರವೇಶದ್ವಾರ ಮತ್ತು ನಾಮಫಲಕ
  • ಬೆಂಗಳೂರು ನಗರ

ಓಝೋನ್ ಮನೆ ಖರೀದಿದಾರರ ಪ್ರಕರಣ: 8 ಆರೋಪಿಗಳ ವಿರುದ್ಧ ಪಿಎಂಎಲ್‌ಎ ಕೋರ್ಟ್‌ಗೆ ಇ.ಡಿ. ದೂರು; ₹1,305 ಕೋಟಿ ವಂಚನೆ ಆರೋಪ

November 28, 2026 11:52 AM
ಮಹಿಳಾ ಮೀಸಲು, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಜೆಡಿಎಸ್ ಬೆಂಬಲ: “ಯಾವ ರಾಜ್ಯಕ್ಕೂ ಅನ್ಯಾಯವಿಲ್ಲ”, ಕರ್ನಾಟಕದ ಸ್ಥಾನ ಶೇ.50 ಏರಿಕೆ ಎಂದ ಕುಮಾರಸ್ವಾಮಿ ನವದೆಹಲಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ

ಮಹಿಳಾ ಮೀಸಲು, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಜೆಡಿಎಸ್ ಬೆಂಬಲ: “ಯಾವ ರಾಜ್ಯಕ್ಕೂ ಅನ್ಯಾಯವಿಲ್ಲ”, ಕರ್ನಾಟಕದ ಸ್ಥಾನ ಶೇ.50 ಏರಿಕೆ ಎಂದ ಕುಮಾರಸ್ವಾಮಿ

November 27, 2026 9:43 PM
“ಮಾತನಾಡುವ ನೈತಿಕತೆ ಇಲ್ಲ”: ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ಎನ್‌ಡಿಎ ನಾಯಕರ ವಿರುದ್ಧ ಕಿಡಿಕಾರಿದ ಸಿಎಂ ಶಿವಕುಮಾರ್; ಕೇಂದ್ರ 1 ರೂ. ಕೂಡ ಹೆಚ್ಚಿಸಿಲ್ಲ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿಯೊಬ್ಬರು ಆಶೀರ್ವದಿಸುತ್ತಿರುವಾಗ ತಲೆಬಾಗಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

“ಮಾತನಾಡುವ ನೈತಿಕತೆ ಇಲ್ಲ”: ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ಎನ್‌ಡಿಎ ನಾಯಕರ ವಿರುದ್ಧ ಕಿಡಿಕಾರಿದ ಸಿಎಂ ಶಿವಕುಮಾರ್; ಕೇಂದ್ರ 1 ರೂ. ಕೂಡ ಹೆಚ್ಚಿಸಿಲ್ಲ

November 27, 2026 8:53 PM
ಲೋಕಸಭೆ ಸ್ಥಾನ ಶೇ.50 ಹೆಚ್ಚಳ ಕರ್ನಾಟಕಕ್ಕೆ ಹೇಗೆ ಲಾಭ? 28ರಿಂದ 42 ಸ್ಥಾನ, ಯುಪಿಗೆ 80ರಿಂದ 120: ಸರ್ವಪಕ್ಷ ಸಭೆಗೆ ಸಿದ್ದರಾಮಯ್ಯ ಆಗ್ರಹ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿದ್ದರಾಮಯ್ಯ
  • ಕರ್ನಾಟಕ

ಲೋಕಸಭೆ ಸ್ಥಾನ ಶೇ.50 ಹೆಚ್ಚಳ ಕರ್ನಾಟಕಕ್ಕೆ ಹೇಗೆ ಲಾಭ? 28ರಿಂದ 42 ಸ್ಥಾನ, ಯುಪಿಗೆ 80ರಿಂದ 120: ಸರ್ವಪಕ್ಷ ಸಭೆಗೆ ಸಿದ್ದರಾಮಯ್ಯ ಆಗ್ರಹ

November 27, 2026 8:43 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಚುಗಳಲ್ಲಿ ಕುಳಿತಿರುವ ಶಿಕ್ಷಕರಿಂದ ತುಂಬಿದ ಸಭಾಂಗಣದಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವ ಮಧು ಬಂಗಾರಪ್ಪ
  • ಕರ್ನಾಟಕ
  • ಬೆಂಗಳೂರು ನಗರ

ಮಿಷನ್ 60+: ಬೆಂಗಳೂರು ಸಮೀಪದ ಮೂರು ಜಿಲ್ಲೆಗಳು 70+ ಗುರಿ ತಲುಪಬೇಕು ಎಂದ ಮಧು ಬಂಗಾರಪ್ಪ; ಕೆಪಿಎಸ್ ಸ್ಥಾಪನೆ ‘ಬಂಗಾರದ ಕೆಲಸ’

The Bengaluru Live November 28, 2026 3:00 PM
ಮಾಧ್ಯಮಗೋಷ್ಠಿಯಲ್ಲಿ ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಜಪಾನ್ ಪ್ರವಾಸದ ಫಲಶ್ರುತಿ: ಕವಾಸಕಿಯಿಂದ ₹800 ಕೋಟಿ ಹೂಡಿಕೆ, ಕೈಗಾರಿಕಾ ಪಾರ್ಕ್ ಚರ್ಚೆ; ‘ಇನ್ವೆಸ್ಟ್ ಕರ್ನಾಟಕ 2027’ಕ್ಕೆ ಆಹ್ವಾನ ಎಂದ ಸಿಎಂ ಶಿವಕುಮಾರ್

The Bengaluru Live November 28, 2026 12:09 PM
ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿಯ ಪ್ರವೇಶದ್ವಾರ ಮತ್ತು ನಾಮಫಲಕ
  • ಬೆಂಗಳೂರು ನಗರ

ಓಝೋನ್ ಮನೆ ಖರೀದಿದಾರರ ಪ್ರಕರಣ: 8 ಆರೋಪಿಗಳ ವಿರುದ್ಧ ಪಿಎಂಎಲ್‌ಎ ಕೋರ್ಟ್‌ಗೆ ಇ.ಡಿ. ದೂರು; ₹1,305 ಕೋಟಿ ವಂಚನೆ ಆರೋಪ

The Bengaluru Live November 28, 2026 11:52 AM
ನವದೆಹಲಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ

ಮಹಿಳಾ ಮೀಸಲು, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಜೆಡಿಎಸ್ ಬೆಂಬಲ: “ಯಾವ ರಾಜ್ಯಕ್ಕೂ ಅನ್ಯಾಯವಿಲ್ಲ”, ಕರ್ನಾಟಕದ ಸ್ಥಾನ ಶೇ.50 ಏರಿಕೆ ಎಂದ ಕುಮಾರಸ್ವಾಮಿ

The Bengaluru Live November 27, 2026 9:43 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಮಿಷನ್ 60+: ಬೆಂಗಳೂರು ಸಮೀಪದ ಮೂರು ಜಿಲ್ಲೆಗಳು 70+ ಗುರಿ ತಲುಪಬೇಕು ಎಂದ ಮಧು ಬಂಗಾರಪ್ಪ; ಕೆಪಿಎಸ್ ಸ್ಥಾಪನೆ ‘ಬಂಗಾರದ ಕೆಲಸ’
  • ಜಪಾನ್ ಪ್ರವಾಸದ ಫಲಶ್ರುತಿ: ಕವಾಸಕಿಯಿಂದ ₹800 ಕೋಟಿ ಹೂಡಿಕೆ, ಕೈಗಾರಿಕಾ ಪಾರ್ಕ್ ಚರ್ಚೆ; ‘ಇನ್ವೆಸ್ಟ್ ಕರ್ನಾಟಕ 2027’ಕ್ಕೆ ಆಹ್ವಾನ ಎಂದ ಸಿಎಂ ಶಿವಕುಮಾರ್
  • ಓಝೋನ್ ಮನೆ ಖರೀದಿದಾರರ ಪ್ರಕರಣ: 8 ಆರೋಪಿಗಳ ವಿರುದ್ಧ ಪಿಎಂಎಲ್‌ಎ ಕೋರ್ಟ್‌ಗೆ ಇ.ಡಿ. ದೂರು; ₹1,305 ಕೋಟಿ ವಂಚನೆ ಆರೋಪ
  • ಮಹಿಳಾ ಮೀಸಲು, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಜೆಡಿಎಸ್ ಬೆಂಬಲ: “ಯಾವ ರಾಜ್ಯಕ್ಕೂ ಅನ್ಯಾಯವಿಲ್ಲ”, ಕರ್ನಾಟಕದ ಸ್ಥಾನ ಶೇ.50 ಏರಿಕೆ ಎಂದ ಕುಮಾರಸ್ವಾಮಿ
©Copyright 2025 The Bengaluru Live All rights reserved. | MoreNews by AF themes.