Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ
  • ಬೆಂಗಳೂರು ನಗರ

ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ

The Bengaluru Live September 14, 2024 9:10 PM
ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ

ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು, ಸೆ. 13 (ಕರ್ನಾಟಕ ವಾರ್ತೆ) : ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ 2500 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ರಾಜ್ಯಾದ್ಯಂತ ನಿರ್ಮಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು
ಸರಕಾರ ಮುಂದಾಗಿದೆ.

ರಾಜ್ಯದ ಗಡಿ ಜಿಲ್ಲೆಗಳಾದ ಬೀದರ್ ಜಿಲ್ಲೆಯಿಂದ ಚಾಮರಾಜನಗರದ ವರೆಗೂ ಸಮಾಜದ ಎಲ್ಲಾ ವರ್ಗದ ಜನರೂ ಸೇರಿದಂತೆ ಸುಮಾರು 25 ಲಕ್ಷ ಮಂದಿ ಕೈಕೈ ಹಿಡಿದು ರಾಜ್ಯದುದ್ದಕ್ಕೂ ವಿಶ್ವದ ಬೃಹತ್ ಮಾನವ ಸರಪಳಿ ನಿರ್ಮಿಸಲಿದ್ದಾರೆ.

ಇದೇವೇಳೆ ಸಂವಿಧಾನದ ಮಹತ್ವ ಸಾರುವ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಜಾಗೃತಿ ಮೂಡಿಸಲಿದ್ದಾರೆ. ಹಾಗೆಯೇ, ಸುತ್ತಮುತ್ತ ಪ್ರದೇಶದಲ್ಲಿ ಗಿಡಗಳನ್ನೂ ನೆಡಲಿದ್ದಾರೆ. ಈ ಮೂಲಕ ಅಂದು ರಾಜ್ಯಾದ್ಯಂತ 10ಲಕ್ಷ ಗಿಡಗಳನ್ನು ಹಾಕಲಾಗುತ್ತದೆ.

ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ರಾಜ್ಯ 32 ಇಲಾಖೆಗಳ ಸುಮಾರು 8 ಲಕ್ಷಕ್ಕೂ ಅಧಿಕ ಸಿಬ್ಬಂದಿ ಇಡೀ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿದ್ದು, ಇಲಾಖೆ ಸಚಿವರಾದ ಡಾ. ಹೆಚ್. ಸಿ. ಮಹಾದೇವಪ್ಪ ಹೆಚ್ಚಿನ ಆಸಕ್ತಿ ವಹಿಸಿ ಸಿದ್ಧತೆಗಳನ್ನು ನಡೆಸಿದ್ದಾರೆ. ಈ ವಿನೂತನ ಮತ್ತು ಬೃಹತ್ ಕಾರ್ಯಕ್ರಮಕ್ಕೆ ಲಂಡನ್ ನ ವಿಶ್ವ ದಾಖಲೆ ಪರಿಶೀಲಿಸುವ ತಂಡ ಆಗಮಿಸಲಿದ್ದು, ಎಲ್ಲವೂ ದಾಖಲೆಗಳ ನಿಯಮದಂತಿರುವುದನ್ನು ವಿವಿಧ ಹಂತಗಳಲ್ಲಿ ಅಧ್ಯಯನ ಮಾಡಲಿದೆ. ನಂತರ ಕಾರ್ಯಕ್ರಮ ದಾಖಲೆಗಳ ನಿಯಮಕ್ಕೆ ಒಪ್ಪುವಂತೆ ಇದ್ದರೆ ಕಾರ್ಯಕ್ರಮವನ್ನು ವಿಶ್ವ ದಾಖಲೆಗೆ ಸೇರಿಸಲಿದೆ. ಇದೆಲ್ಲದಕ್ಕೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರು ತಮ್ಮದೇ ರೀತಿಯಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಹಾಗೆಯೇ ಡ್ರೋನ್ ಚಿತ್ರೀಕರಣ ಹಾಗೂ ಪ್ರತಿ ಜಿಲ್ಲೆಯ ತಾಲೂಕುಗಳ ಮಾಹಿತಿಗಳು ಕ್ಷಣಕ್ಷಣದಲ್ಲಿ ಲಭ್ಯವಾಗಿ ಆಯೋಜಕರ ನಡುವೆ ಸಂಪೂರ್ಣ ಸಮನ್ವಯದೊಂದಿಗೆ ನಡೆಯುವಂತೆ ಮಾಡುವ ವಿಶೇಷ ಸುಧಾರಿತ ತಂತ್ರಜ್ಞಾನದ ಜಾಲವೊಂದರ ಸಿದ್ಧತೆ ನಡೆಸಿದ್ದಾರೆ.

ಈ ವಿಶೇಷ ಮಾನವ ಸರಪಳಿ ಪ್ರತಿ ಜಿಲ್ಲೆ, ತಾಲೂಕು ಹಾಗೂ ಪ್ರಮುಖ ಗ್ರಾಮಗಳಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ ಹಾದು ಹೋಗಲಿದ್ದು, ಎಲ್ಲಾ ಹಳ್ಳಿಗಳಲ್ಲೂ ಇದೊಂದು ಹಬ್ಬದಂತೆ ಆಚರಿಸುವಂತೆ ಮಾಡಲು ಸರಕಾರ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದೆ.

3 ಕೋಟಿ ಜನರ ಬೆಂಬಲದ ನಿರೀಕ್ಷೆ: ವಿಶ್ವಸಂಸ್ಥೆ 2007ರ ಸೆ.15 ಅನ್ನು ವಿಶ್ವ ಪ್ರಜಾಪ್ರಭುತ್ವದ ದಿನ ಎಂದು ಘೋಷಿಸಿತ್ತು. ಇದರ ಅಂಗವಾಗಿ ಅನೇಕ ದೇಶಗಳಲ್ಲಿ ಅಂದು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿವೆ. ಆದರೆ ಇದರ ಮೌಲ್ಯವನ್ನು ಹೆಚ್ಚು ಪ್ರಚಾರ ಮಾಡಿ ವಿಶ್ವ ಮಟ್ಟದಲ್ಲಿ ಸಾರುವ ಪ್ರಯತ್ನಕ್ಕೆ ಸರಕಾರ ಈ ಹಿಂದೆಯೇ ಕೈ ಹಾಕಿತ್ತು. ಹೀಗಾಗಿ ಕಳೆದ ವರ್ಷ 2023 ಸೆ.15ರಂದು ರಾಜ್ಯಾದ್ಯಂತ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಕಾರ್ಯಕ್ರಮ ನಡೆಸಲಾಗಿತ್ತು. ಇದರಲ್ಲಿ ಸುಮಾರು 2.3 ಕೋಟಿ ಭಾಗವಹಿಸಿ ಸರಕಾರಕ್ಕೆ ಆಶ್ಚರ್ಯ ಉಂಟು ಮಾಡಿದ್ದರು. ಇದರಿಂದ ಸ್ಫೂರ್ತಿ ಪಡೆದ ಸರಕಾರ ಈ ಬಾರಿ 25 ಲಕ್ಷ ಜನರು ರಾಜ್ಯದುದ್ದಕ್ಕೂ ನಿಂತು ಸಂವಿಧಾನ ಓದುವಂತೆ ಮಾಡುತ್ತಿದೆ. ಹೀಗಾಗಿ ಇದರಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 3 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಇದರಿಂದ ಇಡೀ ವಿಶ್ವ ಕರ್ನಾಕದ ಕಡೆ ನೋಡುವಂತಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಜಿಲ್ಲೆಗಳು ಸಕಲ ರೀತಿಯಲ್ಲಿ ಸಜ್ಜು: ಭಾನುವಾರ ಬೆಳಗ್ಗೆ 9 ಗಂಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನದ ಪೀಠಿಕೆ ಓದುವ ಮೂಲಕ ಚಾಲನೆ ನೀಡಲಿದ್ದಾರೆ. ಆನಂತರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಗಳ ಸಮಸ್ತ ಜನರು ಸಂವಿಧಾನ ಪೀಠಿಕೆ ಓದಿ ಮಾನವ ಸರಪಳಿ ನಿರ್ಮಿಸುತ್ತಾರೆ. ಆ ಪ್ರದೇಶದಲ್ಲೇ ಗಿಡ ನೆಡುತ್ತಾರೆ. ಹೀಗಾಗಿ ಪ್ರತಿ ಜಿಲ್ಲೆ ತಾಲೂಕುಗಳಲ್ಲೂ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಕನ್ನಡದಲ್ಲಿ ಕೆಲವರು ಸಮುದ್ರದಲ್ಲೇ ನಿಂತು ಮನವ ಸರಪಳಿ ರಚಿಸಲಿದ್ದಾರೆ.

ಇದೇರೀತಿ ವೇಷ, ಭೂಷಣ ಹಾಗೂ ವಿಶೇಷ ಸಂದೇಶ ಸಾರುವ ವಿಭಿನ್ನ ಪ್ರಯತ್ನ ಮಾಡಿದ ಜಿಲ್ಲೆಗೆ ಪ್ರಶಸ್ತಿಯನ್ನೂ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ತಿಳಿಸಿದ್ದಾರೆ.

About the Author

The Bengaluru Live

Administrator

Visit Website View All Posts

Post navigation

Previous: ಸುಳ್ಳಿನ‌ ಸರದಾರರ ಪಿತೂರಿ, ಷಡ್ಯಂತ್ರಗಳಿಗೆ ತಲೆ ಒತ್ತೆ ಇಡಬೇಡಿ: ಸಿಎಂ ಸಿದ್ದರಾಮಯ್ಯ ಕರೆ
Next: ಸೆಪ್ಟೆಂಬರ್ 15 ರಂದು ಸಂವಿಧಾನದ ಆಶಯವನ್ನು ಬಿಂಬಿಸುವ ಬೃಹತ್ ಮಾನವ ಸರಪಳಿ -ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ

Related Stories

ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹೂವಿನ ಹಾರ ಹಾಕಿದ ನೀಲಿ-ಬೆಳ್ಳಿ ಬಣ್ಣದ ಮೆಟ್ರೋ ರೈಲಿನ ಪಕ್ಕ ಸುರಕ್ಷತಾ ಕವಚ, ಹೆಲ್ಮೆಟ್ ಧರಿಸಿ ನಿಂತಿರುವ ಯೋಜನಾ ಸಿಬ್ಬಂದಿ
  • ಬೆಂಗಳೂರು ನಗರ

ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು

The Bengaluru Live November 23, 2026 7:26 PM
ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 25ರಂದು ಹೆಣ್ಣೂರು, ಹೊರಮಾವು, ಹೊಯ್ಸಳ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ

The Bengaluru Live November 23, 2026 5:28 PM
ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 24ರಂದು ವಿಲ್ಸನ್ ಗಾರ್ಡನ್, ಶಾಂತಿನಗರ, ರಿಚ್‌ಮಂಡ್ ಸರ್ಕಲ್ ಸುತ್ತಮುತ್ತ ವಿದ್ಯುತ್ ಕಡಿತ

The Bengaluru Live November 23, 2026 5:28 PM

Latest Post

ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹೂವಿನ ಹಾರ ಹಾಕಿದ ನೀಲಿ-ಬೆಳ್ಳಿ ಬಣ್ಣದ ಮೆಟ್ರೋ ರೈಲಿನ ಪಕ್ಕ ಸುರಕ್ಷತಾ ಕವಚ, ಹೆಲ್ಮೆಟ್ ಧರಿಸಿ ನಿಂತಿರುವ ಯೋಜನಾ ಸಿಬ್ಬಂದಿ
  • ಬೆಂಗಳೂರು ನಗರ

ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು

November 23, 2026 7:26 PM
‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್ ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್

November 23, 2026 7:14 PM
ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮೈಕ್‌ಗಳಿರುವ ಮೇಜಿನ ಬಳಿ ಕುಳಿತಿರುವ ಹಿರಿಯ ಅಧಿಕಾರಿಗಳು
  • ಕರ್ನಾಟಕ

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ

November 23, 2026 5:59 PM
ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ ವಿಧಾನಸೌಧದ ಸಂವಾದ ಸಭೆಯಲ್ಲಿ ಸಭಾ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು ಮತ್ತು ಭೇಟಿ ನೀಡಿದ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ
  • ಕರ್ನಾಟಕ

ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ

November 23, 2026 5:37 PM
ನವೆಂಬರ್ 24 ಮತ್ತು 25ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 24 ಮತ್ತು 25ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

November 23, 2026 5:34 PM
ನವೆಂಬರ್ 25ರಂದು ಹೆಣ್ಣೂರು, ಹೊರಮಾವು, ಹೊಯ್ಸಳ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 25ರಂದು ಹೆಣ್ಣೂರು, ಹೊರಮಾವು, ಹೊಯ್ಸಳ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ

November 23, 2026 5:28 PM

ನೀವು ತಪ್ಪಿಸಿಕೊಂಡಿರಬಹುದು

ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹೂವಿನ ಹಾರ ಹಾಕಿದ ನೀಲಿ-ಬೆಳ್ಳಿ ಬಣ್ಣದ ಮೆಟ್ರೋ ರೈಲಿನ ಪಕ್ಕ ಸುರಕ್ಷತಾ ಕವಚ, ಹೆಲ್ಮೆಟ್ ಧರಿಸಿ ನಿಂತಿರುವ ಯೋಜನಾ ಸಿಬ್ಬಂದಿ
  • ಬೆಂಗಳೂರು ನಗರ

ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು

The Bengaluru Live November 23, 2026 7:26 PM
ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್

The Bengaluru Live November 23, 2026 7:14 PM
ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮೈಕ್‌ಗಳಿರುವ ಮೇಜಿನ ಬಳಿ ಕುಳಿತಿರುವ ಹಿರಿಯ ಅಧಿಕಾರಿಗಳು
  • ಕರ್ನಾಟಕ

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ

The Bengaluru Live November 23, 2026 5:59 PM
ವಿಧಾನಸೌಧದ ಸಂವಾದ ಸಭೆಯಲ್ಲಿ ಸಭಾ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು ಮತ್ತು ಭೇಟಿ ನೀಡಿದ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ
  • ಕರ್ನಾಟಕ

ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ

The Bengaluru Live November 23, 2026 5:37 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು
  • ‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್
  • ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ
  • ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ
©Copyright 2025 The Bengaluru Live All rights reserved. | MoreNews by AF themes.