Home ಬೆಂಗಳೂರು ನಗರ ಅಂತರಾಷ್ಟ್ರೀಯ ಮಹಿಳಾ ದಿನದಂದು ಮಹಿಳಾ ಪ್ರವಾಸಿಗರಿಗೆ ಕೆ.ಎಸ್.ಟಿ.ಡಿ.ಸಿ ಯಿಂದ ಶೇ. 50 ರಷ್ಟು ರಿಯಾಯಿತಿ

ಅಂತರಾಷ್ಟ್ರೀಯ ಮಹಿಳಾ ದಿನದಂದು ಮಹಿಳಾ ಪ್ರವಾಸಿಗರಿಗೆ ಕೆ.ಎಸ್.ಟಿ.ಡಿ.ಸಿ ಯಿಂದ ಶೇ. 50 ರಷ್ಟು ರಿಯಾಯಿತಿ

69
0

ಬೆಂಗಳೂರು:

ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಮಹಿಳಾ ಪ್ರವಾಸಿಗರನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ 08 ನೇ ಮಾರ್ಚ್ 2021 ರಂದು ಆಯೋಜನೆಯಾಗುವ ಪ್ರವಾಸಿ ಪ್ಯಾಕೇಜ್ ಗಳಲ್ಲಿ ತೆರಳಲಿರುವ ಮಹಿಳಾ ಪ್ರವಾಸಿಗರಿಗೆ ಪ್ಯಾಕೇಜ್ ಟೂರ್ ಹಾಗೂ ಮಯೂರ ಹೋಟೆಲಿನಲ್ಲಿ ಪಡೆಯುವ ವಾಸ್ತವ್ಯ ಸೌಲಭ್ಯಗಳಿಗೆ ಕೊಠಡಿಗಳ ದರದಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡಲಾಗುವುದೆಂದು ಹಾಗೂ ಮಾರ್ಚ್ ಮಾಹೆಯಲ್ಲಿ ತೆರಳುವ ಮಹಿಳಾ ಪ್ರವಾಸಿಗರಿಗೆ ಶೇ. 10% ರಿಯಾಯಿತಿಯನ್ನು ನೀಡುವುದಾಗಿ ನಿಗಮದ ಅಧ್ಯಕ್ಷೆ ಶ್ರೀಮತಿ ಶ್ರುತಿ ಕೃಷ್ಣ ರವರು ತಿಳಿಸಿರುತ್ತಾರೆ.

ಮುಂದುವರೆದು, ಮಹಿಳೆಯರನ್ನು ಪ್ರವಾಸಿ ಚಟುವಟಿಕೆಗಳತ್ತ ಹೆಚ್ಚಾಗಿ ಆಕರ್ಷಿಸಲು ನಿಗಮದ ವತಿಯಿಂದ ಧಾರ್ಮಿಕ, ನೈಸರ್ಗಿಕ, ಪಾರಂಪರಿಕ ಹಾಗೂ ಕಡಲತೀರ ಪ್ರವಾಸಗಳನ್ನು ಆಚರಣೆ ಮಾಡಲಾಗುತ್ತಿದ್ದು, ಎಲ್ಲಾ ಪ್ರವಾಸಗಳಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ 08 ನೇ ಮಾರ್ಚ್ 2021 ರಂದು ಆಯೋಜಿಸಲಾಗುವ ಪ್ರವಾಸಗಳಿಗೆ ಮುಂಗಡವಾಗಿ ಟಿಕೇಟ್ ಕಾಯ್ದಿರಿಸುವ ಒಬ್ಬ ಮಹಿಳಾ ಪ್ರವಾಸಿಗರಿಗೆ 50% ರಿಯಾಯಿತಿ ಹಾಗೂ ಮಾರ್ಚ್ ಮಾಹೆಯಲ್ಲಿ ತೆರಳುವ ಮಹಿಳಾ ಪ್ರವಾಸಿಗರಿಗೆ ಒಟ್ಟಾರೆ ದರದಲ್ಲಿ 10% ರಿಯಾಯಿತಿ ನೀಡುವ ಮೂಲಕ ವಿಶೇಷ ಕೊಡುಗೆ ನೀಡಲಾಗಿದೆ. ಆದುದರಿಂದ, ಮಹಿಳಾ ಪ್ರವಾಸಿಗರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಲಾಗಿದೆ. ನಿಗಮದಿಂದ ಆಯೋಜಿಸಲಾಗುವ ವ್ಯವಸ್ಥಿತ ಪ್ರವಾಸಗಳು ಹಾಗೂ ಮಯೂರ ಹೋಟೆಲ್ ವಿವರಗಳಿಗೆ ನಿಗಮದ ಜಾಲತಾಣ http://www.kstdc.co ಭೇಟಿ ನೀಡಲು ಹಾಗೂ 080-43344334/8970650070 ನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here