Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಒಲುಮೆಯ ಕವಿ ದೊಡ್ಡರಂಗೇಗೌಡರಿಗೆ ಹಾವೇರಿ 86ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಿರೀಟ
  • ಕರ್ನಾಟಕ
  • ಬೆಂಗಳೂರು ನಗರ
  • ಹಾವೇರಿ

ಒಲುಮೆಯ ಕವಿ ದೊಡ್ಡರಂಗೇಗೌಡರಿಗೆ ಹಾವೇರಿ 86ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಿರೀಟ

The Bengaluru Live January 22, 2021 8:30 PM 1 minute read
ಒಲುಮೆಯ ಕವಿ ದೊಡ್ಡರಂಗೇಗೌಡರಿಗೆ ಹಾವೇರಿ 86ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಿರೀಟ

ಒಲುಮೆಯ ಕವಿ ದೊಡ್ಡರಂಗೇಗೌಡರಿಗೆ ಹಾವೇರಿ 86ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಿರೀಟ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು/ಹಾವೇರಿ:

ಹಾವೇರಿ ನಗರದಲ್ಲಿ ಇದೇ ಫೆಬ್ರುವರಿ 26, 27 ಹಾಗೂ 28 ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ದೊಡ್ಡರಂಗೇಗೌಡ ಅವರು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಜರುಗಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದೊಡ್ಡರಂಗೇಗೌಡರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲಿಂಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ.

ಕವಿ, ಪ್ರಾಧ್ಯಾಪಕ, ವಿದ್ವಾಂಸ, ಚಲನಚಿತ್ರ ಸಾಹಿತಿ, ಉಪನ್ಯಾಸಕ ಹೀಗೆ ಹಲವು ರೀತಿಯಲ್ಲಿ ಶೋಭಾಯಮಾನರಾಗಿ ಕನ್ನಡ ನಾಡಿನಲ್ಲಿ ಪ್ರಕಾಶಮಾನರಾಗಿದ್ದು, ಇವೆಲ್ಲ ಗುಣಗಳನ್ನೂ ಸವಿಪಾಕವಾಗಿ ಎಂಬಂತೆ ಸರಳ ಸಜ್ಜನಿಕೆಯಲ್ಲಿ ಬೆಸೆದಂತಿರುವ ನಮ್ರತೆಯ ಹಿರಿಯ ಚೇತನರು ದೊಡ್ಡರಂಗೇಗೌಡರು.

ಶ್ರೀಯುತ ರಂಗೇಗೌಡರು ಮತ್ತು ಅಕ್ಕಮ್ಮನವರ ಮಗನಾಗಿ ಫೆಬ್ರುವರಿ 7, 1946ರಲ್ಲಿ ಜನಿಸಿದ ದೊಡ್ಡರಂಗೇಗೌಡರು ಕುರುಬರ ಹಳ್ಳಿ, ಬಡವನ ಹಳ್ಳಿ, ಮಧುಗಿರಿ, ತುಮಕೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ 1970ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಆನರ್ಸ್ ಪದವಿ, 1972 ರಲ್ಲಿ ಎಂ.ಎ. ಪದವಿ ಪಡೆದರು. ಸ್ನಾತಕೋತ್ತರ ಪದವಿ ಸಂದರ್ಭದಲ್ಲಿ ಜಾನಪದದ ಕುರಿತು ಅವರು ವಿಶೇಷ ಅಧ್ಯಯನ ಕೈಗೊಂಡರು. 2004 ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ನವೋದಯ ಕಾವ್ಯ: ಒಂದು ಪುನರ್ ಮೌಲ್ಯಮಾಪನ' ಎಂಬ ಮಹಾಪ್ರಬಂಧಕ್ಕಾಗಿ ಅವರು ಡಾಕ್ಟರೇಟ್ ಪದವಿ ಲಭಿಸಿದೆ. 1972ರಿಂದ ಬೆಂಗಳೂರು ನಗರದ ಕೃಷ್ಣರಾಜಮಾರುಕಟ್ಟೆ ಬಳಿಯಲ್ಲಿನಎಸ್.ಎಲ್.ಎನ್. ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿ’ನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ದೊಡ್ಡರಂಗೇಗೌಡರು 2002ರಲ್ಲಿ ನಿವೃತ್ತರಾಗಿದ್ದಾರೆ. ಅವರು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕರಾಗಿ ಸಹಾ ಕೆಲಸಮಾಡಿದ್ದಾರೆ. ಕನ್ನಡ ನಾಡು ಅವರನ್ನು ವಿಧಾನ ಪರಿಷತ್ತಿಗೂ ಬರಮಾಡಿಕೊಂಡಿದೆ. ರಾಜ್ಯ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳಲ್ಲೂ ಅವರ ಸೇವೆ ಸಂದಿದೆ.

Kannada Sahitya Parishat

ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಬಂದ ಡಾ. ದೊಡ್ಡರಂಗೇಗೌಡರು ನೂರಾರು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟರಾಗಿ ಕಂಗೊಳಿಸಿದ್ದಾರೆ.

1972 ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಗೌಡರ ಕವನ ಸಂಕಲನ ಕಣ್ಣು ನಾಲಗೆ ಕಡಲು ಕಾವ್ಯ' ಕೃತಿಗೆ ಬಹುಮಾನ ಬಂದಿದೆ. 1990ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇವರಪ್ರೀತಿ ಪ್ರಗಾಥ’ ಕೃತಿಯು ವರ್ಷದ ಅಭಿಜಾತ ಕಾವ್ಯ ಎಂದು ವಿಮರ್ಶಕರ ಮೆಚ್ಚುಗೆ ಪಡೆದು ? “ರತ್ನಾಕರವರ್ಣಿ ? ಮುದ್ದಣ ಕಾವ್ಯ ಪ್ರಶಸ್ತಿ” ಗೌರವ ಲಭಿಸಿದೆ.

ದೊಡ್ಡರಂಗೇಗೌಡರು ನವ್ಯ ಕವಿಯಾಗಿ ಕನ್ನಡ ಸಾಹಿತ್ಯದಲ್ಲಿ ವಿಶೇಷ ಛಾಪು ಮೂಡಿಸಿದ್ದು ಅವರ ಕಾವ್ಯ ಸಂಕಲನಗಳಾದ ಜಗಲಿ ಹತ್ತಿ ಇಳಿದು',ಕಣ್ಣು ನಾಲಿಗೆ ಕಡಲು’, ನಾಡಾಡಿ',ಮೌನ ಸ್ಪಂದನ’, ಏಳು ಬೀಳಿನ ಹಾದಿ',ಕುದಿಯುವ ಕುಲುಮೆ’, ಚದುರಂಗದ ಕುದುರೆಗಳು',ಯುಗವಾಣಿ’, ಅವತಾರ ಐಸಿರಿ',ಬದುಕು ತೋರಿದ ಬೆಳಕು’, ಹೊಸ ಹೊನಲು',ಲೋಕಾಯಣ’, ನಿಕ್ಷೇಪ',ಗೆಯ್ಮೆ’ ಮುಂತಾದವು ಕನ್ನಡ ಕಾವ್ಯ ರಸಿಕರ ಮತ್ತು ವಿಮರ್ಶಕರ ನಲ್ಮೆ ಸಂಪಾದಿಸಿವೆ. ಅವರ ಪ್ರೀತಿ ಪ್ರಗಾಥ' ಮತ್ತುಹಳ್ಳಿ ಹುಡುಗಿ ಹಾಡು ? ಪಾಡು’ ಪ್ರಗಾಥಗಳ ಸಾಲಿಗೆ ಸೇರಿವೆ. ಮುಕ್ತಕಗಳಲ್ಲಿ ಮಣ್ಣಿನ ಮಾತುಗಳು',ಮಿಂಚಿನ ಗೊಂಚಲು’ ಪ್ರಧಾನವಾಗಿವೆ. ದೊಡ್ಡರಂಗೇಗೌಡರು ಗದ್ಯಕೃತಿಗಳಲ್ಲೂ ಸಮಾನ ಕೃಷಿ ನಡೆಸಿದ್ದು ವರ್ತಮಾನದ ವ್ಯಂಗ್ಯದಲ್ಲಿ',ವಿಚಾರ ವಾಹಿನಿ’, ವಿಶ್ವಮುಖಿ',ದಾರಿ ದೀಪಗಳು’ ಮುಂತಾದ ಕೃತಿಗಳನ್ನು ನೀಡಿದ್ದಾರೆ. ಅನನ್ಯನಾಡು ಅಮೆರಿಕ' ಮತ್ತುಪಿರಮಿಡ್ಡುಗಳ ಪರಿಸರದಲ್ಲಿ’ ದೊಡ್ಡರಂಗೇಗೌಡರ ಪ್ರವಾಸ ಕಥನಗಳು. ದೊಡ್ಡರಂಗೇಗೌಡರು ಅನೇಕ ಭಕ್ತಿಗೀತೆಗಳ ಸಂಕಲನವನ್ನೂ ರಚಿಸಿದ್ದಾರೆ. ಶ್ರೀಸಿದ್ದೇಶ್ವರ ಸ್ತುತಿ, ಭಕ್ತಿ ಕುಸುಮಾಂಜಲಿ, ನೂರೆಂಟು ನಮನ, ಶ್ರೀ ಗುರುಚರಣದಲ್ಲಿ, ವಚನವಾರಿದಿ ಇವುಗಳಲ್ಲಿ ಪ್ರಮುಖವಾಗಿವೆ.

ಕನ್ನಡ ಚಲನಚಿತ್ರಗೀತೆಗಳಲ್ಲಿ ಜಾನಪದ, ನವ್ಯ ಸಾಹಿತ್ಯಗಳ ಸೊಬಗನ್ನು ತುಂಬಿದ ಕೀರ್ತಿವಂತರಲ್ಲಿ ದೊಡ್ಡರಂಗೇಗೌಡರು ಪ್ರಮುಖರಾಗಿ ಕಾಣುತ್ತಾರೆ. ಭಾರತೀಯ ಸಾಮಾನ್ಯನ ಆಪ್ತ ಮಾಧ್ಯಮಗಳಾದ ಸಿನಿಮಾ, ದೂರದರ್ಶನ, ರೇಡಿಯೋ ಹಾಗೂ ಶ್ರವ್ಯಮಾಧ್ಯಮಗಳಲ್ಲಿ ದೊಡ್ಡರಂಗೇಗೌಡರು ಅಪಾರ ಸಾಧನೆ ಮಾಡಿರುವುದನ್ನು ನೆನೆದಾಗ ಅವರನ್ನು ಅರಿಯದ ಕನ್ನಡಿಗನೇ ಇಲ್ಲ ಎಂಬುದು ಮನವರಿಕೆಯಾಗುತ್ತದೆ.

ಎಪ್ಪತ್ತರ ದಶಕದಲ್ಲಿ ಮೂಡಿಬಂದ ಮಾಗಿಯ ಕನಸು' ಚಿತ್ರದಬಂದಿದೆ ಬದುಕಿನ ಬಂಗಾರದಾ ದಿನ’ ಗೀತೆಯೊಂದಿಗೆ ಚಿತ್ರರಂಗಕ್ಕೆ ಬಂದ ದೊಡ್ಡರಂಗೇಗೌಡರು ಕನ್ನಡ ಚಿತ್ರರಂಗಕ್ಕೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಬಂಗಾರದಂತಹ ಗೀತೆಗಳನ್ನು ನೀಡುತ್ತಾ ಬಂದಿದ್ದಾರೆ. ಬಂಗಾರದ ಜಿಂಕೆ'ಯಒಲುಮೆ ಸಿರಿಯಾ ಕಂಡು’; ಪರಸಂಗದ ಗೆಂಡೆತಿಮ್ಮ'ನತೇರ ಏರಿ ಅಂಬರದಾಗೆ’, ನೋಟದಾಗೆ ನಗೆಯಾ ಮೀಟಿ' ಮತ್ತುನಿನ್ನ ರೂಪು ಎದೆಯ ಕಲಕಿ’; ಕಿಲಾಡಿ ಜೋಡಿ'ಯಆಡಬೇಕು ಕರಾಟೆ ಆಡಬೇಕು’; ಭೂಲೋಕದಲ್ಲಿ ಯಮರಾಜ'ನಎಂದೂ ಕಾಣದ ಬೆಳಕು ಕಂಡೆ’, ಪಡುವಾರಳ್ಳಿ ಪಾಂಡವ'ರಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ಮರೆಯಲಿ’, ಸುವರ್ಣ ಸೇತುವೆ'ಯಮಲೆನಾಡಿನ್ ಮೂಲೆನ್ಯಾಗೆ ಇತ್ತೊಂದು ಸಣ್ಣ ಹಳ್ಳಿ’, ಅರುಣ ರಾಗ'ದ ನಾನೊಂದು ತೀರ ನೀನೊಂದು ತೀರ',ಹುಲಿ ಹೆಜ್ಜೆ’ಯ ಕಂಡದ್ದು ಕಂಡ್ಹಾಂಗೆ',ಬೆಳ್ಳಿ ಕಾಲುಂಗುರ’ದ ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ',ಮತ್ಸರ’ದ ಹೊತ್ತಾರೆ ಸೂರ್ಯನಂಗೆ',ಶರವೇಗದ ಸರದಾರ’ನ ಕನ್ನಡನಾಡಿನ ರನ್ನದ ರತುನ',ಆಲೆಮನೆ’ಯ ನಮ್ಮೂರ ಮಂದಾರ ಹೂವೆ',ಎಲ್ಲ ಮೇಲು ಕೀಳು ಸುಳ್ಳು ಭೇದಭಾವ ಬಗೆದ ಮನುಜ ಕಣೋ’; ಪ್ರಾಯ ಪ್ರಾಯ ಪ್ರಾಯ'ದಭೂಮೀ ತಾಯಾಣೆ ನೀ ಇಷ್ಟ ಕಣೆ’, ಟೋನಿ'ಯಆನಂದವೇ ಮೈತುಂಬಿದೆ’ ಮತ್ತು ನೀಲಿಯ ಬಾನಿಂದ';ಹೃದಯಗೀತೆ’ಯ ಹೃದಯ ಗೀತೆ ಹಾಡುತಿರೆ',ಜನುಮದ ಜೋಡಿ’ಯ ಕೋಲು ಮಂಡೆ ಜಂಗಮ ದೇವರು',ಅಶ್ವಮೇಧ’ದ ಹೃದಯ ಸಮುದ್ರ ಕಲಕಿ',ದೊಡ್ಡಮನೆ ಎಸ್ಟೇಟಿ’ನ `ಮನಸಿನಾಗೆ ಕೂಗಿದೆ’ ಇತ್ಯಾದಿ ಇತ್ಯಾದಿಯಾಗಿ ದೊಡ್ಡರಂಗೇಗೌಡರ ರಂಗುರಂಗಿನ ಪ್ರಸಿದ್ಧ ಹಾಡುಗಳನ್ನೇ ಪುಟಗಟ್ಟಲೆ ಪಟ್ಟಿ ಮಾಡಬಹುದು. ಅವರು ರಚಿಸಿದ ಚಿತ್ರಗೀತೆಗಳ ಸಂಖ್ಯೆಯೇ ಆರು ಶತಕಗಳನ್ನು ದಾಟಿವೆ.

ಮಾವು ಬೇವು',ಗೀತವೈಭವ’, ಕಾವ್ಯ-ಕಾವೇರಿ',ತಂಗಾಳಿ’, ಪ್ರೀತಿ ಭಾವನೆ',ಪ್ರೇಮಪಯಣ’, ಹೃದಯದಹಕ್ಕಿ',ಹೋಳಿಹುಣ್ಣಿಮೆ’, ಯುಗಾದಿಚೈತ್ರೋತ್ಸವ',ಮಾವು ಮಲ್ಲಿಗೆ’, ಭೂಮಿ ಬಾನು',ಸಿರಿ ಸಂವರ್ಧನ’, ನಲ್ಮೆ ನೇಸರ',ರಾಗರಂಗು’, `ಅಂತರಂಗದಹೂಬನ’ ಮುಂತಾದವು ದೊಡ್ಡರಂಗೇಗೌಡರ ಕ್ಯಾಸೆಟ್-ಸಿಡಿ ಲೋಕದ ಸುಂದರ ಕೊಡುಗೆಗಳು. ಭಕ್ತಿಗೀತೆಗಳಲ್ಲೂ ಅವರ ಕ್ಯಾಸೆಟ್-ಸಿಡಿಗಳು ಸಾಕಷ್ಟು ಧ್ವನಿಮಾಡಿವೆ.

ಸಾಹಿತ್ಯ ಮತ್ತು ಸಿನಿಮಾಲೋಕಗಳೆರಡರಲ್ಲೂ ದೊಡ್ಡರಂಗೇಗೌಡರು ಕನ್ನಡ ನಾಡಿನ ಹಲವಾರು ವಿಶಿಷ್ಟ ಗೌರವಗಳಿಗೆ ಪಾತ್ರರಾಗಿದ್ದಾರೆ. ಇದೀಗ ಹಾವೇರಿಯಲ್ಲಿ ಜರುಗಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

About the Author

The Bengaluru Live

Administrator

Visit Website View All Posts

Post navigation

Previous: ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ನಂತರ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು : ಸಚಿವ ಪ್ರಭು ಚವ್ಹಾಣ್
Next: ಹಂತ ಹಂತವಾಗಿ ಅನುದಾನ ನೀಡಲಾಗುತ್ತದೆ,ಪ್ರತಿಭಟನೆ ನಿರ್ಧಾರ ಕೈಬಿಡಿ : ಜೆಡಿಎಸ್ ರಾಜ್ಯಾಧ್ಯಕ್ಷರಿಗೆ‌ ಮುಖ್ಯಮಂತ್ರಿ ಅಭಯ..!

Related Stories

ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ

The Bengaluru Live November 22, 2026 2:01 PM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

The Bengaluru Live November 22, 2026 11:32 AM
ಸಾಂಪ್ರದಾಯಿಕ ಉಡುಪಿನಲ್ಲಿರುವ ಮಹಿಳೆಯೊಂದಿಗೆ ಮೈಕ್‌ನಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸುತ್ತ ಕುಳಿತಿರುವ ಜನರು
  • ಕರ್ನಾಟಕ

ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ

The Bengaluru Live November 22, 2026 11:16 AM

Latest Post

ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ

November 22, 2026 2:01 PM
ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

November 22, 2026 11:32 AM
ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ ಸಾಂಪ್ರದಾಯಿಕ ಉಡುಪಿನಲ್ಲಿರುವ ಮಹಿಳೆಯೊಂದಿಗೆ ಮೈಕ್‌ನಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸುತ್ತ ಕುಳಿತಿರುವ ಜನರು
  • ಕರ್ನಾಟಕ

ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ

November 22, 2026 11:16 AM
ಕಾನ್ಪುರ ಸೆಂಟ್ರಲ್–ಎಸ್‌ಎಂವಿಟಿ ಬೆಂಗಳೂರು ನಡುವಿನ ಸಾಪ್ತಾಹಿಕ ವಿಶೇಷ ರೈಲು ಡಿ.30ರವರೆಗೆ ವಿಸ್ತರಣೆ, ಪ್ರತಿ ದಿಕ್ಕಿನಲ್ಲಿ ಆರು ಟ್ರಿಪ್ ರೈಲು ನಿಲ್ದಾಣದ ಟಿಕೆಟ್ ಕೌಂಟರ್‌ಗಳ ಮುಂದೆ ಸರತಿ ಸಾಲಿನ ಕಂಬಗಳ ಬಳಿ ನಿಂತಿರುವ ಪ್ರಯಾಣಿಕರು
  • ಕರ್ನಾಟಕ
  • ಬೆಂಗಳೂರು ನಗರ

ಕಾನ್ಪುರ ಸೆಂಟ್ರಲ್–ಎಸ್‌ಎಂವಿಟಿ ಬೆಂಗಳೂರು ನಡುವಿನ ಸಾಪ್ತಾಹಿಕ ವಿಶೇಷ ರೈಲು ಡಿ.30ರವರೆಗೆ ವಿಸ್ತರಣೆ, ಪ್ರತಿ ದಿಕ್ಕಿನಲ್ಲಿ ಆರು ಟ್ರಿಪ್

November 22, 2026 8:08 AM
ಪಿಜಿ ಆಯುಷ್: ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟ, 887 ಮಂದಿಗೆ ಸೀಟು, ನ.24ರವರೆಗೆ ಆಯ್ಕೆ ಬದಲಾವಣೆಗೆ ಅವಕಾಶ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರಿನ ಫಲಕ ಮತ್ತು ಲಾಂಛನದ ಮುಂದೆ ತಮ್ಮ ಮೇಜಿನ ಬಳಿ ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಶಿಕ್ಷಣ

ಪಿಜಿ ಆಯುಷ್: ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟ, 887 ಮಂದಿಗೆ ಸೀಟು, ನ.24ರವರೆಗೆ ಆಯ್ಕೆ ಬದಲಾವಣೆಗೆ ಅವಕಾಶ

November 22, 2026 8:06 AM
ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಪಿಎಸ್‌ಸಿ: ನವೆಂಬರ್ 23ರ ಬೆಳಿಗ್ಗೆ 11ರವರೆಗೆ ಆಕ್ಷೇಪಣೆಗೆ ಅವಕಾಶ ಕಮಾನು ಬಾಲ್ಕನಿಗಳು ಮತ್ತು ಪ್ರವೇಶದ್ವಾರದಲ್ಲಿ ಪ್ರತಿಮೆ ಇರುವ ಬೂದು ಕಲ್ಲಿನ ಕಟ್ಟಡ, ಕರ್ನಾಟಕ ಲೋಕಸೇವಾ ಆಯೋಗದ ಕಚೇರಿ
  • ಕರ್ನಾಟಕ

ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಪಿಎಸ್‌ಸಿ: ನವೆಂಬರ್ 23ರ ಬೆಳಿಗ್ಗೆ 11ರವರೆಗೆ ಆಕ್ಷೇಪಣೆಗೆ ಅವಕಾಶ

November 22, 2026 7:42 AM

ನೀವು ತಪ್ಪಿಸಿಕೊಂಡಿರಬಹುದು

ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ

The Bengaluru Live November 22, 2026 2:01 PM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

The Bengaluru Live November 22, 2026 11:32 AM
ಸಾಂಪ್ರದಾಯಿಕ ಉಡುಪಿನಲ್ಲಿರುವ ಮಹಿಳೆಯೊಂದಿಗೆ ಮೈಕ್‌ನಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸುತ್ತ ಕುಳಿತಿರುವ ಜನರು
  • ಕರ್ನಾಟಕ

ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ

The Bengaluru Live November 22, 2026 11:16 AM
ರೈಲು ನಿಲ್ದಾಣದ ಟಿಕೆಟ್ ಕೌಂಟರ್‌ಗಳ ಮುಂದೆ ಸರತಿ ಸಾಲಿನ ಕಂಬಗಳ ಬಳಿ ನಿಂತಿರುವ ಪ್ರಯಾಣಿಕರು
  • ಕರ್ನಾಟಕ
  • ಬೆಂಗಳೂರು ನಗರ

ಕಾನ್ಪುರ ಸೆಂಟ್ರಲ್–ಎಸ್‌ಎಂವಿಟಿ ಬೆಂಗಳೂರು ನಡುವಿನ ಸಾಪ್ತಾಹಿಕ ವಿಶೇಷ ರೈಲು ಡಿ.30ರವರೆಗೆ ವಿಸ್ತರಣೆ, ಪ್ರತಿ ದಿಕ್ಕಿನಲ್ಲಿ ಆರು ಟ್ರಿಪ್

The Bengaluru Live November 22, 2026 8:08 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ
  • ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ
  • ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ
  • ಕಾನ್ಪುರ ಸೆಂಟ್ರಲ್–ಎಸ್‌ಎಂವಿಟಿ ಬೆಂಗಳೂರು ನಡುವಿನ ಸಾಪ್ತಾಹಿಕ ವಿಶೇಷ ರೈಲು ಡಿ.30ರವರೆಗೆ ವಿಸ್ತರಣೆ, ಪ್ರತಿ ದಿಕ್ಕಿನಲ್ಲಿ ಆರು ಟ್ರಿಪ್
©Copyright 2025 The Bengaluru Live All rights reserved. | MoreNews by AF themes.