Home ಬೆಂಗಳೂರು ನಗರ ಸಂಘದ ಹಿರಿಯರ ಆಶೀರ್ವಾದ ಪಡೆದ ನೂತನ ಸಚಿವ ಡಾ.ಅಶ್ವತ್ಥನಾರಾಯಣ

ಸಂಘದ ಹಿರಿಯರ ಆಶೀರ್ವಾದ ಪಡೆದ ನೂತನ ಸಚಿವ ಡಾ.ಅಶ್ವತ್ಥನಾರಾಯಣ

214
0
Dr Ashwathanarayana takes blessings of RSS leaders

ಕೃ.ನರಹರಿ ಅವರ ನಿವಾಸಕ್ಕೆ, ಯತಿರಾಜ ಮಠ, ಆದಿಚುಂಚನಗಿರಿ ಸಂಸ್ಥಾನ, ಬಿಜೆಪಿ ಕಚೇರಿಕ್ಕೆ ಭೇಟಿ

ಬೆಂಗಳೂರು:

ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರದಂದು ಸಂಘ ಪರಿವಾರ, ಮಠಗಳು ಹಾಗೂ ಪಕ್ಷದ ಕಚೇರಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಸಚಿವರು ಗಾಯತ್ರಿನಗರದ ನಾಗಪ್ಪ ಬ್ಲಾಕ್ ನಲ್ಲಿರುವ ಸಂಘ ಪರಿವಾರದ ಹಿರಿಯ ಮುಖಂಡರೂ ಆದ ಶಿಕ್ಷಣ ತಜ್ಞ ಕೃ. ನರಹರಿ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿ ಜಾರಿಗೆ ತರಲಾದ ವಿವಿಧ ಸುಧಾರಣಾ ಕ್ರಮಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು.

ಇದಾದ ಮೇಲೆ ಸಚಿವರು ವಿಜಯನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರಿ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದರು.

Dr Ashwathanarayana takes blessings of RSS leaders

ಸಚಿವರು ಚಾಮರಾಜಪೇಟೆಯಲ್ಲಿರುವ ಕೇಶವಕೃಪಕ್ಕೆ ತೆರಳಿ ಸಂಘ ಪರಿವಾರದ ಹಿರಿಯರ ಆಶೀರ್ವಾದ ಪಡೆದರಲ್ಲದೆ, ಅವರ ಜತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದರು. ಅಲ್ಲದೆ, ಸರಕಾರದ ಮಟ್ಟದಲ್ಲಿ ಮುಂದೆ ಆಗಬಹುದಾದ ಜನಪರ ಕೆಲಸಗಳ ಬಗ್ಗೆ ಸಂಘದ ಹಿರಿಯರು ಡಾ.ಅಶ್ವತ್ಥನಾರಾಯಣ ಅವರಿಗೆ ಮಾರ್ಗದರ್ಶನ ಮಾಡಿದರು.

ಯತಿರಾಜ ಮಠಕ್ಕೆ ಭೇಟಿ:

Dr Ashwathanarayana takes blessings of RSS leaders

ಸಂಘ ಪರಿವಾರದ ಮುಖಂಡರನ್ನು ಭೇಟಿ ಮಾಡಿದ ನಂತರ ಮಲ್ಲೇಶ್ವರದ ಯತಿರಾಜ ಮಠಕ್ಕೆ ಭೇಟಿ ನೀಡಿದ ಸಚಿವರು, ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಯವರ ಆಶೀರ್ವಾದ ಪಡೆದರು. “ಹಿಂದಿನ ಸರಕಾರದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಕೆಲಸ ಮಾಡಿ” ಎಂದು ಸ್ವಾಮೀಜಿ ಅವರು ಸಚಿವರಿಗೆ ಆಶೀರ್ವಾದ ಮಾಡಿದರು.

Dr Ashwathanarayana takes blessings of RSS leaders

ತದ ನಂತರ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಆಗಮಿಸಿದ ಅವರು, ಪಕ್ಷದ ಅಧ್ಯಕ್ಷ  ನಳಿನ ಕುಮಾರ್ ಕಟೀಲ್ , ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರ ಜತೆ ಮಾತುಕತೆ ನಡೆಸಿದರು. ಇದೇ ವೇಳೆ ಇನ್ನೂ ಹಲವು ಮುಖಂಡರನ್ನು ಭೇಟಿ ಮಾಡಿದರು.

ಬಳಿಕ ಮಲ್ಲೇಶ್ವರದ ಶಾಸಕರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ನಾಗರಿಕರಿಂದ ಅಭಿನಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಮುಖಂಡರು ಹಾಗೂ ಕ್ಷೇತ್ರದ ಜನರು ಸಚಿವರನ್ನು ಬರ ಮಾಡಿಕೊಂಡರಲ್ಲದೆ, ಸಿಹಿ ಹಂಚಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here