Home ಬೆಂಗಳೂರು ನಗರ ಬೆಂಗಳೂರು ಜಲಮಂಡಳಿಯಿಂದ ಆಗಸ್ಟ್ 7 ರಂದು ಫೋನ್-ಇನ್ ಕಾರ್ಯಕ್ರಮ

ಬೆಂಗಳೂರು ಜಲಮಂಡಳಿಯಿಂದ ಆಗಸ್ಟ್ 7 ರಂದು ಫೋನ್-ಇನ್ ಕಾರ್ಯಕ್ರಮ

44
0

ಬೆಂಗಳೂರು:

ಬೆಂಗಳೂರು ಜಲಮಂಡಳಿಯ ವತಿಯಿಂದ ಆಗಸ್ಟ್ 07, 2021 ರ ಶನಿವಾರದಂದು ಬೆಳಿಗ್ಗೆ 09:00 ರಿಂದ 10:30 ರವರೆಗೆ ಎನ್.ಜಯರಾಮ್, ಭಾ.ಆ.ಸೇ., ಅಧ್ಯಕ್ಷರು, ಬೆಂಗಳೂರು ಜಲಮಂಡಳಿ ಇವರೊಂದಿಗೆ ನೇರ ಫೋನ್-ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆರ್.ಆರ್.ಸಂಖ್ಯೆಯನ್ನು ತಿಳಿಸಿ ದೂರನ್ನು ನೀಡಬೇಕು. ನಂತರ ಸಾರ್ವಜನಿಕರು ತಮ್ಮ ವಲಯ/ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ/ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಯ ಬಗ್ಗೆ ನೇರವಾಗಿ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಕುಂದು-ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ದೂರವಾಣಿ ಸಂಖ್ಯೆ 080 -22945119 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here