ಬೆಂಗಳೂರು: ಪ್ರಯಾಣಿಕರ ದಟ್ಟಣೆ ನಿವಾರಿಸಲು ಚರ್ಲಪಲ್ಲಿ–ಯಶವಂತಪುರ ಗರೀಬ್ ರಥ್ ಎಕ್ಸ್ಪ್ರೆಸ್ ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವಿಶೇಷ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಲಾಗುವುದು ಎಂದು ನೈಋತ್ಯ ರೈಲ್ವೆ ಮಂಗಳವಾರ ತಿಳಿಸಿದೆ.
ಚರ್ಲಪಲ್ಲಿ–ಯಶವಂತಪುರ ಗರೀಬ್ ರಥ್
ದಕ್ಷಿಣ ಮಧ್ಯ ರೈಲ್ವೆಯು ರೈಲು ಸಂಖ್ಯೆ 12735/12736 ಚರ್ಲಪಲ್ಲಿ–ಯಶವಂತಪುರ–ಚರ್ಲಪಲ್ಲಿ ವಾರಕ್ಕೆ ಮೂರು ದಿನದ ಗರೀಬ್ ರಥ್ ಎಕ್ಸ್ಪ್ರೆಸ್ಗೆ ನಾಲ್ಕು ಎಸಿ 3-ಟೈರ್ ಎಕಾನಮಿ ಬೋಗಿಗಳನ್ನು ಶಾಶ್ವತವಾಗಿ ಸೇರಿಸಲು ಅಧಿಸೂಚನೆ ಹೊರಡಿಸಿದೆ. ಈ ಹೆಚ್ಚುವರಿ ಬೋಗಿಗಳು ಚರ್ಲಪಲ್ಲಿಯಿಂದ ನವೆಂಬರ್ 6ರಿಂದ ಮತ್ತು ಯಶವಂತಪುರದಿಂದ ನವೆಂಬರ್ 7ರಿಂದ ಜೋಡಣೆಯಾಗಲಿವೆ. ಇದರಿಂದ ರೈಲಿನ ಒಟ್ಟು ಬೋಗಿಗಳ ಸಂಖ್ಯೆ 18ರಿಂದ 22ಕ್ಕೆ ಹೆಚ್ಚಲಿದೆ.
ನ್ಯೂ ಟಿನ್ಸುಕಿಯಾ–ಎಸ್ಎಂವಿಟಿ ಬೆಂಗಳೂರು ವಿಶೇಷ ರೈಲು
ಈಶಾನ್ಯ ಗಡಿನಾಡು ರೈಲ್ವೆಯು ರೈಲು ಸಂಖ್ಯೆ 05952/05951 ನ್ಯೂ ಟಿನ್ಸುಕಿಯಾ–ಎಸ್ಎಂವಿಟಿ ಬೆಂಗಳೂರು–ನ್ಯೂ ಟಿನ್ಸುಕಿಯಾ ಎಕ್ಸ್ಪ್ರೆಸ್ ವಿಶೇಷ ರೈಲಿಗೆ ಎರಡು ಎಸಿ 3-ಟೈರ್ ಬೋಗಿಗಳನ್ನು ತಾತ್ಕಾಲಿಕವಾಗಿ ಸೇರಿಸಿದೆ.
- ರೈಲು ಸಂಖ್ಯೆ 05952ಕ್ಕೆ ನ್ಯೂ ಟಿನ್ಸುಕಿಯಾದಿಂದ ನವೆಂಬರ್ 5 ಮತ್ತು 12ರಂದು ಹೆಚ್ಚುವರಿ ಬೋಗಿಗಳು ಜೋಡಣೆಯಾಗಲಿವೆ.
- ರೈಲು ಸಂಖ್ಯೆ 05951ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ನವೆಂಬರ್ 9 ಮತ್ತು 16ರಂದು ಹೆಚ್ಚುವರಿ ಬೋಗಿಗಳು ಜೋಡಣೆಯಾಗಲಿವೆ.
ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಈ ವಿವರಗಳನ್ನು ನೀಡಿದ್ದಾರೆ.
