Former Deputy Mayor S Harish appointed as new president of Bangalore North BJP district unit, MLA CK Ramamurthy (Jayanagar) as Bangalore South BJP district unit and Saptagirigowda as Bangalore Central BJP district unit | ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಮಾಜಿ ಉಪಮೇಯರ್ ಎಸ್ ಹರೀಶ್, ಬೆಂಗಳೂರು ದಕ್ಷಿಣ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಶಾಸಕ ಸಿ ಕೆ ರಾಮಮೂರ್ತಿ (ಜಯನಗರ) ಮತ್ತು ಬೆಂಗಳೂರು ಕೇಂದ್ರ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಸಪ್ತಗಿರಿಗೌಡ ನೇಮಕ
39 ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
ಬೆಂಗಳೂರು:
ಕರ್ನಾಟಕ ರಾಜ್ಯ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಹಾಗೂ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅದೇ ರೀತಿ, ಮೂವರು ಮಾಜಿ ಶಾಸಕರಾದ ಎಲ್. ನಾಗೇಂದ್ರ, ಸಿಎಸ್. ನಿರಂಜನ್ ಕುಮಾರ್ ಮತ್ತು ಅರುಣ್ ಕುಮಾರ್ ಪೂಜಾರ ಅವರಿಗೂ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ ಎಸ್. ದತ್ತಾತ್ರಿ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೆಕಲ್ಲು, ಸಹ ಕಾರ್ಯದರ್ಶಿಯಾಗಿ ಬಿ.ಹೆಚ್. ವಿಶ್ವನಾಥ್ ನೇಮಕಗೊಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ
- ದಕ್ಷಿಣ ಕನ್ನಡ- ಸತೀಶ್ ಕುಂಪಲ
- ಉಡುಪಿ- ಕಿಶೋರ್ ಕುಂದಾಪುರ
- ಮೈಸೂರು ನಗರ- ಎಲ್. ನಾಗೇಂದ್ರ
- ಮೈಸೂರು ಗ್ರಾಮಾಂತರ- ಎಲ್.ಆರ್. ಮಹದೇವಸ್ವಾಮಿ
- ಚಾಮರಾಜನಗರ- ಸಿ.ಎಸ್. ನಿರಂಜನ್ ಕುಮಾರ್
- ಹಾಸನ- ಸಿದ್ದೇಶ್ ನಾಗೇಂದ್ರ
- ಕೊಡಗು- ರವಿ ಕಾಳಪ್ಪ
- ಚಿಕ್ಕಮಗಳೂರು- ದೇವರಾಜ ಶೆಟ್ಟಿ
- ಮಂಡ್ಯ- ಇಂದ್ರೇಶ್ ಕುಮಾರ್
- ಶಿವಮೊಗ್ಗ- ಟಿ.ಡಿ. ಮೇಘರಾಜ್
- ಉತ್ತರ ಕನ್ನಡ- ಎನ್.ಎಸ್. ಹೆಗಡೆ
- ಹಾವೇರಿ- ಅರುಣ್ ಕುಮಾರ್ ಪೂಜಾರ
- ಹುಬ್ಬಳ್ಳಿ- ಧಾರವಾಡ- ತಿಪ್ಪಣ್ಣ ಮಜ್ಜಗಿ
- ಧಾರವಾಡ ಗ್ರಾಮಾಂತರ- ನಿಂಗಪ್ಪ ಸುತ್ತಗಟ್ಟಿ
- ಗದಗ- ರಾಜು ಕುರಡಗಿ
- ಬೆಳಗಾವಿ ನಗರ- ಗೀತಾ ಸುತಾರ್
- ಬೆಳಗಾವಿ ಗ್ರಾಮಾಂತರ- ಸುಭಾಷ್ ಪಾಟೀಲ್
- ಚಿಕ್ಕೋಡಿ- ಸತೀಶ್ ಅಪ್ಪಾಜಿಗೋಳ್
- ಬಾಗಲಕೋಟೆ- ಶಾಂತಗೌಡ ಪಾಟೀಲ್
- ವಿಜಯಪುರ- ಆರ್.ಎಸ್. ಪಾಟೀಲ್
- ಬೀದರ್- ಸೋಮನಾಥ ಪಾಟೀಲ್
- ಕಲಬುರಗಿ ನಗರ- ಚಂದ್ರಕಾಂತ ಪಾಟೀಲ್
- ಕಲಬುರಗಿ ಗ್ರಾಮಾಂತರ- ಶಿವರಾಜ ಪಾಟೀಲ್ ರದ್ದೇವಾಡಿ
- ಯಾದಗಿರಿ- ಅಮೀನ್ ರೆಡ್ಡಿ
- ರಾಯಚೂರು- ಡಾ. ಶಿವರಾಜ ಪಾಟೀಲ್
- ಕೊಪ್ಪಳ- ನವೀನ್ ಗುಳಗಣ್ಣನವರ್
- ಬಳ್ಳಾರಿ- ಅನಿಲ್ ಕುಮಾರ್ ಮೋಕಾ
- ವಿಜಯನಗರ- ಚನ್ನಬಸವನಗೌಡ ಪಾಟೀಲ್
- ದಾವಣಗೆರೆ- ರಾಜಶೇಖರ್
- ಚಿತ್ರದುರ್ಗ- ಎ. ಮುರಳಿ
- ತುಮಕೂರು – ಹೆಚ್.ಎಸ್. ರವಿಶಂಕರ್
- ಮಧುಗಿರಿ- ಬಿ.ಸಿ. ಹನುಮಂತೇಗೌಡ
- ರಾಮನಗರ- ಆನಂದಸ್ವಾಮಿ
- ಬೆಂಗಳೂರು ಗ್ರಾಮಾಂತರ- ರಾಮಕೃಷ್ಣಪ್ಪ
- ಚಿಕ್ಕಬಳ್ಳಾಪುರ-ರಾಮಲಿಂಗಪ್ಪ
- ಕೋಲಾರ- ಡಾ. ಕೆ.ಎನ್. ವೇಣುಗೋಪಾಲ್
- ಬೆಂಗಳೂರು ಉತ್ತರ- ಎಸ್. ಹರೀಶ್
- ಬೆಂಗಳೂರು ಕೇಂದ್ರ- ಸಪ್ತಗಿರಿಗೌಡ
- ಬೆಂಗಳೂರು ದಕ್ಷಿಣ- ಸಿ.ಕೆ. ರಾಮಮೂರ್ತಿ

