‘ಎನರ್ಜಿ ಡ್ರಿಂಕ್’ ಎಂಬ ಹೆಸರಿನ ಬಳಕೆಗೆ FSSAI ಕಠಿಣ ಕ್ರಮ; ರೆಡ್ ಬುಲ್, ಮಾನ್ಸ್ಟರ್, ಕ್ಯಾಂಪಾ ಸೇರಿ ಹಲವು ಪ್ರಮುಖ ಬ್ರ್ಯಾಂಡ್ಗಳಿಗೆ ಮಿಸ್ಬ್ರ್ಯಾಂಡಿಂಗ್ ನೋಟಿಸ್
ನವದೆಹಲಿ, ಜುಲೈ 4: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ‘ಎನರ್ಜಿ ಡ್ರಿಂಕ್’ ಎಂದು ಬ್ರ್ಯಾಂಡಿಂಗ್ ಹಾಗೂ ಲೇಬಲಿಂಗ್ ಮಾಡಲಾಗುತ್ತಿರುವ ಹಲವು ಜನಪ್ರಿಯ ಪಾನೀಯ ಬ್ರ್ಯಾಂಡ್ಗಳಿಗೆ ಮಿಸ್ಬ್ರ್ಯಾಂಡಿಂಗ್ (Misbranding) ಹಾಗೂ ಗ್ರಾಹಕರನ್ನು ದಾರಿ ತಪ್ಪಿಸುವ (Misleading Claims) ಆರೋಪಗಳ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಿದೆ. ಭಾರತದಲ್ಲಿ ಜಾರಿಯಲ್ಲಿರುವ ಆಹಾರ ಸುರಕ್ಷತಾ ನಿಯಮಗಳ ಪ್ರಕಾರ “Energy Drink” ಎಂಬ ಹೆಸರಿನ ಯಾವುದೇ ಪ್ರತ್ಯೇಕ ಮಾನದಂಡವನ್ನು ಇದುವರೆಗೆ ಅಧಿಸೂಚನೆ ಮಾಡಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
FSSAI ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ Red Bull Energy Drink, Monster Energy, Campa Energy Drink – Gold Boost, Hell Energy Drink, Adrenaline Rush Energy Drink ಹಾಗೂ Sting Energy Drink ಸೇರಿದಂತೆ ಹಲವು ಉತ್ಪನ್ನಗಳ ಬ್ರ್ಯಾಂಡಿಂಗ್, ಲೇಬಲಿಂಗ್ ಮತ್ತು ಕೆಲವು ಸಂದರ್ಭಗಳಲ್ಲಿ ಇ-ಕಾಮರ್ಸ್ ವೇದಿಕೆಗಳಲ್ಲಿ “Energy Drink” ಎಂಬ ಪದ ಬಳಕೆಯ ಕುರಿತು ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಪ್ರಾಧಿಕಾರವು Food Safety and Standards (Food Products Standards and Food Additives) Regulations, 2011 ಅಡಿಯಲ್ಲಿ ಇರುವ Food Category System ಅನ್ನು ಉತ್ಪನ್ನಗಳ ವರ್ಗೀಕರಣಕ್ಕಾಗಿ ಮಾತ್ರ ಬಳಸಲಾಗುತ್ತದೆ. ಅದು ಉತ್ಪನ್ನದ ಹೆಸರು (Naming) ಅಥವಾ ಲೇಬಲಿಂಗ್ (Labelling) ಉದ್ದೇಶಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಯಾವುದೇ ಉತ್ಪನ್ನವನ್ನು ಕೇವಲ ಆ ವರ್ಗೀಕರಣದ ಆಧಾರದ ಮೇಲೆ “Energy Drink” ಎಂದು ಮಾರುಕಟ್ಟೆಗೆ ಪರಿಚಯಿಸುವುದು ಸೂಕ್ತವಲ್ಲ ಎಂದು ತಿಳಿಸಿದೆ.
FSSAI ಮತ್ತೊಮ್ಮೆ ಸ್ಪಷ್ಟಪಡಿಸಿರುವುದೇನೆಂದರೆ, “Energy Drink” ಅಥವಾ ಅದೇ ರೀತಿಯ ಉತ್ಪನ್ನಗಳಿಗೆ ಯಾವುದೇ ಅಧಿಕೃತ ಆಹಾರ ಗುಣಮಟ್ಟದ ಮಾನದಂಡವನ್ನು ಇನ್ನೂ ಅಧಿಸೂಚನೆ ಮಾಡಿಲ್ಲ.
ಇದರ ಜೊತೆಗೆ ಉತ್ಪನ್ನಗಳು ಶಕ್ತಿ ಹೆಚ್ಚಿಸುತ್ತದೆ, ದೇಹವನ್ನು ಚುರುಕುಗೊಳಿಸುತ್ತದೆ, ಏಕಾಗ್ರತೆ ಹೆಚ್ಚಿಸುತ್ತದೆ, ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ, ಸಾಮಾನ್ಯ ದೌರ್ಬಲ್ಯ ನಿವಾರಿಸುತ್ತದೆ ಅಥವಾ ಇಂತಹ Functional ಮತ್ತು Therapeutic Claims ಮಾಡುವುದಕ್ಕೂ FSSAI ಆಕ್ಷೇಪ ವ್ಯಕ್ತಪಡಿಸಿದೆ.
Food Safety and Standards Act, 2006 ಹಾಗೂ ಅದರಡಿ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಆಹಾರ ಉತ್ಪನ್ನಗಳಿಗೆ ಇಂತಹ ಕಾರ್ಯಾತ್ಮಕ ಅಥವಾ ಚಿಕಿತ್ಸಾ ಸಂಬಂಧಿತ ದಾವೆಗಳನ್ನು ಮಾಡುವುದಕ್ಕೆ ಅನುಮತಿ ಇಲ್ಲ ಎಂದು ಪ್ರಾಧಿಕಾರ ತಿಳಿಸಿದೆ.
FSSAI ನೋಟಿಸ್ ವ್ಯಾಪ್ತಿಗೆ ಬಂದಿರುವ ಪ್ರಮುಖ ಉತ್ಪನ್ನಗಳು:
- Campa Energy Drink – Gold Boost
- Monster Energy
- Red Bull Energy Drink
- Hell Energy Drink
- Adrenaline Rush Energy Drink
- Sting Energy Drink
ಪ್ರಾಧಿಕಾರದ ಪ್ರಕಾರ ಕೆಲವು ಉತ್ಪನ್ನಗಳ ಪ್ಯಾಕೇಜಿಂಗ್ ಹಾಗೂ ಲೇಬಲ್ಗಳಲ್ಲೇ “Energy Drink” ಎಂಬ ಪದ ಬಳಸಲಾಗಿದ್ದು, ಇನ್ನೂ ಕೆಲವು ಉತ್ಪನ್ನಗಳನ್ನು ವಿವಿಧ ಇ-ಕಾಮರ್ಸ್ ವೇದಿಕೆಗಳಲ್ಲಿ ಇದೇ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ.
ಗ್ರಾಹಕರು ತಪ್ಪು ಕಲ್ಪನೆಗೆ ಒಳಗಾಗದಂತೆ ನೋಡಿಕೊಳ್ಳುವುದು ಹಾಗೂ ಆಹಾರ ಉತ್ಪನ್ನಗಳ ಹೆಸರು, ಲೇಬಲ್, ಜಾಹೀರಾತು ಮತ್ತು ಪ್ರಚಾರಗಳು Food Safety and Standards Act, 2006 ಹಾಗೂ ಸಂಬಂಧಿತ ನಿಯಮಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು FSSAI ತಿಳಿಸಿದೆ.
ಎಲ್ಲಾ Food Business Operators (FBOs) ತಮ್ಮ ಉತ್ಪನ್ನಗಳ ಹೆಸರು, ಲೇಬಲಿಂಗ್, ಪ್ಯಾಕೇಜಿಂಗ್, ಪ್ರಚಾರ ಸಾಮಗ್ರಿಗಳು ಹಾಗೂ ಆನ್ಲೈನ್ ಲಿಸ್ಟಿಂಗ್ಗಳನ್ನು ಮರುಪರಿಶೀಲಿಸಿ, ಜಾರಿಯಲ್ಲಿರುವ ಆಹಾರ ಸುರಕ್ಷತಾ ನಿಯಮಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡಿಕೊಳ್ಳುವಂತೆ FSSAI ಸೂಚಿಸಿದೆ.
ವೇಗವಾಗಿ ಬೆಳೆಯುತ್ತಿರುವ ಭಾರತದ ಪಾನೀಯ ಮಾರುಕಟ್ಟೆಯಲ್ಲಿ ಭ್ರಮೆ ಹುಟ್ಟಿಸುವ ಜಾಹೀರಾತುಗಳು ಮತ್ತು ಆರೋಗ್ಯ ಸಂಬಂಧಿತ ದಾವೆಗಳ ಮೇಲೆ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಕ್ರಮ ಇದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.