ನವೆಂಬರ್ 18ರಂದು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ನಡೆದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖಾ ಶೃಂಗಸಭೆ (ಸಮಾವೇಶಿ ನೀತಿ ಸಂಕಲ್ಪ); ಸಚಿವ ಕೆ.ಎಚ್. ಮುನಿಯಪ್ಪ ಅವರ ಮಾಧ್ಯಮ ತಂಡ ಹಂಚಿಕೊಂಡ ಚಿತ್ರ. ಚಿತ್ರ: ಲಭ್ಯವಾದದ್ದು
ಬೆಂಗಳೂರು: ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಬುಧವಾರ ಕೇಂದ್ರದ ಸಮಾಜ ಕಲ್ಯಾಣ ಸಚಿವಾಲಯ ಆಯೋಜಿಸಿದ್ದ ‘ಸಮಾವೇಶಿ ನೀತಿ ಸಂಕಲ್ಪ’ ಎಂಬ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖಾ ಶೃಂಗಸಭೆಯಲ್ಲಿ ರಾಜ್ಯದ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಭಾಗವಹಿಸಿದರು ಎಂದು ಸಚಿವರ ಮಾಧ್ಯಮ ತಂಡದ ಪ್ರಕಟಣೆ ತಿಳಿಸಿದೆ.
