ತಪ್ಪುದಾರಿಗೆಳೆಯುವ ಉತ್ಪನ್ನ ದಾವೆಗಳ ಆರೋಪ: Heritage Foods ಮತ್ತು Dia Foods ಗೆ FSSAI ನೋಟಿಸ್; 7 ದಿನಗಳಲ್ಲಿ ಸ್ಪಷ್ಟನೆ ಕೋರಿಕೆ
ನವದೆಹಲಿ, ಜುಲೈ 6: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ವು ಉತ್ಪನ್ನಗಳ ಮೇಲಿನ ತಪ್ಪುದಾರಿಗೆಳೆಯುವ (Misleading) ದಾವೆಗಳ ಆರೋಪದ ಹಿನ್ನೆಲೆಯಲ್ಲಿ Heritage Foods Limited ಹಾಗೂ Dia Foods ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. **ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006 (FSS Act, 2006)**ರ ಅನ್ವಯ ಎರಡೂ ಸಂಸ್ಥೆಗಳಿಗೆ ಏಳು ದಿನಗಳೊಳಗೆ ಸ್ಪಷ್ಟನೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದರ ಜೊತೆಗೆ, ದೇಶದ ಎಲ್ಲಾ ಆಹಾರ ವ್ಯವಹಾರ ನಿರ್ವಹಣಾ ಸಂಸ್ಥೆಗಳು (Food Business Operators – FBOs) ಆಹಾರ ಉತ್ಪನ್ನಗಳ ಲೇಬಲಿಂಗ್, ಜಾಹೀರಾತು ಮತ್ತು ಪ್ರಚಾರದಲ್ಲಿ ಮಾಡಲಾಗುವ ಎಲ್ಲ ದಾವೆಗಳು ಜಾರಿಯಲ್ಲಿರುವ ನಿಯಮಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಅಗತ್ಯವಿದ್ದಲ್ಲಿ ತಕ್ಷಣವೇ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಫ್ಎಸ್ಎಸ್ಎಐ ಸೂಚಿಸಿದೆ.

Dia Foods ಗೆ ನೋಟಿಸ್
Dia Foods ಸಂಸ್ಥೆಯ La Casa Vegan Hazelnut Chocolate Spread ಉತ್ಪನ್ನದ ಕುರಿತು ಎಫ್ಎಸ್ಎಸ್ಎಐ ನೋಟಿಸ್ ನೀಡಿದೆ.
ಈ ಉತ್ಪನ್ನದ ಮೇಲೆ ಕೆಳಕಂಡ ದಾವೆಗಳು ಮಾಡಲಾಗಿದ್ದವು:
- “All Natural”
- “100% Organic”
- “Vegan”
ಈ ಸಂಬಂಧ ಎಫ್ಎಸ್ಎಸ್ಎಐ ಗುರುತಿಸಿರುವ ಪ್ರಮುಖ ಅಂಶಗಳು:
- “All Natural” ಎಂಬ ದಾವು Schedule V ಅಡಿಯಲ್ಲಿ “Natural” ಪದ ಬಳಕೆಗೆ ನಿಗದಿಪಡಿಸಿರುವ ಷರತ್ತುಗಳನ್ನು ಪೂರೈಸುವುದಿಲ್ಲ. ಹೀಗಾಗಿ ಇದು ಗ್ರಾಹಕರನ್ನು ತಪ್ಪುದಾರಿಗೆಳೆಯುವ ಸಾಧ್ಯತೆ ಇದೆ.
- “100% Organic” ಮತ್ತು “Vegan” ಎಂಬ ಪದಗಳು ಉತ್ಪನ್ನವು ಸಂಪೂರ್ಣ ಸಾವಯವ ಹಾಗೂ ವೆಗನ್ ಉತ್ಪನ್ನ ಎಂಬ ಭಾವನೆ ಮೂಡಿಸುತ್ತವೆ. ಆದರೆ ಈ ಉತ್ಪನ್ನಕ್ಕೆ ಎಫ್ಎಸ್ಎಸ್ಎಐ ಪರವಾನಗಿಯಲ್ಲಿ Organic Food ಹಾಗೂ Vegan Food ಅನುಮೋದನೆ (Endorsement) ಪಡೆದಿರುವುದಿಲ್ಲ ಎಂದು ಪ್ರಾಧಿಕಾರ ಹೇಳಿದೆ.
- 2026ರ ಮೇ 28ರ ಸಲಹೆ (Advisory)ಯನ್ನು ಉಲ್ಲೇಖಿಸಿರುವ ಎಫ್ಎಸ್ಎಸ್ಎಐ, “100%” ಎಂಬ ಪದದ ಬಳಕೆಗೆ FSS Act, 2006 ಅಥವಾ ಅದರಡಿ ರೂಪಿಸಲಾದ ನಿಯಮಗಳಲ್ಲಿ ಯಾವುದೇ ವ್ಯಾಖ್ಯಾನ ಇಲ್ಲ ಎಂದು ತಿಳಿಸಿದೆ. ಆದ್ದರಿಂದ “100% Organic” ಎಂಬ ಬಳಕೆ ಗ್ರಾಹಕರನ್ನು ತಪ್ಪುದಾರಿಗೆಳೆಯುವಂತದ್ದು ಎಂದು ಹೇಳಿದೆ.
Heritage Foods Limited ಗೆ ನೋಟಿಸ್
Heritage Foods Limited ಸಂಸ್ಥೆಯ Heritage Fresh Paneer ಉತ್ಪನ್ನಕ್ಕೂ ಎಫ್ಎಸ್ಎಸ್ಎಐ ನೋಟಿಸ್ ಜಾರಿ ಮಾಡಿದೆ.
ಎಫ್ಎಸ್ಎಸ್ಎಐ ಪ್ರಕಾರ:
- “Fresh Paneer” ಎಂಬ ದಾವು Schedule V ಅಡಿಯಲ್ಲಿ “Fresh” ಪದ ಬಳಕೆಗೆ ನಿಗದಿಪಡಿಸಿರುವ ಷರತ್ತುಗಳನ್ನು ಪೂರೈಸುವುದಿಲ್ಲ. ಹೀಗಾಗಿ ಈ ಪದ ಬಳಕೆ ಗ್ರಾಹಕರಿಗೆ ತಪ್ಪು ಸಂದೇಶ ನೀಡುವ ಸಾಧ್ಯತೆ ಇದೆ.
- “Healthy Happiness” ಎಂಬ ಟ್ರೇಡ್ಮಾರ್ಕ್ ಅಥವಾ ಬ್ರಾಂಡಿಂಗ್ನಲ್ಲಿ “Healthy” ಪದ ಬಳಕೆ Food Safety and Standards (Advertising and Claims) Regulations, 2018ರ **Regulation 8(3)**ಕ್ಕೆ ಅನುಗುಣವಾಗಿಲ್ಲ ಎಂದು ಎಫ್ಎಸ್ಎಸ್ಎಐ ಹೇಳಿದೆ. ಈ ಪದ ಬಳಕೆ ಉತ್ಪನ್ನವು ಆರೋಗ್ಯವನ್ನು ಹೆಚ್ಚಿಸುತ್ತದೆ ಅಥವಾ ಆರೋಗ್ಯಕರವಾಗಿದೆ ಎಂಬ ಭಾವನೆ ಮೂಡಿಸಬಹುದಾದ್ದರಿಂದ ಅದು ತಪ್ಪುದಾರಿಗೆಳೆಯುವ ದಾವೆಯಾಗಬಹುದು ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.
ಏಳು ದಿನಗಳಲ್ಲಿ ಉತ್ತರಿಸಲು ಸೂಚನೆ
ಎರಡೂ ಸಂಸ್ಥೆಗಳು ಏಳು ದಿನಗಳೊಳಗೆ ತಮ್ಮ ಸ್ಪಷ್ಟನೆ ಸಲ್ಲಿಸಬೇಕು ಎಂದು ಎಫ್ಎಸ್ಎಸ್ಎಐ ಸೂಚಿಸಿದೆ. ಇಲ್ಲದಿದ್ದರೆ FSS Act, 2006 ಹಾಗೂ ಅದರಡಿ ರೂಪಿಸಲಾದ ನಿಯಮಗಳ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಬಹುದು ಎಂದು ನೋಟಿಸ್ನಲ್ಲಿ ಎಚ್ಚರಿಸಲಾಗಿದೆ.
ಉತ್ಪನ್ನಗಳ ಪ್ಯಾಕೇಜಿಂಗ್, ಲೇಬಲಿಂಗ್, ಜಾಹೀರಾತು ಮತ್ತು ಮಾರುಕಟ್ಟೆ ಪ್ರಚಾರದಲ್ಲಿ ಮಾಡಲಾಗುವ ಎಲ್ಲ ದಾವೆಗಳು ಕಾನೂನುಬದ್ಧವಾಗಿರಬೇಕು ಹಾಗೂ ಗ್ರಾಹಕರನ್ನು ಯಾವುದೇ ರೀತಿಯಲ್ಲಿ ತಪ್ಪುದಾರಿಗೆಳೆಯಬಾರದು ಎಂದು ಎಫ್ಎಸ್ಎಸ್ಎಐ ಎಲ್ಲಾ ಆಹಾರ ಉತ್ಪಾದಕರು ಮತ್ತು ಮಾರಾಟಗಾರರಿಗೆ ಮತ್ತೊಮ್ಮೆ ಸೂಚಿಸಿದೆ.
ಸಂಸ್ಥೆಗಳ ಪ್ರತಿಕ್ರಿಯೆ ನಿರೀಕ್ಷೆ: Heritage Foods Limited ಮತ್ತು Dia Foods ಸಂಸ್ಥೆಗಳಿಂದ ಅಧಿಕೃತ ಪ್ರತಿಕ್ರಿಯೆ ಬಂದ ಬಳಿಕ ಈ ಸುದ್ದಿಯನ್ನು ನವೀಕರಿಸಲಾಗುವುದು.