Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ತಡೆಗೆ ವೈದ್ಯರು ಮುಂದಾಗಲಿ: ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ; ಶೇ.60-70ರಷ್ಟು ವೈರಲ್ ಸೋಂಕು
  • ಕರ್ನಾಟಕ

ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ತಡೆಗೆ ವೈದ್ಯರು ಮುಂದಾಗಲಿ: ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ; ಶೇ.60-70ರಷ್ಟು ವೈರಲ್ ಸೋಂಕು

The Bengaluru Live November 19, 2026 2:37 PM 1 minute read
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವೈದ್ಯಾಧಿಕಾರಿಗಳ ಸಾಮರ್ಥ್ಯ ವರ್ಧನೆ ಕಾರ್ಯಕ್ರಮದ ಫಲಕದ ಮುಂದೆ ಬೆಳಗಿದ ದೀಪದ ಸುತ್ತ ನಿಂತಿರುವ ಎಂಟು ಮಂದಿ

ಗುರುವಾರ ಬೆಂಗಳೂರಿನಲ್ಲಿ ಜಿಬಿಎ ವೈದ್ಯಾಧಿಕಾರಿಗಳಿಗಾಗಿ ಆಯೋಜಿಸಿದ್ದ ಆಂಟಿಮೈಕ್ರೋಬಿಯಲ್ ಪ್ರತಿರೋಧ ಕಾರ್ಯಕ್ರಮದ ಉದ್ಘಾಟನೆಯಲ್ಲಿ ದೀಪ ಬೆಳಗಿದ ಅಧಿಕಾರಿಗಳು ಮತ್ತು ತಜ್ಞರು. ಚಿತ್ರ: ಲಭ್ಯವಾದದ್ದು

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಆಂಟಿಬಯೋಟಿಕ್ ಔಷಧಿಗಳ ಅನಗತ್ಯ ಮತ್ತು ಅತಿಯಾದ ಬಳಕೆಯಿಂದ ಆಂಟಿಮೈಕ್ರೋಬಿಯಲ್ ಪ್ರತಿರೋಧ (ಎಎಂಆರ್) ಹೆಚ್ಚಾಗುತ್ತಿದ್ದು, ಈ ಸಮಸ್ಯೆ ನಿಯಂತ್ರಣಕ್ಕೆ ವೈದ್ಯರು ಔಷಧಿಗಳನ್ನು ಜವಾಬ್ದಾರಿಯುತವಾಗಿ ಶಿಫಾರಸು ಮಾಡಬೇಕು ಎಂದು ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ ಗುರುವಾರ ಕರೆ ನೀಡಿದರು. ವಿಶ್ವ ಆಂಟಿಮೈಕ್ರೋಬಿಯಲ್ ಪ್ರತಿರೋಧ ಜಾಗೃತಿ ಸಪ್ತಾಹ-2026ರ ಅಂಗವಾಗಿ ಜಿಬಿಎ ವ್ಯಾಪ್ತಿಯ ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಯುಪಿಎಚ್‌ಸಿ ವೈದ್ಯಾಧಿಕಾರಿಗಳಿಗಾಗಿ ಆರೋಗ್ಯ ಇಲಾಖೆಯ ಮಹಾನಗರ ಕಣ್ಗಾವಲು ಘಟಕ ಹಾಗೂ ಎಎಂಆರ್‌ಸೆನ್ಸ್ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.

ಜಿಬಿಎ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ್ಮ ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳಲ್ಲಿ ವೈದ್ಯರು ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿದ ನಂತರವೇ ಆಂಟಿಬಯೋಟಿಕ್‌ಗಳನ್ನು ಶಿಫಾರಸು ಮಾಡಬೇಕು ಎಂದು ಅವರು ಹೇಳಿದರು. ಶೇ.60ರಿಂದ 70ರಷ್ಟು ಪ್ರಕರಣಗಳು ವೈರಲ್ ಸೋಂಕುಗಳಾಗಿದ್ದು, ಇಂತಹ ಸಂದರ್ಭಗಳಲ್ಲಿ ಆಂಟಿಬಯೋಟಿಕ್‌ಗಳ ಅಗತ್ಯವಿರುವುದಿಲ್ಲ; ಸಾಮಾನ್ಯ ಜ್ವರಕ್ಕೂ ಲಿವೋಫ್ಲೋಕ್ಸಾಸಿನ್, ಸೆಫಿಕ್ಸಿಮ್‌ನಂತಹ ಪ್ರಬಲ ಆಂಟಿಬಯೋಟಿಕ್‌ಗಳನ್ನು ಬಳಸುವ ಪ್ರವೃತ್ತಿ ಆತಂಕಕಾರಿ ಎಂದು ಹೇಳಿದರು.

ವೈದ್ಯರ ಸಲಹೆಯಿಲ್ಲದೆ ಔಷಧಿ ವಿತರಿಸುವ ಮೆಡಿಕಲ್ ಸ್ಟೋರ್‌ಗಳ ವಿರುದ್ಧ ಹಾಗೂ ಅಡ್ಡ ವೈದ್ಯ ಪದ್ಧತಿಯಲ್ಲಿ ಆಂಟಿಬಯೋಟಿಕ್ ಬಳಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು. ಅಗತ್ಯವಿದ್ದಲ್ಲಿ ಬ್ಲಡ್ ಕಲ್ಚರ್ ಸೇರಿದಂತೆ ಸೂಕ್ತ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಿ, ಬ್ಯಾಕ್ಟೀರಿಯಾ ಸೋಂಕು ದೃಢಪಟ್ಟ ನಂತರವೇ ಚಿಕಿತ್ಸಾ ಮಾರ್ಗಸೂಚಿಗಳಂತೆ ಔಷಧಿಗಳನ್ನು ನೀಡಬೇಕು. ಇಂದಿನ ನಿರ್ಲಕ್ಷ್ಯ ಮುಂದಿನ ಪೀಳಿಗೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅವರು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಎಂಆರ್ ರಾಜ್ಯ ನೋಡಲ್ ಅಧಿಕಾರಿ ಡಾ. ಚಂದ್ರಮೋಹನ್ ಮಾತನಾಡಿ, ಆಂಟಿಮೈಕ್ರೋಬಿಯಲ್ ಪ್ರತಿರೋಧವು ಭವಿಷ್ಯದ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಸವಾಲಾಗಿದೆ ಎಂದರು. ಶೀತ, ಕೆಮ್ಮು ಹಾಗೂ ವೈರಲ್ ಜ್ವರಗಳಿಗೆ ಅನಗತ್ಯವಾಗಿ ಆಂಟಿಬಯೋಟಿಕ್ ಬಳಸುವುದನ್ನು ತಡೆಯಬೇಕು, ಆಸ್ಪತ್ರೆಗಳಲ್ಲಿ ಕೈಗಳ ಸ್ವಚ್ಛತೆ ಮತ್ತು ಸೋಂಕು ನಿಯಂತ್ರಣ ಕ್ರಮಗಳನ್ನು ನಿರಂತರವಾಗಿ ಪಾಲಿಸಬೇಕು ಎಂದು ಹೇಳಿದರು.

ಆಂಟಿಬಯೋಟಿಕ್‌ಗಳ ಬಳಕೆಯಲ್ಲಿ ಆಕ್ಸೆಸ್ (Access), ವಾಚ್ (Watch) ಮತ್ತು ರಿಸರ್ವ್ (Reserve) ವರ್ಗೀಕರಣವನ್ನು ಅನುಸರಿಸಬೇಕು ಎಂದ ಅವರು, ಸಾಮಾನ್ಯ ಸೋಂಕುಗಳಿಗೆ ಆಕ್ಸೆಸ್ ವರ್ಗದ ಔಷಧಿಗಳಿಗೆ ಆದ್ಯತೆ ನೀಡಬೇಕು, ವಾಚ್ ವರ್ಗದ ಔಷಧಿಗಳನ್ನು ಎಚ್ಚರಿಕೆಯಿಂದ ಬಳಸಬೇಕು ಮತ್ತು ರಿಸರ್ವ್ ವರ್ಗದ ಪ್ರಬಲ ಔಷಧಿಗಳನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು ಎಂದರು. ಎಎಂಆರ್ ನಿಯಂತ್ರಣಕ್ಕೆ ಮಾನವ ಆರೋಗ್ಯದ ಜೊತೆಗೆ ಪ್ರಾಣಿಸಂಗೋಪನೆ, ಕೃಷಿ ಹಾಗೂ ಮೀನುಗಾರಿಕೆ ಕ್ಷೇತ್ರಗಳಲ್ಲೂ ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆಯನ್ನು ತಡೆಯಬೇಕು; ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯವನ್ನು ಸಮಗ್ರವಾಗಿ ಪರಿಗಣಿಸುವ ‘ಒನ್ ಹೆಲ್ತ್’ ಪರಿಕಲ್ಪನೆಯಡಿ ಎಲ್ಲ ಕ್ಷೇತ್ರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಎಎಂಆರ್ ಜಿಲ್ಲಾ ನೋಡಲ್ ಅಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಆಂಟಿಮೈಕ್ರೋಬಿಯಲ್ ಪ್ರತಿರೋಧದಿಂದ ಉಂಟಾಗುತ್ತಿರುವ ಸಾವುಗಳು ಆತಂಕಕಾರಿಯಾಗಿದ್ದು, ಮುಂದಿನ 10 ವರ್ಷಗಳಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ ಎಂದರು. ವೈದ್ಯಾಧಿಕಾರಿಗಳು ಲಭ್ಯವಿರುವ ಆಂಟಿಬಯೋಟಿಕ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜವಾಬ್ದಾರಿಯುತ ಚಿಕಿತ್ಸಾ ಪದ್ಧತಿಯನ್ನು ಅನುಸರಿಸಬೇಕು ಎಂದು ತಿಳಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ಸಾರ್ವಜನಿಕ ಆರೋಗ್ಯ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲು ಮಹಾನಗರ ಕಣ್ಗಾವಲು ಘಟಕ ಮತ್ತು ಸೆಂಟ್ರಲ್ ಲ್ಯಾಬ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ; ಐಸಿಎಂಆರ್, ಟಾಟಾ 1ಎಂಜಿ ಹಾಗೂ ಇತರ ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಕೈಗೊಂಡಿರುವ ಪ್ರಾಯೋಗಿಕ ಯೋಜನೆಗಳ ಯಶಸ್ಸಿಗೆ ವೈದ್ಯಾಧಿಕಾರಿಗಳ ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಕಣ್ಗಾವಲು ಘಟಕದ ಮೈಕ್ರೋಬಯಾಲಜಿಸ್ಟ್ ಡಾ. ಚಂದ್ರಶೇಖರ್ ಬಿ., ಎಂಎಸ್‌ಯು ಸಹಾಯಕ ಕಾರ್ಯಕ್ರಮ ಅಧಿಕಾರಿ ಡಾ. ಸವಿತಾ, ಪಾತ್ (PATH) ಸಂಸ್ಥೆಯ ಹಿರಿಯ ಸಲಹೆಗಾರ ಡಾ. ಸಚಿನ್ ಗುಪ್ತೆ ಹಾಗೂ ಎಎಂಆರ್ ತಾಂತ್ರಿಕ ಅಧಿಕಾರಿ ನಚಿಕೇತು ಗುಡಿ ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ವಿಧಾನಸೌಧದಲ್ಲಿ ಇಂದಿರಾ ಗಾಂಧಿಗೆ ಪುಷ್ಪನಮನ, ರಾಷ್ಟ್ರೀಯ ಐಕ್ಯತಾ ಸಪ್ತಾಹದ ಪ್ರತಿಜ್ಞಾ ವಿಧಿ ಬೋಧಿಸಿದ ಡಿಸಿಎಂ ಪರಮೇಶ್ವರ

Related Stories

ಸಮಿತಿ ಕೊಠಡಿಯ ಉದ್ದನೆಯ ಮೇಜಿನ ಸುತ್ತ ನಿಂತು ಪ್ರತಿಜ್ಞೆ ಸ್ವೀಕರಿಸುತ್ತಿರುವ ಸಚಿವರು ಮತ್ತು ಅಧಿಕಾರಿಗಳು
  • ಕರ್ನಾಟಕ

ವಿಧಾನಸೌಧದಲ್ಲಿ ಇಂದಿರಾ ಗಾಂಧಿಗೆ ಪುಷ್ಪನಮನ, ರಾಷ್ಟ್ರೀಯ ಐಕ್ಯತಾ ಸಪ್ತಾಹದ ಪ್ರತಿಜ್ಞಾ ವಿಧಿ ಬೋಧಿಸಿದ ಡಿಸಿಎಂ ಪರಮೇಶ್ವರ

The Bengaluru Live November 19, 2026 2:34 PM
ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿಯ ಕಮಾನು ಪ್ರವೇಶ ದ್ವಾರ
  • ಕರ್ನಾಟಕ

ಹೊಸಕೋಟೆ ತಾಲ್ಲೂಕು ಉಪಖಜಾನೆಯಲ್ಲಿ ₹13,000 ಲಂಚ ಪ್ರಕರಣ: ಲೋಕಾಯುಕ್ತ ಬಲೆ; ಆರೋಪಿ ಪರಾರಿ

The Bengaluru Live November 19, 2026 12:08 PM
ಪ್ರಜಾ ಸೇವಾ ಫಲಕದೊಂದಿಗೆ ವಿಶ್ವನಾಥಪುರದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಸಭೆಯ ವೇದಿಕೆ
  • ಕರ್ನಾಟಕ

ಜಿಬಿಎ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ವಲಯ, ಉಪವಿಭಾಗ ಮಟ್ಟದಲ್ಲಿ ‘ಪ್ರಜಾ ಸೇವಾ ಅಭಿಯಾನ ಜನಸಭೆ’

The Bengaluru Live November 19, 2026 11:07 AM

Latest Post

ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ತಡೆಗೆ ವೈದ್ಯರು ಮುಂದಾಗಲಿ: ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ; ಶೇ.60-70ರಷ್ಟು ವೈರಲ್ ಸೋಂಕು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವೈದ್ಯಾಧಿಕಾರಿಗಳ ಸಾಮರ್ಥ್ಯ ವರ್ಧನೆ ಕಾರ್ಯಕ್ರಮದ ಫಲಕದ ಮುಂದೆ ಬೆಳಗಿದ ದೀಪದ ಸುತ್ತ ನಿಂತಿರುವ ಎಂಟು ಮಂದಿ
  • ಕರ್ನಾಟಕ

ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ತಡೆಗೆ ವೈದ್ಯರು ಮುಂದಾಗಲಿ: ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ; ಶೇ.60-70ರಷ್ಟು ವೈರಲ್ ಸೋಂಕು

November 19, 2026 2:37 PM
ವಿಧಾನಸೌಧದಲ್ಲಿ ಇಂದಿರಾ ಗಾಂಧಿಗೆ ಪುಷ್ಪನಮನ, ರಾಷ್ಟ್ರೀಯ ಐಕ್ಯತಾ ಸಪ್ತಾಹದ ಪ್ರತಿಜ್ಞಾ ವಿಧಿ ಬೋಧಿಸಿದ ಡಿಸಿಎಂ ಪರಮೇಶ್ವರ ಸಮಿತಿ ಕೊಠಡಿಯ ಉದ್ದನೆಯ ಮೇಜಿನ ಸುತ್ತ ನಿಂತು ಪ್ರತಿಜ್ಞೆ ಸ್ವೀಕರಿಸುತ್ತಿರುವ ಸಚಿವರು ಮತ್ತು ಅಧಿಕಾರಿಗಳು
  • ಕರ್ನಾಟಕ

ವಿಧಾನಸೌಧದಲ್ಲಿ ಇಂದಿರಾ ಗಾಂಧಿಗೆ ಪುಷ್ಪನಮನ, ರಾಷ್ಟ್ರೀಯ ಐಕ್ಯತಾ ಸಪ್ತಾಹದ ಪ್ರತಿಜ್ಞಾ ವಿಧಿ ಬೋಧಿಸಿದ ಡಿಸಿಎಂ ಪರಮೇಶ್ವರ

November 19, 2026 2:34 PM
ಹೊಸಕೋಟೆ ತಾಲ್ಲೂಕು ಉಪಖಜಾನೆಯಲ್ಲಿ ₹13,000 ಲಂಚ ಪ್ರಕರಣ: ಲೋಕಾಯುಕ್ತ ಬಲೆ; ಆರೋಪಿ ಪರಾರಿ ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿಯ ಕಮಾನು ಪ್ರವೇಶ ದ್ವಾರ
  • ಕರ್ನಾಟಕ

ಹೊಸಕೋಟೆ ತಾಲ್ಲೂಕು ಉಪಖಜಾನೆಯಲ್ಲಿ ₹13,000 ಲಂಚ ಪ್ರಕರಣ: ಲೋಕಾಯುಕ್ತ ಬಲೆ; ಆರೋಪಿ ಪರಾರಿ

November 19, 2026 12:08 PM
ಜಿಬಿಎ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ವಲಯ, ಉಪವಿಭಾಗ ಮಟ್ಟದಲ್ಲಿ ‘ಪ್ರಜಾ ಸೇವಾ ಅಭಿಯಾನ ಜನಸಭೆ’ ಪ್ರಜಾ ಸೇವಾ ಫಲಕದೊಂದಿಗೆ ವಿಶ್ವನಾಥಪುರದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಸಭೆಯ ವೇದಿಕೆ
  • ಕರ್ನಾಟಕ

ಜಿಬಿಎ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ವಲಯ, ಉಪವಿಭಾಗ ಮಟ್ಟದಲ್ಲಿ ‘ಪ್ರಜಾ ಸೇವಾ ಅಭಿಯಾನ ಜನಸಭೆ’

November 19, 2026 11:07 AM
ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಿಗೆ ಇನ್ನು ‘ಪ್ರಜಾ ಸೇವಾ ಕೇಂದ್ರ’ ಎಂದು ಮರುನಾಮಕರಣ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಂದ ದಾಖಲೆ ಸ್ವೀಕರಿಸುತ್ತಿರುವ ಫಲಾನುಭವಿ
  • ಕರ್ನಾಟಕ

ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಿಗೆ ಇನ್ನು ‘ಪ್ರಜಾ ಸೇವಾ ಕೇಂದ್ರ’ ಎಂದು ಮರುನಾಮಕರಣ

November 19, 2026 11:06 AM
ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಮೈಸೂರಿನ ಹೋಟೆಲ್‌ನ ಸಭಾಂಗಣದಲ್ಲಿ ಯು ಆಕಾರದ ಮೇಜಿನ ಸುತ್ತ ಕುಳಿತಿರುವ ಸಚಿವರು, ಶಾಸಕರು ಮತ್ತು ಅಧಿಕಾರಿಗಳು
  • ಕರ್ನಾಟಕ
  • ಮೈಸೂರು

ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ

November 18, 2026 10:10 PM

ನೀವು ತಪ್ಪಿಸಿಕೊಂಡಿರಬಹುದು

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವೈದ್ಯಾಧಿಕಾರಿಗಳ ಸಾಮರ್ಥ್ಯ ವರ್ಧನೆ ಕಾರ್ಯಕ್ರಮದ ಫಲಕದ ಮುಂದೆ ಬೆಳಗಿದ ದೀಪದ ಸುತ್ತ ನಿಂತಿರುವ ಎಂಟು ಮಂದಿ
  • ಕರ್ನಾಟಕ

ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ತಡೆಗೆ ವೈದ್ಯರು ಮುಂದಾಗಲಿ: ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ; ಶೇ.60-70ರಷ್ಟು ವೈರಲ್ ಸೋಂಕು

The Bengaluru Live November 19, 2026 2:37 PM
ಸಮಿತಿ ಕೊಠಡಿಯ ಉದ್ದನೆಯ ಮೇಜಿನ ಸುತ್ತ ನಿಂತು ಪ್ರತಿಜ್ಞೆ ಸ್ವೀಕರಿಸುತ್ತಿರುವ ಸಚಿವರು ಮತ್ತು ಅಧಿಕಾರಿಗಳು
  • ಕರ್ನಾಟಕ

ವಿಧಾನಸೌಧದಲ್ಲಿ ಇಂದಿರಾ ಗಾಂಧಿಗೆ ಪುಷ್ಪನಮನ, ರಾಷ್ಟ್ರೀಯ ಐಕ್ಯತಾ ಸಪ್ತಾಹದ ಪ್ರತಿಜ್ಞಾ ವಿಧಿ ಬೋಧಿಸಿದ ಡಿಸಿಎಂ ಪರಮೇಶ್ವರ

The Bengaluru Live November 19, 2026 2:34 PM
ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿಯ ಕಮಾನು ಪ್ರವೇಶ ದ್ವಾರ
  • ಕರ್ನಾಟಕ

ಹೊಸಕೋಟೆ ತಾಲ್ಲೂಕು ಉಪಖಜಾನೆಯಲ್ಲಿ ₹13,000 ಲಂಚ ಪ್ರಕರಣ: ಲೋಕಾಯುಕ್ತ ಬಲೆ; ಆರೋಪಿ ಪರಾರಿ

The Bengaluru Live November 19, 2026 12:08 PM
ಪ್ರಜಾ ಸೇವಾ ಫಲಕದೊಂದಿಗೆ ವಿಶ್ವನಾಥಪುರದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಸಭೆಯ ವೇದಿಕೆ
  • ಕರ್ನಾಟಕ

ಜಿಬಿಎ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ವಲಯ, ಉಪವಿಭಾಗ ಮಟ್ಟದಲ್ಲಿ ‘ಪ್ರಜಾ ಸೇವಾ ಅಭಿಯಾನ ಜನಸಭೆ’

The Bengaluru Live November 19, 2026 11:07 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ತಡೆಗೆ ವೈದ್ಯರು ಮುಂದಾಗಲಿ: ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ; ಶೇ.60-70ರಷ್ಟು ವೈರಲ್ ಸೋಂಕು
  • ವಿಧಾನಸೌಧದಲ್ಲಿ ಇಂದಿರಾ ಗಾಂಧಿಗೆ ಪುಷ್ಪನಮನ, ರಾಷ್ಟ್ರೀಯ ಐಕ್ಯತಾ ಸಪ್ತಾಹದ ಪ್ರತಿಜ್ಞಾ ವಿಧಿ ಬೋಧಿಸಿದ ಡಿಸಿಎಂ ಪರಮೇಶ್ವರ
  • ಹೊಸಕೋಟೆ ತಾಲ್ಲೂಕು ಉಪಖಜಾನೆಯಲ್ಲಿ ₹13,000 ಲಂಚ ಪ್ರಕರಣ: ಲೋಕಾಯುಕ್ತ ಬಲೆ; ಆರೋಪಿ ಪರಾರಿ
  • ಜಿಬಿಎ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ವಲಯ, ಉಪವಿಭಾಗ ಮಟ್ಟದಲ್ಲಿ ‘ಪ್ರಜಾ ಸೇವಾ ಅಭಿಯಾನ ಜನಸಭೆ’
©Copyright 2025 The Bengaluru Live All rights reserved. | MoreNews by AF themes.