Home ಬೆಂಗಳೂರು ನಗರ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ; ಸರ್ಕಾರದ ಸಾಧನೆ, ಯೋಜನೆಗಳ ಅನಾವರಣ

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ; ಸರ್ಕಾರದ ಸಾಧನೆ, ಯೋಜನೆಗಳ ಅನಾವರಣ

55
0

ಬೆಂಗಳೂರು:

ಇಂದಿನಿಂದ ಆರಂಭಗೊಂಡ ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರ ವಜುಬಾಯಿ ವಾಲಾ ಭಾಷಣ ಮಾಡಿದರು.

ರಾಜ್ಯ ಸರ್ಕಾರ 17,863 ಕೊಟಿ ರೂ.ಗಳನ್ನು ಪರಿಶಿಷ್ಟ ಜಾತಿ ಹಾಗೂ 7754 ಕೊಟಿ ರೂ.ಗಳನ್ನು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ನೀಡಿದೆ. ವಿವಿಧ ನಿಗಮಗಳ ಮೂಲಕ 15837 ಜನರಿಗೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಭೂ ಒಡೆತನ ಯೋಜನೆಯಡಿಯಲ್ಲಿ 3061 ಎಕರೆ ಭೂಮಿಯನ್ನು ಖರೀದಿಸಿ ಫಲಾನುಭವಿಗಳಿಗೆ ನೀಡಲಾಗಿದೆ. ಬೋಧನೆಯ ಗುಣಮಟ್ಟವನ್ನು ಉತ್ತಮಗೊಳಿಸಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳಿಗೆ ಹೊಸದಾಗಿ 1021 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.

BSY with Vaju Bhai vala1

ಕರ್ನಾಟಕ ನಾವೀನ್ಯತೆ ಪ್ರಾಧಿಕಾರವನ್ನು ರಚಿಸಿದೆ. ನಾವೀನ್ಯತೆಯನ್ನು ಸಂಯೋಜಿಸಲು, ಹೂಡಿಕೆಗಳನ್ನು ಉತ್ತೇಜಿಸಲು, ಕಾರ್ಯತಂತ್ರ ರೂಪಿಸಲು ಬ್ರಾಂಡಿಂಗ್ ಅನ್ನು ಹೆಚ್ಚಿಸಲು ಹಾಗೂ ಜಾಗತಿಕ ನಾವೀನ್ಯತೆ ಸಹಕಾರತ್ವವನ್ನು ಹೆಚ್ಚಿಸಲು ಹಾಗೂ ಪ್ರಸ್ತಾವಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕರ್ನಾಟಕ ಡಿಜಿಟಲ್ ಹಣಕಾಸು ಮಿಷನ್ ರೂಪಿಸಲಾಗಿದೆ. ಬೆಂಗಳೂರಿನ ಹೊರಗೆ ಮಾಹಿತಿ ತಂತ್ರಜ್ಞಾನವನ್ನು ಉತ್ತೇಜಿಸುವುದಕ್ಕಾಗಿ ವಿಶೇಷ ಗಮನ ಕೇಂದ್ರೀಕರಿಸುವುದರೊಂದಿಗೆ ಹೊಸ ಮಾಹಿತಿ ತಂತ್ರಜ್ಞಾನ ನೀತಿ-2020-25 ಅನ್ನು ಘೋಷಿಸಿದೆ ಎಂದು ತಿಳಿಸಿದರು.

53,295 ಕೋ.ರೂ. ಹೂಡಿಕೆಯೊಂದಿಗೆ 1.54 ಉದ್ಯೋಗ ಸೃಜಿಸುವ 366 ಯೋಜನೆಗಳಿಗೆ ಅನುಮೋದನೆ

ಹೊಸ ಮರಳು ನೀತಿ -2020 ಅನ್ನು ರೂಪಿಸಿದ , ಇದರಲ್ಲಿ ಹಳ್ಳ , ಕೆರೆ , ಸರೋವರಗಳಲ್ಲಿ ದೊರೆಯುವ ಮರಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉತ್ತಮ ಮೇಲ್ವಿಚಾರಣೆಗಾಗಿ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಅಧಿನಿಯಮ , 2011 ಕ್ಕೆ ತಿದ್ದುಪಡಿ ಮಾಡಲಾಗಿದೆ.

WhatsApp Image 2021 01 28 at 12.55.24

ಸಾರಿಗೆ ಇಲಾಖೆಯು 4 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೆಸ್ಕಾಂ ಮೂಲಕ ಬೆಂಗಳೂರಿನಲ್ಲಿ 126 ಎಸಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ. ಕರ್ನಾಟಕ ರಸ್ತೆ ಸಾರಿಗೆ ನಿಗಮವು ತೀರ ಬಸ್ಸುಗಳನ್ನು “ ಶೌಚಾಲಯ ಎಂಬ ಹೆಸರಿನ ಸುಸಜ್ಜಿತ ಮಹಿಳಾ ಶೌಚಾಲಯವಾಗಿ ಪರಿವರ್ತಿಸಿದ . ಈ ಉಪಕ್ರಮವು ” Economic Times Global Smart City ” ಪ್ರಶಸ್ತಿಯನ್ನು ಪಡೆದಿದೆ. ಹೊಸ ಪ್ರವಾಸೋದ್ಯಮ ನೀತಿ , 2020-25 ಅನ್ನು ರೂಪಿಸಿದೆ ಎಂದು ತಿಳಿಸಿದರು.

ಹೊಸ ಕೈಗಾರಿಕಾ ನೀತಿ 2020-25 ಅನ್ನು ಜಾರಿಗೆ ತಂದಿದೆ. ಪ್ರತಿ ವರ್ಷ ಶೇಕಡ 10 ರಷ್ಟು ಕೈಗಾರಿಕಾ ಬೆಳವಣಿಗೆ ದರವನ್ನು ನಿರ್ವಹಿಸುವುದರೊಂದಿಗೆ , 5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸುವ , 20 ಲಕ್ಷ ಉದ್ಯೋಗಾವಕಾಶಗಳನ್ನು ಸೃಜಿಸುವ , ಹಾಗೂ ತಂತ್ರಜ್ಞಾನವನ್ನು ಅಳವಡಿಕೆಗಾಗಿ ಮತ್ತು ಅವಿಷ್ಕಾರಕ್ಕಾಗಿ ಪರಿಸರ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಗುರಿಗಳನ್ನು ಹೊಂದಿರುತ್ತದೆ. ಈ ವರ್ಷದಲ್ಲಿ ರಾಜ್ಯ 53295 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ 1.54 ಉದ್ಯೋಗವನ್ನು ಸೃಜಿಸುವ 366 ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದರು. (UNI)

LEAVE A REPLY

Please enter your comment!
Please enter your name here