Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ರಾಜಕೀಯ
  • ಸುಳ್ಳಿಗೆ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ: ಸಿಎಂ ಡಿ.ಕೆ. ಶಿವಕುಮಾರ್; ಹಾಸನದ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲಕ್ಕೆ ಮನವಿ
  • ರಾಜಕೀಯ

ಸುಳ್ಳಿಗೆ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ: ಸಿಎಂ ಡಿ.ಕೆ. ಶಿವಕುಮಾರ್; ಹಾಸನದ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲಕ್ಕೆ ಮನವಿ

The Bengaluru Live November 8, 2026 11:10 PM 1 minute read
ಹಾಸನದ ಹಾಸನಾಂಬೆ ದೇವಾಲಯದಲ್ಲಿ ಪತ್ನಿ ಉಷಾ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಹಾಸನದ ಹಾಸನಾಂಬೆ ದೇವಾಲಯದಲ್ಲಿ ಪತ್ನಿ ಉಷಾ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಚಿತ್ರ: ಒದಗಿಸಿದ್ದು

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಹಾಸನ: “ಕೆಲವರಿಗೆ ಸುಳ್ಳೇ ಮನೆದೇವರಾಗಿದೆ. ಅವರು ಹೇಳುವ ಸುಳ್ಳುಗಳಿಗೆ ತಾಯಿ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ. ಯಾರಿಗೆ ಏನು ಶಕ್ತಿ ನೀಡಬೇಕು, ಯಾರಿಗೆ ಏನು ಶಿಕ್ಷೆ ನೀಡಬೇಕು ಎಂಬುದನ್ನು ಆ ತಾಯಿ ನೋಡಿಕೊಳ್ಳುತ್ತಾಳೆ. ಯಾರೂ ಅನಗತ್ಯವಾಗಿ ಚಿಂತೆಗೀಡಾಗದೆ ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಹೇಳಿದರು. ಹಾಸನದ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಜಿಲ್ಲೆಯ ಜನರಲ್ಲಿ ಅವರು ಮನವಿ ಮಾಡಿದರು.

ಹಾಸನದ ನಗರಸಭೆ ಪಾರ್ಕಿಂಗ್ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಹಾಸನಾಂಬ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದಕ್ಕೂ ಮೊದಲು ಹಾಸನಾಂಬ ದೇವಾಲಯದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಹಾಸನಾಂಬೆ ಸನ್ನಿಧಿಯಲ್ಲಿ ನಿಂತು ಜಿಲ್ಲೆಯ ಜನರಲ್ಲಿ ಮನವಿ ಮಾಡುತ್ತಿದ್ದೇನೆ. ಹಾಸನದ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಬೆಂಬಲ ನೀಡಿ, ನಮಗೆ ಇನ್ನಷ್ಟು ಶಕ್ತಿ ತುಂಬಿ. ಇಡೀ ದೇಶವೇ ಕರ್ನಾಟಕದ ಆಡಳಿತವನ್ನು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತೇನೆ” ಎಂದರು.

“ಧರ್ಮ ಎಂದರೆ ಕೇವಲ ಪೂಜೆ, ಭಕ್ತಿಯ ಪ್ರದರ್ಶನವಲ್ಲ. ಅದು ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುವ ಮಾರ್ಗ. ಭಕ್ತರು ದೇವಾಲಯದಲ್ಲಿ ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸುತ್ತಾರೆ. ಆದರೆ ಜನರ ಸಂಕಷ್ಟಕ್ಕೆ ನೆರವಾಗುವುದೇ ನಿಜವಾದ ಶ್ರೇಷ್ಠ ಧರ್ಮ. ನಿಮಗಾಗಿ ಬದುಕುವುದು ಜೀವನವಾದರೆ, ಜನರಿಗಾಗಿ ಬದುಕುವುದು ಶ್ರೇಷ್ಠ ಧರ್ಮ. ‘ನಾನು, ನನ್ನದು’ ಎನ್ನುವುದು ಅಧರ್ಮ; ‘ನಾವು, ನಮ್ಮದು’ ಎನ್ನುವುದು ಧರ್ಮ” ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, “ನಮ್ಮ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ. ಮಹಿಳೆಯರನ್ನು ಕುಟುಂಬದ ಕಣ್ಣು ಎಂದು ಪರಿಗಣಿಸಿ ಗೃಹಲಕ್ಷ್ಮಿ ಯೋಜನೆಯಡಿ 1.20 ಕೋಟಿ ಕುಟುಂಬಗಳ ಯಜಮಾನಿಯರಿಗೆ ಆರ್ಥಿಕ ನೆರವು ನೀಡುತ್ತಿದ್ದೇವೆ. ಎರಡು ದಿನಗಳ ಹಿಂದೆ 7 ಸಾವಿರ ಕೋಟಿ ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ” ಎಂದರು. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಮತ್ತು ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. “ಕಷ್ಟದ ಸಂದರ್ಭದಲ್ಲೂ ಜನರಿಗೆ ನೆರವಾಗುವ ಕೆಲಸ ಮಾಡುತ್ತಿದ್ದೇವೆ” ಎಂದರು.

ಕುಸ್ತಿ, ವಾಲಿಬಾಲ್ ಸೇರಿದಂತೆ ವಿವಿಧ ಸ್ಪರ್ಧೆಗಳು ಕ್ರೀಡೋತ್ಸವದಲ್ಲಿವೆ. ನೇಪಾಳದ ಕುಸ್ತಿಪಟುಗಳು ಹಾಗೂ ತಮಿಳುನಾಡು, ಕೇರಳದ ವಾಲಿಬಾಲ್ ತಂಡಗಳು ಭಾಗವಹಿಸಿರುವುದನ್ನು ಗಮನಿಸಿದ್ದೇನೆ ಎಂದ ಅವರು, “ಚಿಕ್ಕ ವಯಸ್ಸಿನಲ್ಲಿ ನಾನೂ ವಾಲಿಬಾಲ್ ಆಡುತ್ತಿದ್ದೆ. ನಾನು ಕುಸ್ತಿ ಆಡಿಲ್ಲ. ಆದರೆ ಈಗ ರಾಜಕೀಯದಲ್ಲಿ ಪ್ರತಿದಿನ ಕುಸ್ತಿ ಆಡುತ್ತಿದ್ದೇವೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.

ದೇವಾಲಯದ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ಹಾಸನಾಂಬೆ ದೇವಸ್ಥಾನಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಅವರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂದರು. ದೇವಸ್ಥಾನದ ಸುತ್ತಮುತ್ತ ಜಾಗದ ಕೊರತೆಯಿದ್ದು, ಭಕ್ತರ ಪ್ರವೇಶಕ್ಕೆ ಅನುಕೂಲವಾಗುವಂತೆ ರಾಜಗೋಪುರ ನಿರ್ಮಾಣ ಮಾಡಬೇಕೆಂಬ ಬೇಡಿಕೆಯೂ ಇದೆ. “ಈ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ಧಿಗೆ 20 ಕೋಟಿ ರೂಪಾಯಿ ಅನುದಾನ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ” ಎಂದು ತಿಳಿಸಿದರು.

“ದೇವಸ್ಥಾನಕ್ಕೆ ಹಿಂದೆ ಸುಮಾರು ಏಳು ಎಕರೆ ಜಾಗವಿತ್ತು. ಈಗ ಸುತ್ತಮುತ್ತ ಕಟ್ಟಡಗಳು ನಿರ್ಮಾಣವಾಗಿವೆ. ಭಕ್ತರಿಗೆ ಅನುಕೂಲ ಕಲ್ಪಿಸಲು ಅಗತ್ಯ ಜಾಗದ ಲಭ್ಯತೆ ಪರಿಶೀಲಿಸಬೇಕಿದೆ. ಕಟ್ಟಡ ಮಾಲೀಕರನ್ನು ಕರೆದು ಮಾತನಾಡಿ, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಗುವುದು. 2013ರ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡುವ ವಿಚಾರವನ್ನೂ ಪರಿಶೀಲಿಸಬೇಕಿದೆ. ಯಾರಿಗೂ ತೊಂದರೆ ಕೊಡದೆ ಭಕ್ತರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಉದ್ದೇಶ” ಎಂದರು.

ಹಾಸನಾಂಬೆ ವಿಶೇಷ ದರ್ಶನ ಹಾಗೂ ಲಡ್ಡು ಮಾರಾಟದಿಂದ ಸುಮಾರು 25 ಕೋಟಿ ರೂಪಾಯಿ ಆದಾಯ ಬಂದಿರುವ ಕುರಿತು ಕೇಳಿದ ಪ್ರಶ್ನೆಗೆ, “ಎಲ್ಲ ಹಣವನ್ನೂ ಇಲ್ಲಿನ ಅಭಿವೃದ್ಧಿಗೆ ಹಾಕೋಣ” ಎಂದು ಅವರು ಪ್ರತಿಕ್ರಿಯಿಸಿದರು.

“ಕಳೆದ ವರ್ಷ ಉಪಮುಖ್ಯಮಂತ್ರಿಯಾಗಿ ಬಂದಿದ್ದೆ. ಈಗ ಮುಖ್ಯಮಂತ್ರಿ ಎಂಬುದಕ್ಕಿಂತ ಮುಖ್ಯವಾಗಿ ಒಬ್ಬ ಭಕ್ತನಾಗಿ ಬಂದಿದ್ದೇನೆ. ಸುಮಾರು ಎಂಟು ವರ್ಷಗಳಿಂದ ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದೇನೆ. ಈ ದೇವಿಯಲ್ಲಿ ವಿಶೇಷವಾದ ಆಕರ್ಷಣೆಯ ಶಕ್ತಿ ಇದೆ” ಎಂದರು.

ಹಾಸನ ಜಿಲ್ಲಾಡಳಿತದ ಕುರಿತು ಮಾತನಾಡಿದ ಅವರು, “ಜಿಲ್ಲಾಧಿಕಾರಿಯವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಎಲ್ಲರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದಾಗ ಅವರ ಮೇಲೆ ಒತ್ತಡ ಬರುತ್ತದೆ. ಆಡಳಿತದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ. ಜನರೂ ಗಮನಿಸುತ್ತಿದ್ದಾರೆ. ಯಾರ ಬಗ್ಗೆಯೂ ಚಿಂತಿಸದೆ ನ್ಯಾಯ, ನೀತಿ ಮತ್ತು ಧರ್ಮದ ಹಾದಿಯಲ್ಲಿ ಆಡಳಿತ ನಡೆಸುತ್ತೇವೆ” ಎಂದರು. “ಸಂಸದ ಶ್ರೇಯಸ್ ಪಟೇಲ್ ಅವರು ಸಂಸತ್‌ನಲ್ಲಿ ರಾಜ್ಯದ ಜನರ ಪರವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲೂ ಜನರಿಗಾಗಿ ಶ್ರಮಿಸುತ್ತಿದ್ದಾರೆ. ಅವರೊಂದಿಗೆ ಸಚಿವ ಶಿವಲಿಂಗೇಗೌಡರು ಹಾಗೂ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಜನರ ಆಶೀರ್ವಾದವಿರಲಿ” ಎಂದು ಪ್ರಾರ್ಥಿಸಿದರು.

ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಬೇಕಿಲ್ಲ, ಅವರ ಸಹಕಾರವಷ್ಟೇ ಸಾಕು ಎಂದು ಮುಖ್ಯಮಂತ್ರಿ ಹೇಳಿದರು. ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ವಿರೋಧ ವ್ಯಕ್ತಪಡಿಸಿ ಪ್ರಧಾನಮಂತ್ರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಮೇಕೆದಾಟು ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ ಎಂಬುದನ್ನು ಅಲ್ಲಿನವರಿಗೆ ಇನ್ನೂ ಅರ್ಥವಾಗಿಲ್ಲ. ಯೋಜನೆಗೆ ತಮಿಳುನಾಡಿನ ಅನುಮತಿ ಬೇಕಿಲ್ಲ, ಅವರ ಸಹಕಾರವಷ್ಟೇ ಬೇಕು” ಎಂದರು.

“ಅವರವರ ರಾಜ್ಯದ ಹಿತದೃಷ್ಟಿಯಿಂದ ಅವರು ಮಾತನಾಡುತ್ತಾರೆ. ಆದರೆ ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನು ಅವರು ಅರ್ಥಮಾಡಿಕೊಳ್ಳಬೇಕು. ತಮಿಳುನಾಡಿನವರು ಒಮ್ಮೆ ಮೇಕೆದಾಟು ಸ್ಥಳಕ್ಕೆ ಬಂದು ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿ. ನನ್ನ ಕ್ಷೇತ್ರ ಹಾಗೂ ಹನೂರು ಕ್ಷೇತ್ರದ ಗಡಿಯಲ್ಲೇ ಈ ಯೋಜನೆಯ ಸ್ಥಳವಿದೆ. ಬೆಂಗಳೂರಿನ ಕುಡಿಯುವ ನೀರಿಗಾಗಿ ನೀರನ್ನು ಬಳಸಿಕೊಳ್ಳಲಾಗುವುದು. ಬೇರೆ ಯಾವುದೇ ಉದ್ದೇಶಕ್ಕೆ ನೀರು ಬಳಸಲು ಸಾಧ್ಯವಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳಬೇಕು” ಎಂದು ಹೇಳಿದರು.

ಮೇಕೆದಾಟು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕದ ಹಕ್ಕನ್ನು ಎತ್ತಿಹಿಡಿಯಲಾಗಿದೆ ಎಂದ ಅವರು, “ತಾವು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದೆವು. ಮೂವರು ನ್ಯಾಯಮೂರ್ತಿಗಳ ಪೀಠ ಆದೇಶ ನೀಡಿದೆ. ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನೂ ತಿರಸ್ಕರಿಸಲಾಗಿದೆ” ಎಂದು ತಿಳಿಸಿದರು. “ತಮಿಳುನಾಡಿಗೆ 177 ಟಿಎಂಸಿ ನೀರು ನೀಡಬೇಕೆಂಬ ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ. ತಮಿಳುನಾಡಿಗೆ ನೀಡಬೇಕಾದ ನೀರಿನ ಹಕ್ಕನ್ನು ನಾವು ನಿರಾಕರಿಸುತ್ತಿಲ್ಲ” ಎಂದರು.

“ಯೋಜನೆಯಿಂದ ಸುಮಾರು 400 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಸುಮಾರು 5,400 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಪರ್ಯಾಯ ಭೂಮಿ ಒದಗಿಸುವ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಅಗತ್ಯ ಅರ್ಜಿಗಳನ್ನು ಸಲ್ಲಿಸಿ, ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಯೋಜನೆಗೆ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು. ಕೇಂದ್ರದ ಜಲಶಕ್ತಿ ಸಚಿವರೊಂದಿಗೆ ಈಗಾಗಲೇ ಹಲವು ಬಾರಿ ಚರ್ಚಿಸಲಾಗಿದೆ. ರಾಜ್ಯದ ಕೇಂದ್ರ ಸಚಿವರು, ಸಂಸದರು ಕೂಡ ಸಹಕಾರ ನೀಡುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದರು.

ಇನ್ನಷ್ಟು ಸಂಬಂಧಿತ ಸುದ್ದಿಗಳನ್ನು ಓದಿ:

  • ಕುಮಾರಸ್ವಾಮಿ ಲಂಚ ಆರೋಪ ಸುಳ್ಳು ಎಂದ ಹಾಸನ ಡಿಸಿ ಲತಾಕುಮಾರಿ; ವಾಟ್ಸಾಪ್ ಚಾಟ್ ಕುರಿತು ತನಿಖೆಗೆ ಆಗ್ರಹ

About the Author

The Bengaluru Live

Administrator

Visit Website View All Posts

Post navigation

Previous: ಬೆಂಗಳೂರು ವಿಮಾನ ನಿಲ್ದಾಣದ ಉದ್ಯೋಗ: ಕನ್ನಡಿಗರೇ ಬಹುಸಂಖ್ಯೆಯ ಸಿಬ್ಬಂದಿ, ಸ್ಥಳೀಯ ಉದ್ಯೋಗದ ಆತಂಕಗಳ ಅರಿವಿದೆ ಎಂದ ಬಿಐಎಎಲ್
Next: ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು: ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ; ಪ್ರಿಯಾಂಕ್ ಖರ್ಗೆ ಮೇಲೆ ಎಫ್‌ಐಆರ್‌ಗೆ ಮುನಿಸ್ವಾಮಿ ಆಗ್ರಹ

Related Stories

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಮೆಯ ಮುಂದೆ ಕೇಸರಿ ಶಲ್ಯ ಧರಿಸಿ ಫಲಕಗಳೊಂದಿಗೆ ಘೋಷಣೆ ಕೂಗುತ್ತಿರುವ ಬಿಜೆಪಿ ಕಾರ್ಯಕರ್ತರು
  • ರಾಜಕೀಯ
  • ಬೆಂಗಳೂರು

ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು: ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ; ಪ್ರಿಯಾಂಕ್ ಖರ್ಗೆ ಮೇಲೆ ಎಫ್‌ಐಆರ್‌ಗೆ ಮುನಿಸ್ವಾಮಿ ಆಗ್ರಹ

The Bengaluru Live November 8, 2026 11:20 PM
ಎತ್ತರದ ಚಾವಣಿ ಮತ್ತು ನುಣುಪಾದ ನೆಲವಿರುವ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ವಿಶಾಲ ಒಳಾಂಗಣ
  • ರಾಜಕೀಯ
  • ಬೆಂಗಳೂರು

ಬೆಂಗಳೂರು ವಿಮಾನ ನಿಲ್ದಾಣದ ಉದ್ಯೋಗ: ಕನ್ನಡಿಗರೇ ಬಹುಸಂಖ್ಯೆಯ ಸಿಬ್ಬಂದಿ, ಸ್ಥಳೀಯ ಉದ್ಯೋಗದ ಆತಂಕಗಳ ಅರಿವಿದೆ ಎಂದ ಬಿಐಎಎಲ್

The Bengaluru Live November 8, 2026 7:38 PM
ಕೇಸರಿ ಬಿಜೆಪಿ ಶಾಲು ಹಾಕಿಕೊಂಡು ಕೆನೆ ಬಣ್ಣದ ತೋಳುಕುರ್ಚಿಯಲ್ಲಿ ಕುಳಿತು ಪತ್ರಗಳನ್ನು ಹಿಡಿದು ಕೈಸನ್ನೆ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
  • ರಾಜಕೀಯ
  • ಬೆಂಗಳೂರು

ಹಾಲು, ತುಪ್ಪ, ಬಸ್ ದರ ಏರಿಕೆ ವಿರುದ್ಧ ನವೆಂಬರ್ 11ರಂದು ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ

The Bengaluru Live November 8, 2026 6:20 PM

Latest Post

ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು: ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ; ಪ್ರಿಯಾಂಕ್ ಖರ್ಗೆ ಮೇಲೆ ಎಫ್‌ಐಆರ್‌ಗೆ ಮುನಿಸ್ವಾಮಿ ಆಗ್ರಹ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಮೆಯ ಮುಂದೆ ಕೇಸರಿ ಶಲ್ಯ ಧರಿಸಿ ಫಲಕಗಳೊಂದಿಗೆ ಘೋಷಣೆ ಕೂಗುತ್ತಿರುವ ಬಿಜೆಪಿ ಕಾರ್ಯಕರ್ತರು
  • ರಾಜಕೀಯ
  • ಬೆಂಗಳೂರು

ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು: ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ; ಪ್ರಿಯಾಂಕ್ ಖರ್ಗೆ ಮೇಲೆ ಎಫ್‌ಐಆರ್‌ಗೆ ಮುನಿಸ್ವಾಮಿ ಆಗ್ರಹ

November 8, 2026 11:20 PM
ಸುಳ್ಳಿಗೆ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ: ಸಿಎಂ ಡಿ.ಕೆ. ಶಿವಕುಮಾರ್; ಹಾಸನದ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲಕ್ಕೆ ಮನವಿ ಹಾಸನದ ಹಾಸನಾಂಬೆ ದೇವಾಲಯದಲ್ಲಿ ಪತ್ನಿ ಉಷಾ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ರಾಜಕೀಯ

ಸುಳ್ಳಿಗೆ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ: ಸಿಎಂ ಡಿ.ಕೆ. ಶಿವಕುಮಾರ್; ಹಾಸನದ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲಕ್ಕೆ ಮನವಿ

November 8, 2026 11:10 PM
ಬೆಂಗಳೂರು ವಿಮಾನ ನಿಲ್ದಾಣದ ಉದ್ಯೋಗ: ಕನ್ನಡಿಗರೇ ಬಹುಸಂಖ್ಯೆಯ ಸಿಬ್ಬಂದಿ, ಸ್ಥಳೀಯ ಉದ್ಯೋಗದ ಆತಂಕಗಳ ಅರಿವಿದೆ ಎಂದ ಬಿಐಎಎಲ್ ಎತ್ತರದ ಚಾವಣಿ ಮತ್ತು ನುಣುಪಾದ ನೆಲವಿರುವ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ವಿಶಾಲ ಒಳಾಂಗಣ
  • ರಾಜಕೀಯ
  • ಬೆಂಗಳೂರು

ಬೆಂಗಳೂರು ವಿಮಾನ ನಿಲ್ದಾಣದ ಉದ್ಯೋಗ: ಕನ್ನಡಿಗರೇ ಬಹುಸಂಖ್ಯೆಯ ಸಿಬ್ಬಂದಿ, ಸ್ಥಳೀಯ ಉದ್ಯೋಗದ ಆತಂಕಗಳ ಅರಿವಿದೆ ಎಂದ ಬಿಐಎಎಲ್

November 8, 2026 7:38 PM
ಹಾಲು, ತುಪ್ಪ, ಬಸ್ ದರ ಏರಿಕೆ ವಿರುದ್ಧ ನವೆಂಬರ್ 11ರಂದು ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ ಕೇಸರಿ ಬಿಜೆಪಿ ಶಾಲು ಹಾಕಿಕೊಂಡು ಕೆನೆ ಬಣ್ಣದ ತೋಳುಕುರ್ಚಿಯಲ್ಲಿ ಕುಳಿತು ಪತ್ರಗಳನ್ನು ಹಿಡಿದು ಕೈಸನ್ನೆ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
  • ರಾಜಕೀಯ
  • ಬೆಂಗಳೂರು

ಹಾಲು, ತುಪ್ಪ, ಬಸ್ ದರ ಏರಿಕೆ ವಿರುದ್ಧ ನವೆಂಬರ್ 11ರಂದು ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ

November 8, 2026 6:20 PM
ಕುಮಾರಸ್ವಾಮಿ ಲಂಚ ಆರೋಪ ಸುಳ್ಳು ಎಂದ ಹಾಸನ ಡಿಸಿ ಲತಾಕುಮಾರಿ; ವಾಟ್ಸಾಪ್ ಚಾಟ್ ಕುರಿತು ತನಿಖೆಗೆ ಆಗ್ರಹ ಹಾಸನ ಫಲಕದ ಮುಂದೆ ಗುಲಾಬಿ ಮತ್ತು ಹಳದಿ ಚೌಕಳಿ ಸೀರೆಯಲ್ಲಿ ಕೈಗಳನ್ನು ಜೋಡಿಸಿ ಮಾತನಾಡುತ್ತಿರುವ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ
  • ರಾಜಕೀಯ
  • ಬೆಂಗಳೂರು

ಕುಮಾರಸ್ವಾಮಿ ಲಂಚ ಆರೋಪ ಸುಳ್ಳು ಎಂದ ಹಾಸನ ಡಿಸಿ ಲತಾಕುಮಾರಿ; ವಾಟ್ಸಾಪ್ ಚಾಟ್ ಕುರಿತು ತನಿಖೆಗೆ ಆಗ್ರಹ

November 8, 2026 6:11 PM
ಇ-ಖಾತಾ ಮೇಳ: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಒಂದೇ ದಿನ 254 ಹೊಸ ಅರ್ಜಿ ಸ್ವೀಕೃತಿ, 93 ವಿಲೇವಾರಿ ಇ-ಖಾತಾ ಮೇಳದ ವೇಳೆ ಜೆ.ಪಿ. ನಗರದ ಕಚೇರಿಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿರುವ ಲ್ಯಾಪ್‌ಟಾಪ್ ಪರದೆಯನ್ನು ಮೂವರು ಅಧಿಕಾರಿಗಳು ನೋಡುತ್ತಿರುವುದು
  • ಬೆಂಗಳೂರು ನಗರ
  • ಬೆಂಗಳೂರು

ಇ-ಖಾತಾ ಮೇಳ: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಒಂದೇ ದಿನ 254 ಹೊಸ ಅರ್ಜಿ ಸ್ವೀಕೃತಿ, 93 ವಿಲೇವಾರಿ

November 8, 2026 5:49 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಮೆಯ ಮುಂದೆ ಕೇಸರಿ ಶಲ್ಯ ಧರಿಸಿ ಫಲಕಗಳೊಂದಿಗೆ ಘೋಷಣೆ ಕೂಗುತ್ತಿರುವ ಬಿಜೆಪಿ ಕಾರ್ಯಕರ್ತರು
  • ರಾಜಕೀಯ
  • ಬೆಂಗಳೂರು

ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು: ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ; ಪ್ರಿಯಾಂಕ್ ಖರ್ಗೆ ಮೇಲೆ ಎಫ್‌ಐಆರ್‌ಗೆ ಮುನಿಸ್ವಾಮಿ ಆಗ್ರಹ

The Bengaluru Live November 8, 2026 11:20 PM
ಹಾಸನದ ಹಾಸನಾಂಬೆ ದೇವಾಲಯದಲ್ಲಿ ಪತ್ನಿ ಉಷಾ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ರಾಜಕೀಯ

ಸುಳ್ಳಿಗೆ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ: ಸಿಎಂ ಡಿ.ಕೆ. ಶಿವಕುಮಾರ್; ಹಾಸನದ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲಕ್ಕೆ ಮನವಿ

The Bengaluru Live November 8, 2026 11:10 PM
ಎತ್ತರದ ಚಾವಣಿ ಮತ್ತು ನುಣುಪಾದ ನೆಲವಿರುವ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ವಿಶಾಲ ಒಳಾಂಗಣ
  • ರಾಜಕೀಯ
  • ಬೆಂಗಳೂರು

ಬೆಂಗಳೂರು ವಿಮಾನ ನಿಲ್ದಾಣದ ಉದ್ಯೋಗ: ಕನ್ನಡಿಗರೇ ಬಹುಸಂಖ್ಯೆಯ ಸಿಬ್ಬಂದಿ, ಸ್ಥಳೀಯ ಉದ್ಯೋಗದ ಆತಂಕಗಳ ಅರಿವಿದೆ ಎಂದ ಬಿಐಎಎಲ್

The Bengaluru Live November 8, 2026 7:38 PM
ಕೇಸರಿ ಬಿಜೆಪಿ ಶಾಲು ಹಾಕಿಕೊಂಡು ಕೆನೆ ಬಣ್ಣದ ತೋಳುಕುರ್ಚಿಯಲ್ಲಿ ಕುಳಿತು ಪತ್ರಗಳನ್ನು ಹಿಡಿದು ಕೈಸನ್ನೆ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
  • ರಾಜಕೀಯ
  • ಬೆಂಗಳೂರು

ಹಾಲು, ತುಪ್ಪ, ಬಸ್ ದರ ಏರಿಕೆ ವಿರುದ್ಧ ನವೆಂಬರ್ 11ರಂದು ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ

The Bengaluru Live November 8, 2026 6:20 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು: ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ; ಪ್ರಿಯಾಂಕ್ ಖರ್ಗೆ ಮೇಲೆ ಎಫ್‌ಐಆರ್‌ಗೆ ಮುನಿಸ್ವಾಮಿ ಆಗ್ರಹ
  • ಸುಳ್ಳಿಗೆ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ: ಸಿಎಂ ಡಿ.ಕೆ. ಶಿವಕುಮಾರ್; ಹಾಸನದ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲಕ್ಕೆ ಮನವಿ
  • ಬೆಂಗಳೂರು ವಿಮಾನ ನಿಲ್ದಾಣದ ಉದ್ಯೋಗ: ಕನ್ನಡಿಗರೇ ಬಹುಸಂಖ್ಯೆಯ ಸಿಬ್ಬಂದಿ, ಸ್ಥಳೀಯ ಉದ್ಯೋಗದ ಆತಂಕಗಳ ಅರಿವಿದೆ ಎಂದ ಬಿಐಎಎಲ್
  • ಹಾಲು, ತುಪ್ಪ, ಬಸ್ ದರ ಏರಿಕೆ ವಿರುದ್ಧ ನವೆಂಬರ್ 11ರಂದು ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ
©Copyright 2025 The Bengaluru Live All rights reserved. | MoreNews by AF themes.