Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • Hemavati Express Canal Project| ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ವಿರೋಧ: ಶಾಸಕ ಡಾ. ಹೆಚ್.ಡಿ ರಂಗನಾಥ್
  • ತುಮಕೂರು
  • ಕರ್ನಾಟಕ
  • ಬೆಂಗಳೂರು ನಗರ

Hemavati Express Canal Project| ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ವಿರೋಧ: ಶಾಸಕ ಡಾ. ಹೆಚ್.ಡಿ ರಂಗನಾಥ್

Hemavati Express Canal Project | Opposition to Hemavati Link Canal Project to maintain political existence: MLA Dr. H.D. Ranganath
The Bengaluru Live June 3, 2025 9:59 PM 1 minute read
Hemavati Express Canal Project | Opposition to Hemavati Link Canal Project to maintain political existence: MLA Dr. H.D. Ranganath

Hemavati Express Canal Project| ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ವಿರೋಧ: ಶಾಸಕ ಡಾ. ಹೆಚ್.ಡಿ ರಂಗನಾಥ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಯೋಜನೆಯಿಂದ ಯಾರಿಗೂ ಅನ್ಯಾಯವಾಗಲ್ಲ

ಕುಣಿಗಲ್ ತಾಲೂಕು ತುಮಕೂರಿನ ಭಾಗವಲ್ಲವೇ?

ಯೋಜನೆ ಕುರಿತು ರೈತರು, ಸ್ವಾಮೀಜಿಗಳಿಗೆ ಸ್ಪಷ್ಟನೆ ನೀಡಲು ಸಿದ್ಧ

ಬೆಂಗಳೂರು, ಜೂ.03: “ಕುಣಿಗಲ್ ತಾಲೂಕು ಪಾಲಿನ ಹೇಮಾವತಿ ನೀರನ್ನು ಕೊಂಡೊಯ್ಯಲು ಲಿಂಕ್ ಕೆನಾಲ್ ಯೋಜನೆ ರೂಪಿಸಲಾಗಿದೆ. ಇದರಿಂದ ಬೇರೆ ತಾಲೂಕುಗಳಿಗೆ ಅನ್ಯಾಯ ಆಗುವುದಿಲ್ಲ. ಕೆಲವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜನರನ್ನು ದಾರಿತಪ್ಪಿಸಿ, ಯೋಜನೆಗೆ ವಿರೋಧ ಮಾಡುತ್ತಿದ್ದಾರೆ” ಎಂದು ಕುಣಿಗಲ್ ಶಾಸಕ ಹೆಚ್.ಡಿ. ರಂಗನಾಥ್ ಅವರು ತಿಳಿಸಿದ್ದಾರೆ.

ಬಸವೇಶ್ವರನಗರ ನಿವಾಸದಲ್ಲಿ ಶಾಸಕ ರಂಗನಾಥ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು.

“ತುಮಕೂರಿನ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿಚಾರವಾಗಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಕುಣಿಗಲ್ ಕ್ಷೇತ್ರದ ಶಾಸಕನಾಗಿ ತುಮಕೂರು ಜಿಲ್ಲೆಯ ಮಗನಾಗಿ ಜಿಲ್ಲೆ ರೈತರ ಹಿತಕಾಯುವುದು ನನ್ನ ಜವಾಬ್ದಾರಿ. ಹಾಸನದಿಂದ ತುಮಕೂರಿಗೆ ಹೇಮಾವತಿ ನೀರು ತರುವಲ್ಲಿ ವೈ.ಕೆ.ರಾಮಯ್ಯ, ಹುಚ್ಚಮಾಸ್ತೀಗೌಡ ಅವರ ಪಾತ್ರ ಬಹಳ ದೊಡ್ಡದಿದೆ” ಎಂದು ತಿಳಿಸಿದರು.

“ಕುಣಿಗಲ್ ತಾಲೂಕಿಗೆ ನೀರು ಪೂರೈಸಲು ತುಮಕೂರು ವಿಭಾಗ ಕಾಲುವೆ ಮಾಡಲಾಯಿತು. ಆನಂತರ ಜಿಲ್ಲೆಯ ಇತರೆ ತಾಲೂಕುಗಳ ಜತೆ ಸಹೋದರ ಭಾವನೆ ಮೇಲೆ ನೀರು ಹಂಚಿಕೊಳ್ಳಲಾಯಿತು. ಗುಬ್ಬಿ, ತುರುವೇಕೆರೆ, ಸಿರಾ, ಚಿಕ್ಕನಾಯಕನ ಹಳ್ಳಿ, ಕೊರಟಗೆರೆ, ತುಮಕೂರು ಗ್ರಾಮಾಂತರ ತಾಲೂಕಿನ ಜನರಿಗೆ ಕುಡಿಯುವ ನೀರು ಹಂಚಿಕೊಳ್ಳಲಾಗುತ್ತಿದೆ. ತುಮಕೂರು ಬ್ರಾಂಚ್ ಕೆನಾಲ್ ಆದ ನಂತರ 47 ಏತ ನೀರಾವರಿ ಯೋಜನೆಗಳು ಬಂದಿವೆ. ಈ ಯೋಜನೆಗಳಿಗೆ ತುಮಕೂರಿನ ಯಾವುದೇ ರೈತರಾಗಲಿ, ಮುಖಂಡರಾಗಲಿ ವಿರೋಧ ವ್ಯಕ್ತಪಡಿಸಿಲ್ಲ” ಎಂದರು.

“ಬಿಜೆಪಿ ಸರ್ಕಾರ ನೀಡಿದ ಅಂಕಿ-ಅಂಶಗಳ ಪ್ರಕಾರವೇ ಕುಣಿಗಲ್ ತಾಲೂಕಿಗೆ ಸರಿಯಾಗಿ ನೀರು ಪೂರೈಕೆಯಾಗಿಲ್ಲ. ಕುಣಿಗಲ್ ತಾಲೂಕಿಗೆ ನಿಗದಿಯಾಗಿರುವುದು 3000 mcft ನೀರು. ಆದರೆ ಕಳೆದ 10 ವರ್ಷಗಳಲ್ಲಿ ಬಂದಿರುವ ಒಟ್ಟಾರೆ ನೀರಿನ ಪ್ರಮಾಣ 300-5೦0 mcft ಮಾತ್ರ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ 9 ಕೋಟಿ ವೆಚ್ಚದಲ್ಲಿ ಕಾಲುವೆ ಹೂಳೆತ್ತಲಾಯಿತು. ನಂತರವಷ್ಟೇ ಈ ನೀರು ಹರಿದಿದೆ” ಎಂದು ಹೇಳಿದರು.

“ಈ ಕಾಲುವೆ ಆಧುನೀಕರಣ ಮಾಡಿ, ಅಗಲೀಕರಣ ಮಾಡಿ ಎಂದು ಹೇಳುತ್ತಾರೆ. ಈಗಾಗಲೇ ಈ ಕಾಲುವೆಯನ್ನು ಅಗಲೀಕರಣ ಮಾಡಲಾಗಿದೆ. ಆದರೂ 500 mcft ಗೂ ಹೆಚ್ಚಿನ ನೀರು ಪಡೆಯಲು ಆಗುತ್ತಿಲ್ಲ. ಈ ಲಿಂಕ್ ಕೆನಾಲ್ ನಿಂದ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆ ಮೂಲಕ ರೈತರನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.

“ಈ ಯೋಜನೆಯಲ್ಲಿ 170 ಕಿ.ಮೀ ನೀರು ಹರಿಯುವ ಮಾರ್ಗದಲ್ಲಿ 100 ಗೇಟ್ ಗಳಿವೆ. ನಮಗೆ ಪ್ರತಿ ವರ್ಷ 15 ದಿನ ನೀರು ನೀಡಲು ಪ್ರಯತ್ನಿಸುತ್ತಾರೆ. ಗುಬ್ಬಿ, ತುರುವೇಕೆರೆ, ಸಿಎಸ್ ಪುರ, ಗ್ರಾಮಾಂತರ, ಸಿರಾ, ತುಮಕೂರು ನಗರದವರು ಕ್ರಮವಾಗಿ ತಮಗೆ ಬೇಕಾದ ನೀರು ಪಡೆಯುತ್ತಾರೆ. ಆನಂತರ ನಮಗೆ ನೀರು ಬಿಡುವಾಗ ರಾತ್ರಿ ವೇಳೆ ಅನಧಿಕೃತವಾಗಿ 50 ಸಾವಿರ ಪಂಪ್ ಸೆಟ್ಗಳ ಮೂಲಕ ನೀರು ಎತ್ತುತ್ತಿದ್ದಾರೆ. ಹೀಗಾಗಿ ಕುಣಿಗಲ್ ಗೆ ಸರಿಯಾಗಿ ನೀರು ಹರಿಯುತ್ತಿಲ್ಲ” ಎಂದರು.

“ನಮ್ಮ ಕುಣಿಗಲ್ ತಾಲೂಕು ತುಮಕೂರು ಜಿಲ್ಲೆಗೆ ಸೇರಿದೆಯೇ, ಇಲ್ಲವೇ? ನಾವು ನಿಮ್ಮ ಸಹೋದರರಲ್ಲವೇ?ನಮ್ಮ ರೈತರು ನಿಮ್ಮಂತೆ ಬದುಕಬಾರದೇ? ಎಂಬ ಪ್ರಶ್ನೆಯನ್ನು ತುಮಕೂರಿನ ರೈತರು ಹಾಗೂ ಸಂಘಟನೆ ನಾಯಕರಿಗೆ ಕೇಳುತ್ತೇನೆ. ನಮಗೆ ನೀರು ಕೊಡಲು ಇಷ್ಟವಿಲ್ಲದಿದ್ದರೆ ಅದನ್ನು ನೇರವಾಗಿ ಹೇಳಿ. ಮುಂದೆ ನೀರು ಕೊಡುತ್ತೇವೆ ಎಂದು ಹೇಳಿ ಆನಂತರ ಅಡ್ಡಿ ಮಾಡುವುದು ಬೇಡ. ಇದೇ ಸುರೇಶ್ ಗೌಡರು ರಾತ್ರೋರಾತ್ರಿ ಇಡಗೂರು ಗೇಟ್ ಅನ್ನು ಎಷ್ಟು ಬಾರಿ ಹೊಡೆದು ಹಾಕಿಲ್ಲ. ರಾತ್ರಿವೇಳೆ ಅವರೇ ಮುಂದೆನಿಂತು ಹೊಡೆಸಿ, ಬೆಳಿಗ್ಗೆ ಗೊತ್ತಾಗಲಿಲ್ಲ, ಇದನ್ನು ಮುಚ್ಚಿ ಎನ್ನುತ್ತಾರೆ. ಇಂತಹವರು 200 ಕಿ.ಮೀ ಉದ್ದ ನೀರು ಹರಿಯುವುದನ್ನು ಕಾಯುತ್ತಾರಂತೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಹೀಗಾಗಿ ತೆರೆದ ಕಾಲುವೆಗಿಂತ ನಮ್ಮ ಪಾಲಿನ ನೀರನ್ನು ಪೈಪ್ ಲೈನ್ ಮೂಲಕ ರಾಂಪುರ ಗೇಟ್ ನಿಂದ ಗುಬ್ಬಿ ಹಾಗೂ ಕುಣಿಗಲ್ ತಾಲೂಕು ಗಡಿವರೆಗೆ 34 ಕಿ.ಮೀ ತೆಗೆದುಕೊಂಡು ಹೋಗಲಾಗುತ್ತಿದೆ. ಆದರೆ ಇವರು ಪೈಪ್ ಲೈನ್ ಅನ್ನು ರಾಮನಗರಕ್ಕೆ ಕೊಂಡೊಯ್ಯುತ್ತಾರೆ ಎಂದು ಸುಳ್ಳು ಹೇಳುತ್ತಿದ್ದಾರೆ” ಎಂದರು.

“ಈ ಯೋಜನೆ ಕೇವಲ ಕುಣಿಗಲ್ ತಾಲೂಕಿನ ಜನರಿಗೆ ಮಾತ್ರ. ಅದೂ 3000mcft ನೀರನ್ನು ಮಾತ್ರ ತೆಗೆದುಕೊಂಡು ಹೋಗಲಾಗುತ್ತದೆ. ತುಮಕೂರು ಜಿಲ್ಲೆಗೆ 24.5 ಟಿಎಂಸಿ ನೀರು ಬರಬೇಕಾಗಿದ್ದು, ಇದನ್ನು ಪಡೆಯಲು ಕೆಲವೊಮ್ಮೆ ಹೋರಾಟ ಮಾಡಬೇಕಿದೆ. ಸುರೇಶ್ ಗೌಡ, ಕೃಷ್ಣಪ್ಪ ಅವರು ಈ ವಿಚಾರವಾಗಿ ಹೋರಾಟ ಮಾಡಲಿ. ತುಮಕೂರಿನ ಇತರೆ ತಾಲೂಕು ನೀರು ಪಡೆದ ನಂತರ ನಾನು ನನ್ನ ತಾಲೂಕಿಗೆ ನೀರನ್ನು ತೆಗೆದುಕೊಂಡು ಹೋಗುತ್ತೇನೆ. ಇದರಲ್ಲಿ ತಪ್ಪೇನಿದೆ” ಎಂದು ಪ್ರಶ್ನಿಸಿದರು.

“ನಾವು ಈ ಕಾಲುವೆಯಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಈಗಿರುವ ಆಧುನಿಕ ತಂತ್ರಜ್ಞಾನದ ಸ್ಕಾಡಾ ಗೇಟ್ ಗಳನ್ನು ಅಳವಡಿಸಲಾಗುವುದು. ಈ ಕಾಲುವೆ ಮೂಲಕ ಎಷ್ಟು ನೀರು ತೆಗೆದುಕೊಂಡು ಹೋಗಲಾಗಿದೆ ಎಂಬುದರ ಬಗ್ಗೆ ಅಂಕಿ ಅಂಶಗಳನ್ನು ಯಾವುದೇ ರೈತರು, ಮುಖಂಡರಿಗೆ ಬೇಕಾದರೂ ನೀಡಲು ಸಿದ್ಧ” ಎಂದರು.

“ತುಮಕೂರಿನ ಗುಬ್ಬಿ, ತುರುವೇಕೆರೆ, ಗ್ರಾಮಾಂತರ, ಕುಣಿಗಲ್ ಕಾವೇರಿ ನದಿ ಪಾತ್ರಕ್ಕೆ ಸೇರಿವೆ. ವೈ.ಕೆ.ರಾಮಯ್ಯ, ಹುಚ್ಚಮಾಸ್ತೀಗೌಡರು ತುಮಕೂರು ಬ್ರಾಂಚ್ ಕೆನಾಲ್ ಅನ್ನು ಮಾಡಿಸಿದ್ದು ಕುಣಿಗಲ್ ತಾಲೂಕಿಗಾಗಿಯೇ. ಆದರೆ ಬೇರೆ ತಾಲೂಕಿನವರು ಕುಡಿಯಲು ನೀರು ಕೇಳಿದಾಗ ಕುಣಿಗಲ್ ತಾಲೂಕಿನ ಜನ ವಿರೋಧ ಮಾಡದೆ ಔದಾರ್ಯ ತೋರಿದರು. ಕಾವೇರಿ ಪಾತ್ರದಿಂದ ಕೃಷ್ಣಾ ಪಾತ್ರಕ್ಕೆ ನೀರು ತೆಗೆದುಕೊಂಡು ಹೋಗುವಾಗ ಯಾರೂ ಧ್ವನಿ ಎತ್ತಲಿಲ್ಲ? ಅದು ಕುಣಿಗಲ್ ತಾಲೂಕಿನ ದೊಡ್ಡತನ” ಎಂದು ತಿಳಿಸಿದರು.

“ಈ ಯೋಜನೆಗೆ ವಿರೋಧ ಮಾಡುತ್ತಿರುವುದು ನೀರಿಗಾಗಿ ಅಲ್ಲ, ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು. ಇನ್ನು ಈ ಯೋಜನೆ ವಿಚಾರವಾಗಿ ಅನುಮಾನ ಇದ್ದರೆ ಎಲ್ಲಿಗೆ ಕರೆದರೂ ನಾನು ಹೋಗಿ ಸ್ಪಷ್ಟನೆ ನೀಡುತ್ತೇನೆ. ರಾಜಕೀಯ ನಾಯಕರ ಪ್ರಚೋದನೆಗೆ ರೈತರು ಒಳಗಾಗಬಾರದು. ನಿಮ್ಮ ಪ್ರಶ್ನೆ ಏನೇ ಇದ್ದರೂ ನಾನು ಉತ್ತರಿಸುತ್ತೇನೆ. ಎಲ್ಲಾ ತಾಲೂಕಿಗೆ ನಿಗದಿಯಾಗಿರುವ ನೀರನ್ನು ಕೊಡಿಸಲು ನಮ್ಮ ಸರ್ಕಾರ ಬದ್ಧವಿದೆ. ಅದೇರೀತಿ ಕುಣಿಗಲ್ ತಾಲೂಕಿಗೆ ನ್ಯಾಯ ಒದಗಿಸಿಕೊಡುವ ಕೆಲಸ ನಾನು ಮಾಡಿಯೇ ಮಾಡುತ್ತೇನೆ” ಎಂದರು.

“ನಾನು ಪ್ರೀತಿಗೆ ತಲೆಬಾಗುತ್ತೇನೆ ಹೊರತು ಗೊಡ್ಡು ಬೆದರಿಕೆಗಳಿಗಲ್ಲ. ಸುರೇಶ್ ಗೌಡ, ಕೃಷ್ಣಪ್ಪ, ಜ್ಯೋತಿ ಗಣೇಶ್ ಅವರ ಒತ್ತಾಯದ ಮೇರೆಗೆ ತಾಂತ್ರಿಕ ಸಮಿತಿ ರಚಿಸಲಿಲ್ಲವೇ? ಆ ತಾಂತ್ರಿಕ ಸಮಿತಿ ವರದಿ ಮೇಲೆ ಈ ಯೋಜನೆ ಮಾಡುತ್ತಿರುವುದಲ್ಲವೇ? ನಮ್ಮ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿ, ಪರಮೇಶ್ವರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಒಂದೇ ಒಂದು ತಾಲೂಕಿಗೂ ಅನ್ಯಾಯವಾಗಲು ಬಿಡುವುದಿಲ್ಲ” ಎಂದರು.

“ತುಮಕೂರು ಜಿಲ್ಲೆ ಒಂದು ಕುಟುಂಬ ಇದ್ದಂತೆ. ರೈತರ ಹಿತ ಕಾಯುವುದು ನಮ್ಮ ಜವಾಬ್ದಾರಿಯಾಗಿದೆ. ಮೊನ್ನೆ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳ ಮಠಕ್ಕೆ ಹೋಗುತ್ತೇನೆ. ಈ ವಿಚಾರವನ್ನು ವಿವರಿಸುತ್ತೇನೆ” ಎಂದು ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: Hemavati Express Canal Project: ಹೇಮಾವತಿ ಲಿಂಕ್ ಕಾಲುವೆ ಯೋಜನೆ ಪ್ರತಿಭಟನೆಗೆ ಸಂಬಂಧಿಸಿದಂತೆ 11 ಎಫ್‌ಐಆರ್‌ ದಾಖಲ
Next: Almatti Dam: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಚರ್ಚಿಸಲು ಪ್ರಧಾನಮಂತ್ರಿ ಭೇಟಿಗೆ ಸಮಯ ಕೇಳುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

Related Stories

ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮೈಕ್‌ಗಳಿರುವ ಮೇಜಿನ ಬಳಿ ಕುಳಿತಿರುವ ಹಿರಿಯ ಅಧಿಕಾರಿಗಳು
  • ಕರ್ನಾಟಕ

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ

The Bengaluru Live November 23, 2026 5:59 PM
ವಿಧಾನಸೌಧದ ಸಂವಾದ ಸಭೆಯಲ್ಲಿ ಸಭಾ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು ಮತ್ತು ಭೇಟಿ ನೀಡಿದ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ
  • ಕರ್ನಾಟಕ

ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ

The Bengaluru Live November 23, 2026 5:37 PM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 24 ಮತ್ತು 25ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

The Bengaluru Live November 23, 2026 5:34 PM

Latest Post

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮೈಕ್‌ಗಳಿರುವ ಮೇಜಿನ ಬಳಿ ಕುಳಿತಿರುವ ಹಿರಿಯ ಅಧಿಕಾರಿಗಳು
  • ಕರ್ನಾಟಕ

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ

November 23, 2026 5:59 PM
ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ ವಿಧಾನಸೌಧದ ಸಂವಾದ ಸಭೆಯಲ್ಲಿ ಸಭಾ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು ಮತ್ತು ಭೇಟಿ ನೀಡಿದ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ
  • ಕರ್ನಾಟಕ

ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ

November 23, 2026 5:37 PM
ನವೆಂಬರ್ 24 ಮತ್ತು 25ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 24 ಮತ್ತು 25ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

November 23, 2026 5:34 PM
ನವೆಂಬರ್ 25ರಂದು ಹೆಣ್ಣೂರು, ಹೊರಮಾವು, ಹೊಯ್ಸಳ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 25ರಂದು ಹೆಣ್ಣೂರು, ಹೊರಮಾವು, ಹೊಯ್ಸಳ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ

November 23, 2026 5:28 PM
ನವೆಂಬರ್ 24ರಂದು ವಿಲ್ಸನ್ ಗಾರ್ಡನ್, ಶಾಂತಿನಗರ, ರಿಚ್‌ಮಂಡ್ ಸರ್ಕಲ್ ಸುತ್ತಮುತ್ತ ವಿದ್ಯುತ್ ಕಡಿತ ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 24ರಂದು ವಿಲ್ಸನ್ ಗಾರ್ಡನ್, ಶಾಂತಿನಗರ, ರಿಚ್‌ಮಂಡ್ ಸರ್ಕಲ್ ಸುತ್ತಮುತ್ತ ವಿದ್ಯುತ್ ಕಡಿತ

November 23, 2026 5:28 PM
ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ನಗರದಾದ್ಯಂತ 200ಕ್ಕೂ ಹೆಚ್ಚು ಕಾರ್ಯಕ್ರಮ, ಸುಮಾರು ₹20 ಕೋಟಿ ವೆಚ್ಚ: ಕೃಷ್ಣ ಬೈರೇಗೌಡ ಮೈಕ್‌ಗಳಿರುವ ಮೇಜಿನ ಬಳಿ ಅಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ನಗರದಾದ್ಯಂತ 200ಕ್ಕೂ ಹೆಚ್ಚು ಕಾರ್ಯಕ್ರಮ, ಸುಮಾರು ₹20 ಕೋಟಿ ವೆಚ್ಚ: ಕೃಷ್ಣ ಬೈರೇಗೌಡ

November 23, 2026 5:25 PM

ನೀವು ತಪ್ಪಿಸಿಕೊಂಡಿರಬಹುದು

ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮೈಕ್‌ಗಳಿರುವ ಮೇಜಿನ ಬಳಿ ಕುಳಿತಿರುವ ಹಿರಿಯ ಅಧಿಕಾರಿಗಳು
  • ಕರ್ನಾಟಕ

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ

The Bengaluru Live November 23, 2026 5:59 PM
ವಿಧಾನಸೌಧದ ಸಂವಾದ ಸಭೆಯಲ್ಲಿ ಸಭಾ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು ಮತ್ತು ಭೇಟಿ ನೀಡಿದ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ
  • ಕರ್ನಾಟಕ

ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ

The Bengaluru Live November 23, 2026 5:37 PM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 24 ಮತ್ತು 25ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

The Bengaluru Live November 23, 2026 5:34 PM
ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 25ರಂದು ಹೆಣ್ಣೂರು, ಹೊರಮಾವು, ಹೊಯ್ಸಳ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ

The Bengaluru Live November 23, 2026 5:28 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ
  • ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ
  • ನವೆಂಬರ್ 24 ಮತ್ತು 25ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ
  • ನವೆಂಬರ್ 25ರಂದು ಹೆಣ್ಣೂರು, ಹೊರಮಾವು, ಹೊಯ್ಸಳ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ
©Copyright 2025 The Bengaluru Live All rights reserved. | MoreNews by AF themes.