‘ಎಲ್ಲರ ಮನೆ ದೋಸೆನೂ ತೂತೇ, ನಾನು ಒಂದು ಬಾರಿ ತಪ್ಪು ಮಾಡಿ ಒಪ್ಪಿಕೊಂಡಿದ್ದೇನೆ’
ಬೆಂಗಳೂರು:
ಹರಿಶ್ಚಂದ್ರ ಯಾರು ಅನ್ನೋದು ಚರ್ಚೆ ಮಾಡಿದ್ರೆ, ಇಲ್ಲಿ ಇರೋ ಎಲ್ಲರ ಮನೆಯ ದೋಸೆಯೂ ತೂತೇ ಎಂದಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಜೀವನದಲ್ಲಿ ನಾನು ಒಂದು ಬಾರಿ ತಪ್ಪು ಮಾಡಿದ್ದೇನೆ. ಅದನ್ನು ನಾನು ಧೈರ್ಯವಾಗಿ ಹೇಳಿದ್ದೇನೆ, ಎಂದರು.
ಬಜೆಟ್ ಮೇಲಿನ ಅಧಿವೇಶನದಲ್ಲಿ ರಮೇಶ್ ಜಾರಕಿಹೊಳಿ ಅಶ್ಲೀಲ ಸಿ.ಡಿ ಬಹಿರಂಗ ಪ್ರಕರಣದ ಚರ್ಚೆ ಈಗ ಏಕಪತ್ನಿ ವೃತಸ್ಥ ಕಡೆ ತಿರುಗಿದೆ.
ಸುಧಾಕರ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ‘ಇಲ್ಲಿ ಯಾರು ಸತ್ಯಹರಿಶ್ಚಂದ್ರರು ಅಲ್ಲ, ನನ್ನ ಹೆಸರನ್ನು ಅವರು ಯಾಕೆ ತಂದ್ರು? ಜೀವನದಲ್ಲಿ ನಾನು ಒಂದು ಬಾರಿ ತಪ್ಪು ಮಾಡಿದ್ದೇನೆ. ಅದನ್ನು ನಾನು ಧೈರ್ಯವಾಗಿ ಹೇಳಿದ್ದೇನೆ, ಭೂಮಿ ಮೇಲೆ ಇರುವ ಪ್ರತಿಯೊಂದು ಜೀವಿಗಳಿಗೆ ಸಹಜವಾದ ಪ್ರಕ್ರಿಯೆ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ? ಸುಧಾಕರ್ ಪ್ರಶ್ನೆ https://kannada.thebengalurulive.com/health-minister-sudhakar-questions-immoral-relationships-of-legislators/
ಇದನ್ನೂ ಓದಿ: ನನಗೆ ಒಬ್ಬಳೆ ಹೆಂಡತಿ: ಡಿಕೆ ಶಿವಕುಮಾರ್ ಟಾಂಗ್ https://kannada.thebengalurulive.com/i-have-one-wife-dk-shivakumar/