ಎಲ್ಲ ಶಾಸಕರ ತನಿಖೆ ನಡೆಯಲಿ
ಬೆಂಗಳೂರು:
ಎಲ್ಲ ಸಚಿವರು, ಶಾಸಕರ ತನಿಖೆ ನಡೆಯಲಿ, ಅನೈತಿಕ ಸಂಬಂಧ ಹಾಗೂ ವಿವಾಹ ಬಾಹಿರ ಸಂಬಂಧವೂ ಹೊರಬರಲಿ ಎಂದು ಸಚಿವ ಸುಧಾಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕುಮಾರಸ್ವಾಮಿ, ಸಿದ್ದರಾಮಯ್ಯ, ರಮೇಶ್ ಕುಮಾರ್, ಡಿಕೆ ಶಿವಕುಮಾರ್ ಇವರೆಲ್ಲರೂ ಸತ್ಯ ಹರಿಶ್ಚಂದ್ರರು, ಏಕಪತ್ನಿ ವೃತಸ್ಥರು ಸಮಾಜಕ್ಕೆ ಮಾದರಿಯಾದವರು. ಎಲ್ಲರ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಸವಾಲು ಹಾಕಿದ್ದಾರೆ.
ಯಾರು ಸಿಎಂ ಆಗಿದ್ದ ಸಂದರ್ಭದಲ್ಲಿ ಏನು ಮಾಡಿದ್ದರು ಎಲ್ಲವೂ ತನಿಖೆ ಆಗಿ ಬಿಡಲಿ. 225 ಜನರು ಶಾಸಕರು ತನಿಖೆಗೆ ಸಿದ್ದರಾಗಿ, ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ? ಎಲ್ಲವೂ ಸಾಬೀತು ಆಗಲಿ. ತನಿಖೆ ನಡೆದರೆ ಯಾರ ಚರಿತ್ರೆ ಏನು ಎಂದು ಗೊತ್ತಾಗುತ್ತೆ. ಎಲ್ಲ ಸಚಿವರು, ಶಾಸಕರ ತನಿಖೆ ನಡೆಯಲಿ, ಅನೈತಿಕ ಸಂಬಂಧ ಹಾಗೂ ವಿವಾಹ ಬಾಹಿರ ಸಂಬಂಧವೂ ಹೊರಬರಲಿ ಎಂದು ಸುಧಾಕರ್ ಸವಾಲು ಹಾಕಿದ್ದಾರೆ.
ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ, ರಮೇಶ್ ಕುಮಾರ್ ಸೇರಿದಂತೆ ಆಡಳಿತ ವಿರೋಧ ಪಕ್ಷದ ಶಾಸಕರಿಗೆ ಸವಾಲು ಸುಧಾಕರ್ ಬಹಿರಂಗ ಸವಾಲು ಹಾಕಿದರು. ನಾನು ಒಪನ್ ಆಗಿ ಚಾಲೆಂಜ್ ಮಾಡುತ್ತಿದ್ದೇನೆ, ಕುಮಾರಸ್ವಾಮಿ, ಸಿದ್ದರಾಮಯ್ಯ, ರಮೇಶ್ ಕುಮಾರ್, ಡಿಕೆ ಶಿವಕುಮಾರ್ ಇವರೆಲ್ಲರೂ ಸತ್ಯ ಹರಿಶ್ಚಂದ್ರರು, ಏಕಪತ್ನಿ ವೃತಸ್ಥರು ಸಮಾಜಕ್ಕೆ ಮಾದರಿಯಾದವರು. ಎಲ್ಲರ ಮೇಲೆ ತನಿಖೆ ಯಾಗಲಿ ಯಾರ್ಯಾರ ಬಂಡವಾಳ ಏನು ಅಂತ ಗೊತ್ತಾಗುತ್ತದೆ. ಇದನ್ನು ನಾನು ಎದುರಿಸಲು ಸಿದ್ದವಾಗಿದ್ದೆನೆ ಎಂದು ತಿಳಿಸಿದರು.