ಬೆಂಗಳೂರು:
ಸಚಿವ ಸುಧಾಕರ್ ತನಿಖೆ ಹೇಳಿಕೆ ಇದೀಗ ಇಡೀ ಬೆಂಕಿ ಹೊತ್ತಿಸಿದೆ. ಅನೇಕ ಕಾಂಗ್ರೆಸ್ ನಾಯಕರು ಸುಧಾಕರ್ ಮೇಲೆ ಮುಗಿಬಿದ್ದಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತನ್ನದೇ ದಾಟಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಶಿವಕುಮಾರ್ ಅವರು, ಸುಧಾಕರ್ ಹೇಳಿಕೆ ಬಹಳ ಸಂತೋಷ. ಇಂತಹ ನುಡಿಮುತ್ತುಗಳನ್ನ ರಾಜ್ಯಕ್ಕೆ ಕೊಟ್ಟಿದ್ದಾರೆ. ಅವನು ಏನೇ ಹೇಳಲಿ ನನಗೆ ಒಬ್ಬಳೆ ಹೆಂಡತಿ ಒಂದೆ ಸಂಸಾರ ಎಂದು ಟಾಂಗ್ ಕೊಟ್ಟಿದ್ದಾರೆ.
ಅಲ್ಲದೇ ಈ ಬಗ್ಗೆ ಉಳಿದಿದ್ದು ಸದನದ ಒಳಗೆ ಚರ್ಚೆ ಮಾಡುತ್ತೇನೆ ನಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿ ಇದನ್ನ ಸದನದಲ್ಲಿ ಚರ್ಚೆ ಮಾಡುತ್ತೇವೆ. ಎಲ್ಲಾ ಸದಸ್ಯರ ಮೇಲೆ ಅಲಿಗೇಶನ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಈಗಾಗಲೇ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ರೇವಣ್ಣ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲ ಸಚಿವರು, ಶಾಸಕರ ತನಿಖೆ ನಡೆಯಲಿ, ಅನೈತಿಕ ಸಂಬಂಧ ಹಾಗೂ ವಿವಾಹ ಬಾಹಿರ ಸಂಬಂಧವೂ ಹೊರಬರಲಿ ಎಂದು ಸಚಿವ ಸುಧಾಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 225 ಜನರು ಶಾಸಕರು ತನಿಖೆಗೆ ಸಿದ್ದರಾಗಿ, ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ? ಎಲ್ಲವೂ ಸಾಬೀತು ಆಗಲಿ. ತನಿಖೆ ನಡೆದರೆ ಯಾರ ಚರಿತ್ರೆ ಏನು ಎಂದು ಗೊತ್ತಾಗುತ್ತೆ ಎಂದಿದ್ದರು.
ಇದನ್ನೂ ಓದಿ: ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ? ಸುಧಾಕರ್ ಪ್ರಶ್ನೆ https://kannada.thebengalurulive.com/health-minister-sudhakar-questions-immoral-relationships-of-legislators/