Home ಬೆಂಗಳೂರು ನಗರ ಭಾರತೀಯ ಸೈನ್ಯದ ಸಹಯೋಗದೊಂದಿಗೆ ಶಿವಾಜಿನಗರದಲ್ಲಿ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ

ಭಾರತೀಯ ಸೈನ್ಯದ ಸಹಯೋಗದೊಂದಿಗೆ ಶಿವಾಜಿನಗರದಲ್ಲಿ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ

33
0

ಬೆಂಗಳೂರು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ವ್ಯಾಪ್ತಿಯಲ್ಲಿ ಬರುವ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ವಾಸಿಸುತ್ತಿರುವ ಬಡವರು ಹಾಗೂ ಮಾಧ್ಯಮವರ್ಗಗಳ ಕುಟುಂಬದವರನ್ನು ಕೋವಿಡ್ ಸೋಂಕಿನಿಂದ ರಕ್ಷಿಸಲು ಕೋವಿಡ್ ಕೇರ್ ಸೆಂಟರುಗಳನ್ನು ಹೆಚ್ಚು ಹೆಚ್ಚಾಗಿ ಸಜ್ಜುಗೊಳಿಸಲಾಗುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯ ಕೋವಿಡ್-19 ಮೇಲ್ವಿಚಾರಣೆ ಉಸ್ತುವಾರಿ ಹೊತ್ತಿರುವ ವಸತಿ ಸಚಿವ ಶ್ರೀ ವಿ.ಸೋಮಣ್ಣ ಹೇಳಿದರರು.

Indian Army sets up 100 bed COVID Care Centre in Bengaluru1

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸೆಂಟ್’ಜಾನ್ಸ್ ರಸ್ತೆಯ ಮಿಲಟರಿ ಕಾಂಪೌಂಡ್’ನಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಭಾರತೀಯ ಸೈನ್ಯದ ಸಹಯೋಗದೊಂದಿಗೆ ಕೊರೊನಾ ಸೊಂಕಿತರ ಚಿಕಿತ್ಸೆಗಾಗಿ ಸಜ್ಜುಗೊಳಿಸಲಾಗಿರುವ 100 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಆಲ್ ಅಮೀನ್ ಆಸ್ಪತ್ರೆಯಲ್ಲಿ ಶೇ.30ರಷ್ಟು ಹಾಸಿಗೆಗಳನ್ನು ಒದಗಿಸಲು ಆಡಳಿತ ಮಂಡಳಿ ಒಪ್ಪಿದ್ದು, ಆರಂಭಿಸಲಾಗುತ್ತಿರುವ ಆರೈಕೆ ಕೇಂದ್ರಕ್ಕೆ ಬರುವ ತುರ್ತು ರೋಗಿಗಳನ್ನು ಅಲ್ಲಿಗೆ ದಾಖಲಿಸಲು ವೈದ್ಯರಿಗೆ ಸೂಚಿಸಿದರು.

ಕೋವಿಡ್ ವ್ಯಾಪಿಸಿರುವ ಈ ಸಮಯದಲ್ಲಿ ಭಾರತೀಯ. ಸೈನ್ಯದವರು ಸೇವಾ ಮನೋಭಾವದಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಒತ್ತಾಸೆಯಾಗಿ ನಿಂತಿದ್ದಾರೆ, ಈ ಕೇಂದ್ರಕ್ಕೆ ಅಗತ್ಯವಿರುವ ಹೆಚ್ಚುವರಿ ಸೌಲಭ್ಯವನ್ನು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಒದಗಿಸಲಿದೆ ಎಂದೂ ಸಚಿವ ಶ್ರೀ ಸೋಮಣ್ಣ ಹೇಳಿದರು. ಈ ಆಸ್ಪತ್ರೆಯ 100 ಹಾಸಿಗೆಗಳಲ್ಲಿ 45 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ಇರುತ್ತದೆ ಎಂದು ಹೇಳಿದ ಸಚಿವರು ಆಸ್ಪತ್ರೆ ನುರಿತ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ಮಾತ್ರವಲ್ಲದೆ, ಆಂಬ್ಯುಲೆನ್ಸ್ ಸೌಕರ್ಯವನ್ನು ಹೊಂದಿದೆ ಎಂದು ತಿಳಿಸಿದರು.

Indian Army sets up 100 bed COVID Care Centre in Bengaluru2

ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಶ್ರೀ ಪಿ.ಸಿ.ಮೋಹನ್, ಶಾಸಕ ಶ್ರೀ ರಿಜ್ವಾನ್ ಅರ್ಷದ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಶ್ರೀ ಗೌರವ್ ಗುಪ್ತ, ಪೂರ್ವ ವಲಯದ ನೋಡಲ್ ಅಧಿಕಾರಿಗಳೂ ಆಗಿರುವ ವಸತಿ ಇಲಾಖೆಯ ಕಾರ್ಯದರ್ಶಿ ಶ್ರೀ ಮನೋಜ್ ಕುಮಾರ್ ಮೀನಾ, ಭಾರತೀಯ ಸೈನ್ಯದ ಮೇಜರ್ ಜನರಲ್ ಜೆ.ವಿ.ಪ್ರಸಾದ್, ಬ್ರಿಗೇಡಿಯರ್ ಟಿ.ಪಿ.ಎಸ್. ವಾರ್ಧ್ವ, ಪಾಲಿಕೆಯ ಜಂಟಿ ಆಯುಕ್ತೆ ಶ್ರೀಮತಿ ಪಲ್ಲವಿ ಹಾಗೂ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here