Home ಅಪರಾಧ ಐಫೋನ್ ಕಳ್ಳರ ‘ಖತರ್ನಾಕ್ ಗ್ಯಾಂಗ್’ ಸೆರೆ

ಐಫೋನ್ ಕಳ್ಳರ ‘ಖತರ್ನಾಕ್ ಗ್ಯಾಂಗ್’ ಸೆರೆ

29
0
iPhone thieves arrested in Bangalore

ಬೆಂಗಳೂರು:

ದುಬಾರಿ ಬೆಲೆಯ ಐಫೋನ್ ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಮೂವರು ಗ್ಯಾಂಗ್‌ನ್ನು ಬಂಧಿಸುವಲ್ಲಿ ವಿವೇಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೋರಿಪಾಳ್ಯದ ಮಹಮ್ಮದ್ ಸಕ್ಲೈನ್,ಪಾದರಾಯನಪುರದ ಸುಹೇಲ್ ಹಾ ಸಾಕೀಬ್‌ನನ್ನು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಬರೋಬ್ಬರಿ ೪೦ ಐಪೋನ್ ಸೇರಿ ೧೧೦ ಮೊಬೈಲ್ ಪೋನ್‌ಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿಭಾಗದ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ದುಬಾರಿ ಬೆಲೆಯ ಐಫೋನ್ ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ವಿವೇಕನಗರದಲ್ಲಿ ನಡೆದಿದ್ದ ಐಪೋನ್ ಕಳವು ಮಾಡಿದ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಇನ್ಸ್ ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here