Home Uncategorized IPL 2023: ಹೊಸ ಅವತಾರದಲ್ಲಿ ಗೇಲ್; ಐಪಿಎಲ್​ಗೆ ಯೂನಿವರ್ಸಲ್ ಬಾಸ್ ರೀ ಎಂಟ್ರಿ..!

IPL 2023: ಹೊಸ ಅವತಾರದಲ್ಲಿ ಗೇಲ್; ಐಪಿಎಲ್​ಗೆ ಯೂನಿವರ್ಸಲ್ ಬಾಸ್ ರೀ ಎಂಟ್ರಿ..!

11
0
Advertisement
bengaluru

ಐಪಿಎಲ್ 2023 (IPL 2023)ರ ತಯಾರಿ ಈಗಾಗಲೇ ಪ್ರಾರಂಭವಾಗಿದೆ. ಮುಂಬರುವ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಲು 10 ಫ್ರಾಂಚೈಸಿಗಳು ಕಾರ್ಯತಂತ್ರ ರೂಪಿಸಲು ಆರಂಭಿಸಿವೆ. ಅದಕ್ಕೂ ಮೊದಲು ಡಿ.23 ರಂದು ನಡೆಯಲ್ಲಿರುವ ಮಿನಿ ಹರಾಜಿನ (mini auction) ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮಿನಿ ಹರಾಜಿನಲ್ಲಿ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವುದರೊಂದಿಗೆ ತಮ್ಮ ತಂಡಗಳನ್ನು ಮತ್ತಷ್ಟು ಬಲಪಡಿಸಲು ನೋಡುತ್ತಿವೆ. ಇದಕ್ಕಾಗಿ, ತಮಗೆ ಅಗತ್ಯವಿರುವ ಆಟಗಾರರ ಮೇಲೆ ಹಣದ ಹೊಳೆ ಹರಿಸಲು ಸಿದ್ಧವಾಗಿವೆ. ಒಂದೆಡೆ ಐಪಿಎಲ್ ಹರಾಜಿಗೆ ದಿನಗಣನೇ ಆರಂಭವಾಗಿದ್ದರೆ, ಇನ್ನೊಂದೆಡೆ ಐಪಿಎಲ್​ನ ಮಾಜಿ ಆಟಗಾರರನ್ನು ಬೇರೆ ಬೇರೆ ರೂಪದಲ್ಲಿ ಮತ್ತೊಮ್ಮೆ ಐಪಿಎಲ್​ಗೆ ಕರೆತರುವ ಯತ್ನಗಳು ನಡೆಯುತ್ತಿವೆ. ಇದರ ಅಂಗವಾಗಿ ಹಲವು ಫ್ರಾಂಚೈಸಿಗಳು ತಮ್ಮೊಂದಿಗೆ ಹಲವು ವರ್ಷ ಆಡಿದ ಪ್ರತಿಭಾವಂತ ಆಟಗಾರರಿಗೆ ತಮ್ಮ ತಂಡದಲ್ಲಿಯೇ ವಿವಿಧ ಹುದ್ದೆಗಳನ್ನು ನೀಡುತ್ತಿವೆ. ಇದರ ಹೊರತಾಗಿ ಐಪಿಎಲ್​ನ ಮನರಂಜನೆಯನ್ನು ಹೆಚ್ಚಿಸುವ ಸಲುವಾಗಿ ಕೆಲವು ಖ್ಯಾತ ಆಟಗಾರರನ್ನು ಮತ್ತೆ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವಂತೆ ಮಾಡುವ ಯತ್ನ ನಡೆದಿದೆ. ಅಂತಹ ಕೆಲವು ಆಟಗಾರರಲ್ಲಿ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ (Chris Gayle) ಕೂಡ ಸೇರಿದ್ದಾರೆ.

2. ಹೊಸ ಅವತಾರದಲ್ಲಿ ಗೇಲ್

ಮೈದಾನಕ್ಕಿಳಿದಾಗಲೆಲ್ಲ ತನ್ನ ಅಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್​ಗಳ ಬೆವರಿಳಿಸುತ್ತಿದ್ದ ಈ ಕೆರಿಬಿಯನ್ ದೈತ್ಯ, ಐಪಿಎಲ್​ನಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. ಆದರೆ ಈ ಆವೃತ್ತಿಯ ಐಪಿಎಲ್​ನಲ್ಲಿ ಗೇಲ್​ಗೆ ಹೊಸ ಜವಬ್ದಾರಿವಹಿಸಲಾಗುತ್ತಿದ್ದು, ಯೂನಿವರ್ಸಲ್ ಬಾಸ್ ವಿಶ್ಲೇಷಕರಾಗಿ ಕಾಣಿಸಿಕೊಳ್ಳಲಿದ್ದಾರೆ.

43 ಎಸೆತಗಳಲ್ಲಿ 13 ಸಿಕ್ಸರ್, 7 ಓವರ್‌ಗಳಲ್ಲಿ 108 ರನ್! ಐಪಿಎಲ್ ಹರಾಜಿಗೂ ಮುನ್ನ ಸ್ಫೋಟಕ ಬ್ಯಾಟಿಂಗ್

bengaluru bengaluru

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ಹೊಂದಿರುವ ಕ್ರಿಸ್ ಗೇಲ್, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ತನ್ನ ಬಿರುಸಿನ ಬ್ಯಾಟಿಂಗ್​ನಿಂದಲೇ ಹೆಸರುವಾಸಿಯಾಗಿದ್ದರು. ಐಪಿಎಲ್‌ನಲ್ಲಿ ಇದುವರೆಗೆ ಮೂರು ವಿಭಿನ್ನ ತಂಡಗಳ ಭಾಗವಾಗಿದ್ದ ಗೇಲ್, ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆ ಬರೆದಿದ್ದರು. ಈಗ ಐಪಿಎಲ್​ಗೆ ಮತ್ತೆ ಎಂಟ್ರಿಕೊಡುತ್ತಿರುವ ಗೇಲ್ ವಿಶ್ಲೇಷಕನ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

3. ಅಂತಿಮವಾಗಿ ಪಂಜಾಬ್ ಪರ ಆಡಿದ್ದ ಗೇಲ್

ಕ್ರಿಸ್ ಗೇಲ್ ಕಳೆದ ಬಾರಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಪಂಜಾಬ್‌ಗಿಂತ ಮೊದಲು, ಇತರ ಎರಡು ತಂಡಗಳ ಪರವಾಗಿ ಆಡಿದ್ದರು. ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಗೇಲ್, ಈ ತಂಡದ ಪರ ಮೂರು ಸೀಸನ್‌ ಆಡಿದ್ದರು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದ ಗೇಲ್, ಅಂತಿಮವಾಗಿ ಪಂಜಾಬ್ ಕಿಂಗ್ಸ್‌ ಪರ ಕಾಣಿಸಿಕೊಂಡಿದ್ದರು. ಆದರೆ ಐಪಿಎಲ್‌ನಲ್ಲಿ ಗೇಲ್ ಬ್ಯಾಟ್ ಬರು ಬರುತ್ತಾ ಸೈಲೆಂಟ್ ಆದ ಕಾರಣ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಕಡಿಮೆಯಾಯಿತು.

ಐಪಿಎಲ್‌ನಲ್ಲಿ 142 ಪಂದ್ಯಗಳನ್ನು ಆಡಿರುವ ಕೆರಿಬಿಯನ್ ಬಿರುಗಾಳಿ ಬ್ಯಾಟ್ಸ್‌ಮನ್ ಗೇಲ್, 4965 ರನ್ ದಾಖಲಿಸಿದ್ದಾರೆ. ಗೇಲ್ ಐಪಿಎಲ್‌ನಲ್ಲಿ 148.96 ಸ್ಟ್ರೈಕ್ ರೇಟ್ ಮತ್ತು 39.72 ಸರಾಸರಿಯನ್ನು ಹೊಂದಿದ್ದರು. ಅಲ್ಲದೆ ಐಪಿಎಲ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ (175 ರನ್) ಬಾರಿಸಿರುವ ದಾಖಲೆಯೂ ಗೇಲ್ ಹೆಸರಿನಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here